HomePage_Banner
HomePage_Banner
HomePage_Banner
HomePage_Banner

ಸಾರಿಗೆ ನೌಕರರ ಮುಷ್ಕರ: ಉಪ್ಪಿನಂಗಡಿಯಲ್ಲಿ ಖಾಸಗಿ ಬಸ್ ಸೇವೆ

ಉಪ್ಪಿನಂಗಡಿ: ಸಾರಿಗೆ ನೌಕರರ ಮುಷ್ಕರದಿಂದಾಗಿ ಎ. ೭ರಂದು ಬೆಳಿಗ್ಗಿನಿಂದಲೇ ಉಪ್ಪಿನಂಗಡಿಯ ಬಸ್ ನಿಲ್ದಾಣದಲ್ಲಿ ಸರಕಾರಿ ಬಸ್ಸುಗಳು ಕಣ್ಮರೆಯಾಗಿದ್ದು, ಖಾಸಗಿ ಬಸ್ಸುಗಳವರು ನಿರಂತರ ಸೇವೆ ನೀಡುತ್ತಿರುವುದು ಕಂಡು ಬಂತು.

ಮಂಗಳೂರು ಮತ್ತು ಪುತ್ತೂರು ಕಡೆಗೆ ಖಾಸಗಿ ಬಸ್‌ಗಳು ಓಡಾಟ ನಡೆಸಿರುವುದು ಕಂಡು ಬಂದಿದೆ. ಉಪ್ಪಿನಂಗಡಿಯಿಂದ ಗ್ರಾಮೀಣ ಪ್ರದೇಶಗಳಾದ ಬಂದಾರು, ಕಕ್ಕೆಪದವು, ಬಾಜಾರು ಮೊದಲಾದ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸುಗಳು ಆ ಪ್ರದೇಶಗಳ ಸವಾರಿ ಕಡಿತಗೊಳಿಸಿ ನಗರ ಪ್ರದೇಶಗಳ ಪ್ರಯಾಣಿಕರಿಗೆ ಸೇವೆ ನೀಡಲು ಒತ್ತು ಕೊಟ್ಟಿದ್ದರು.

ಹೀಗಾಗಿ ಗ್ರಾಮಾಂತರ ಪ್ರದೇಶದ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿರುವುದು ಕಂಡು ಬಂತು. ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ಮಧ್ಯೆ ಟೆಂಪೋಗಳು ಸರ್ವಿಸ್ ನಡೆಸಿದ್ದು, ಆ ಕಡೆಗೆ ಹೋಗುವ ಪ್ರಯಾಣಿಕರು ಟೆಂಪೋ ಪ್ರಯಾಣ ಬೆಳೆಸಿದ್ದರು. ನೆಲ್ಯಾಡಿ, ಉದನೆ, ಶಿರಾಡಿ ಭಾಗದ ಪ್ರಯಾಣಿಕರು ಟೂರಿಸ್ಟ್ ಸರ್ವೀಸ್ ಜೀಪುಗಳ ಉಪಯೋಗ ಪಡೆದುಕೊಂಡಿರುವುದು ಕಂಡು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.