ಪುತ್ತೂರು: ಸಾಲ್ಮರ ಸಾದಾತ್ ಮಹಲ್ ನಲ್ಲಿ ಅಂತ್ಯ ವಿಶ್ರಾಂತಿಯನ್ನು ಹೊಂದಿರುವ ಮರ್ಹೂಂ ಸಯ್ಯಿದ್ ಹಸನ್ ಕೋಯ ತಂಙಳ್ ರವರ ಮಖಾಂ ವಠಾರದಲ್ಲಿರುವ ದಾರುಲ್ ಹಸನಿಯಾ ವಿದ್ಯಾಸಂಸ್ಥೆಯ ಅಧೀನದ ಮರಿಯಂ ಹಿಫ್ಲುಲ್ ಖುರ್ಆನ್ ಕಾಲೇಜ್ನ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಧಾರ್ಮಿಕ ಪ್ರಭಾಷಣ, ಖತಮುಲ್ ಖುರ್ಆನ್, ವಿಶೇಷ ಪ್ರಾರ್ಥನೆ ಸಭೆಯು ಎ.೧೧ ರಂದು ಸಾಲ್ಮರ ಸಾದಾತ್ ಮಹಲ್ ನಲ್ಲಿ ನಡೆಯಲಿದೆ ಎಂದು ವ್ಯವಸ್ಥಾಪಕ ಅನ್ವರ್ ಸ್ವಾದಿಕ್ ಮುಸ್ಲಿಯಾರ್ ಪುತ್ತೂರು ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಎ. ೧೧ ರಂದು ಬೆಳಿಗ್ಗೆ ಗಂಟೆ ೯ ಕ್ಕೆ ಧ್ವಜಾರೋಹಣ ಹಾಗೂ ದರ್ಗಾ ಝಿಯಾರತ್ ನೊಂದಿಗೆ ಕಾರ್ಯಕ್ರಮ ಆರಂಭ ಗೊಳ್ಳಲಿದ್ದು, ಸಂಜೆ ಗಂಟೆ ೪ ರಿಂದ ಖತಮುಲ್ ಖುರ್ ಆನ್ , ಪ್ರಾರ್ಥನಾ ಸಭೆ ನಡೆಯಲಿದೆ. ಪ್ರಾರ್ಥನೆ ನೇತೃತ್ವವನ್ನು ಸಯ್ಯದ್ ಹಬೀಬುರ್ರಹ್ಮಾನ್ ತಂಙಳ್ ಮುಕ್ವೆ ವಹಿಸಲಿದ್ದಾರೆ. ರಾತ್ರಿ ಗಂಟೆ ೭. ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ ಸ್ವಾಲಿಹ್ ಬತ್ತೇರಿ ಮುಖ್ಯ ಪ್ರಭಾಷಣ ನಡೆಸಲಿದ್ದು, ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಶರಫುದ್ದೀನ್ ತಂಙಳ್ ಸಾಲ್ಮರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಹಲವಾರು ಉಲಮಾ,ಉಮರಾ ನಾಯಕರು,ಸಾದಾತ್ ಗಳು, ಸಾಮಾಜಿಕ ಗಣ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ಕೋವಿಡ್ ಮಾರ್ಗಸೂಚಿ ಪಾಲಿಸಿಕೊಂಡು ನಡೆಯಲಿದೆ ಎಂದು ಅವರು ತಿಳಿಸಿದರು.
ದ್ವಿತೀಯ ವಾರ್ಷಿಕೋತ್ಸವ ಆಚರಿಸುವ ಈ ವಿದ್ಯಾಸಂಸ್ಥೆ ಯಲ್ಲಿ ಇಂದು ಒಟ್ಟು ೩೫ ವಿದ್ಯಾರ್ಥಿಗಳು ಪವಿತ್ರ ಖುರ್ ಆನ್ ಕಂಠಪಾಠ ದ ಜೊತೆಗೆ ಧಾರ್ಮಿಕ ದಅವಾ ಕೋರ್ಸು ಮತ್ತು ಲೌಕಿಕ ಶಿಕ್ಷಣವನ್ನೂ ಪಡೆಯುತ್ತಿದ್ದಾರೆ. ಎಪ್ರಿಲ್ ೧೧ ರಂದು ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಧರ್ಮಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ವಿನಂತಿಸಿದರು. ಪ್ರತಿಕಾಗೋಷ್ಠಿಯಲ್ಲಿ ದಾರುಲ್ ಹಸನಿಯಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಹಸೈನಾರ್ ಹಾಜಿ ಸಿಟಿ ಬಝಾರ್ ಪುತ್ತೂರು, ಸ್ವಾಗತ ಸಮಿತಿ ಅಧ್ಯಕ್ಷ ಬಾಯಾರ್ ಪುತ್ತು ಹಾಜಿ , ಅಬ್ದುಲ್ ರಹಮಾನ್ ಹಾಜಿ ಉಪಸ್ಥಿತದ್ದರು.