HomePage_Banner
HomePage_Banner
HomePage_Banner
HomePage_Banner

ರಜತ ಸಂಭ್ರಮದಲ್ಲಿ ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘ | ಏ.9 ರಂದು ರಜತ ಮಹೋತ್ಸವ , ರಜತಾಮೃತ ಕಟ್ಟಡಗಳ ಉದ್ಘಾಟನಾ ಸಮಾರಂಭ- ಸನ್ಮಾನ

ನಿಡ್ಪಳ್ಳಿ: ಅಮುಲ್ ಮಾದರಿ ತತ್ವದಡಿಯಲ್ಲಿ 1993 ರಲ್ಲಿ ಪಾಣಾಜೆ ಗ್ರಾಮದ ಹೃದಯ ಭಾಗ ಆರ್ಲಪದವಿನಲ್ಲಿ ಪ್ರಾರಂಭವಾದ ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘ ಬೆಳೆಯುತ್ತಾ  ಬೆಳೆಯುತ್ತಾ ಇದೀಗ ಈ ಭಾಗದ ಹೈನುಗಾರ ಬಂಧುಗಳ ಬಾಳಿಗೆ ಆಶಾದಾಯಕವಾಗಿ ಬೆಳೆಯುತ್ತಿದೆ.
ಇಲ್ಲಿ ಸ್ವಯಂಚಾಲಿತ ಹಾಲು ಶೇಖರಣೆ, ಸಾಂದ್ರ ಶೀತಲೀಕರಣ ಕೇಂದ್ರ ಅಲ್ಲದೆ ಇಡೀ ವಿಶ್ವದಲ್ಲೇ ಪ್ರಪ್ರಥಮವಾಗಿ ಪಶುಗಳ ಒಣ  ಮೇವಿಗೆ ಭತ್ತದ ಹುಲ್ಲಿಗೆ ಪರ್ಯಾಯವಾಗಿ ಬಳಸಲು ಅಡಿಕೆ ಹಾಳೆ ಸಂಸ್ಕರಣ ಘಟಕ ಆರಂಭಿಸಿ ಜನಮನ್ನಣೆ ಗಳಿಸಿದೆ.ಈ ಎಲ್ಲಾ ಸಾಧನೆ ಮತ್ತು ಹೆಚ್ಚು ಗುಣಮಟ್ಟದ ಹಾಲು ಉತ್ಪಾದನಾ ಸಂಘ ಎಂದು ಗುರುತಿಸಿ ದ.ಕ.ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್ ವತಿಯಿಂದ ಹಲವಾರು ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿದೆ.ಈ ಎಲ್ಲಾ ಸಾಧನೆಯ ಹಾದಿಯಲ್ಲಿ ಸಾಗುತ್ತಾ ಇದೀಗ ರಜತ ಸಂಭ್ರಮದ ಹೊಸ್ತಿಲಲ್ಲಿರುವ ಈ ಸಂಘದ ಅಭಿವೃದ್ಧಿಯಲ್ಲಿ ಅಧ್ಯಕ್ಷರ, ಆಡಳಿತ ಮಂಡಳಿ ಸದಸ್ಯರ, ಸಿಬ್ಬಂದಿಗಳ ಪೂರ್ಣ ಸಹಕಾರ ಕಾರಣವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

 ರಜತ ಮಹೋತ್ಸವ :
ರಜತ ಸಂಭ್ರಮದಲ್ಲಿ ಇದರ ರಜತ ಮಹೋತ್ಸವ ಮತ್ತು ರಜತಾಮೃತ ಕಟ್ಟಡಗಳ ಉದ್ಘಾಟನಾ ಸಮಾರಂಭ ‌ಏ.9 ರಂದು ಬೆಳಿಗ್ಗೆ ಗಂಟೆ 10.30 ಕ್ಕೆ ಸಂಘದ ಆವರಣದಲ್ಲಿ ನಡೆಯಲಿದೆ.

ಪುತ್ತೂರು ಶಾಸಕ ಸಂಜೀವ ಮಠಂದೂರು ರಜತಾಮೃತ ಸಭಾಭವನ ಉದ್ಘಾಟಿಸಲಿದ್ದಾರೆ.ದ.ಕ.ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರು ಆಡಳಿತ ಕಚೇರಿ ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ರಜತಾಮೃತ ಕಟ್ಟಡ ಉದ್ಘಾಟಿಸಲಿದ್ದಾರೆ.ದ.ಕ.ಹಾಲು ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಅವಿಷ್ಕರಿಸಿದ ಅಡಿಕೆ ಹಾಳೆ  ಹುಡಿ ಮಾಡುವ ಯಂತ್ರ ಉದ್ಘಾಟಿಸಲಿರುವರು.ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಭದ್ರತಾ ಕೊಠಡಿ ಉದ್ಘಾಟಿಸಲಿರುವರು.

ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ದ.ಕ ಹಾಲು ಒಕ್ಕೂಟದ ನಿರ್ದೇಶಕರುಗಳಾದ  ಬಿ.ನಿರಂಜನ್ ಬಾವಂತ ಬೆಟ್ಟು , ಪದ್ಮನಾಭ ಶೆಟ್ಟಿ ಅರ್ಕಜೆ, ಎಸ್.ಬಿ.ಜಯರಾಂ ರೈ, ಸವಿತಾ ಎನ್.ಶೆಟ್ಟಿ, ಬಿ. ಸುಧಾಕರ ರೈ, ದ.ಕ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಟಿ.ಸುರೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ,  ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಜಿ.ನಾಯಕ್, ಪಶುಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಪ್ರಸನ್ನ ಕುಮಾರ್ ಟಿ.ಜಿ, ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೊಳಿಲ್ಲಾಯ, ತಾಲೂಕು ಪಂಚಾಯತ್ ಸದಸ್ಯೆ ಮೀನಾಕ್ಷಿ ಮಂಜುನಾಥ, ಪಾಣಾಜೆ ಸಿ.ಎ ಬ್ಯಾಂಕ್ ಅಧ್ಯಕ್ಷ ಪದ್ಮನಾಭ ಬೋರ್ಕರ್, ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಅಲ್ಲದೆ ದ.ಕ ಹಾಲು ಒಕ್ಕೂಟದ ಪುತ್ತೂರು ವಲಯದ ಉಪ ವ್ಯವಸ್ಥಾಪಕರುಗಳಾದ ಡಾ.ಯಂ.ರಾಮಕೃಷ್ಣ ಭಟ್, ಡಾ.ಸತೀಶ್ ರಾವ್, ಯಂ. ಶ್ರೀನಿವಾಸ ಸಹಕಾರ ನೀಡಲಿದ್ದಾರೆ.

ಸನ್ಮಾನಿಸಲ್ಪಡುವವರು; ಬೆಂಗಳೂರು ಎನ್.ಐ.ಎ.ಎನ್.ಪಿ ಪ್ರಧಾನ ವಿಜ್ಞಾನಿ ಡಾ.ಎನ್.ಕೆ.ಶಿವಕುಮಾರ್, ಬೆಂಗಳೂರು ಕೆ.ಎಂ.ಎಫ್ ನಿವೃತ್ತ ಹಿರಿಯ ಉಪ ವ್ಯವಸ್ಥಾಪಕ ಸಿ.ಪಿ.ರೆಡ್ಡಿ, ಸಂಘದ ಸ್ಥಾಪಕಾಧ್ಯಕ್ಷ ಕೃಷ್ಣ ಪ್ರಕಾಶ್ ಪಿ ಅರ್ಧಮೂಲೆ, ಮಾಜಿ ಅಧ್ಯಕ್ಷ ಶಿವಶಂಕರ ಭಟ್ ಸಿ.ಎಚ್ ಕೋಟೆ, ದಾನಿಗಳಾದ ಶಂಕರನಾರಾಯಣ ಭಟ್ ಕೆ ಕೊಂಡಲ್ಕಾನ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಸಂಘದ ಅಧ್ಯಕ್ಷ ನಾರಾಯಣ ಪ್ರಕಾಶ್ ಕೆ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ ಅಡಿಗ.ಎ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   
      
ರಜತಾಮೃತ ಕಟ್ಟಡಗಳ ಉದ್ಘಾಟನಾ ಸಮಾರಂಭದ ಮೊದಲು ಬೆಳಿಗ್ಗೆ ಗಂಟೆ 9.30 ರಿಂದ’ ಸ್ವರ ಸಿಂಧೂರಿ’ ಅಮೃತ ಅಡಿಗ ಪಾಣಾಜೆ ಇವರ ಸಾರಥ್ಯದಲ್ಲಿ ಯಕ್ಷಗಾನ- ನಾದ- ವಾದ್ಯ- ವೈವಿಧ್ಯ ಕಾರ್ಯಕ್ರಮ ಜರಗಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.