- ಅಧ್ಯಕ್ಷ ಪ್ರಶಾಂತ್ ಡಿ’ಕೋಸ್ತ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಆಯ್ಕೆ
ಉಪ್ಪಿನಂಗಡಿ: ಇಲ್ಲಿನ ವಾಣಿಜ್ಯ ಮತ್ತು ಕೈಗಾರಿಕಾ ಸಂಘ (ವರ್ತಕ ಸಂಘ)ದ ನೂತನ ಅಧ್ಯಕ್ಷರಾಗಿ ಪ್ರಶಾಂತ್ ಡಿ’ಕೋಸ್ತ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಯೂನಿಕ್ ಆಯ್ಕೆಗೊಂಡಿದ್ದಾರೆ. ಅಧ್ಯಕ್ಷ ಪ್ರಶಾಂತ್ ಡಿ’ಕೋಸ್ತ ೭ನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಸಂಘದ ಅಧ್ಯಕ್ಷ ಹಾರೂನ್ ರಶೀದ್ ಅಗ್ನಾಡಿ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿ ಉಳಿದಂತೆ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಶಬೀರ್ ಕೆಂಪಿ, ಜೊತೆ ಕಾರ್ಯದರ್ಶಿಯಾಗಿ ನಿತ್ಯಾನಂದ ಕಿಣಿ, ಕೋಶಾಧಿಕಾರಿಯಾಗಿ ಲೋಕೇಶ್ ಆಚಾರ್ಯರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಜಲೀಲ್ ಮುಕ್ರಿ, ಜಗದೀಶ್ ಶೆಟ್ಟಿ, ಕೈಲಾರ್ ರಾಜಗೋಪಾಲ ಭಟ್, ಇರ್ಷಾದ್ ಯು.ಟಿ. ಸಲೀಂ ಇಂಡಿಯನ್, ಮಹಮ್ಮದ್ ಮುಸ್ತಾಫ, ಹಾರೂನ್ ರಶೀದ್ ಅಗ್ನಾಡಿ, ಝಕಾರಿಯಾ ಕೊಡಿಪ್ಪಾಡಿ, ರಿಯಾಜ್ ಇಂಡಿಯನ್, ಇಕ್ಬಾಲ್ ಪಾಂಡೇಲ್ರನ್ನು ಆಯ್ಕೆ ಮಾಡಲಾಯಿತು.
ಸಂಘದ ಕಾನೂನು ಸಲಹೆಗಾರರಾಗಿ ಅಶ್ರಫ್ ಅಗ್ನಾಡಿ, ಮಾದ್ಯಮ ಸಲಹೆಗಾರರಾಗಿ ಉದಯ ಕುಮಾರ್ ಯು.ಎಲ್, ಹಾಗೂ ಅರುಣ್ ಗೋಡ್ವಿನ್ ಮಿನೇಜಸ್ರವರನ್ನು ಆಯ್ಕೆ ಮಾಡಲಾಯಿತು.
ಗತ ಸಾಲಿನ ಕಾರ್ಯದರ್ಶಿ ಝಕಾರಿಯಾ ಕೊಡಿಪ್ಪಾಡಿ ವರದಿ ವಾಚಿಸಿ, ಕೋಶಾಧಿಕಾರಿ ಕೈಲಾರ್ ರಾಜಗೋಪಾಲ ಭಟ್ ಲೆಕ್ಕ ಪತ್ರ ಮಂಡಿಸಿದರು. ಜಲೀಲ್ ಮುಕ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದ ಮುಖ್ಯ ವಾಹಿನಿಯಲ್ಲಿ ವರ್ತಕ ಸಮುದಾಯದ ಕೊಡುಗೆ ಮಹತ್ತರದ್ದಾಗಿದೆ ಎಂದರು.
ಸಭೆಯಲ್ಲಿ ವರ್ತಕರಾದ ಸುರೇಶ್ ಕೆ, ದಿನೇಶ್ ಶೆಣೈ, ಯು.ಟಿ. ಆಸಿಫ್, ಯು.ಟಿ. ತೌಶಿಫ್, ರೂಪೇಶ್ ರೈ ಮೊದಲಾದವರು ಉಪಸ್ಥಿತರಿದ್ದರು. ಕೆ. ಜಗದೀಶ್ ಶೆಟ್ಟಿ ಸ್ವಾಗತಿಸಿ, ಅಬ್ದುಲ್ ರಹಿಮಾನ್ ವಂದಿಸಿದರು.