HomePage_Banner
HomePage_Banner
HomePage_Banner
HomePage_Banner

ಏ.10: ಸೀತಾರಾಮ್ ಭಟ್ ಪೆರ್ನಾಜೆ ಸ್ಮೃತಿ, ಶಿಲಾಮೂರ್ತಿ, ನೂತನ ಧ್ವಜಸ್ತಂಭ ಲೋಕಾರ್ಪಣೆ

ಪೆರ್ನಾಜೆ: ೧೯೫೦ರ ದಶಕದಲ್ಲಿ ಗ್ರಾಮೀಣ ಶಿಕ್ಷಣದ ಅವಶ್ಯಕತೆಯನ್ನು ಮನಗಂಡು ಸಾಕ್ಷಾತ್ಕರಿಸಿದ ಅಕ್ಷರಋಷಿ ಪೆರ್ನಾಜೆ ಶ್ರೀ ಸೀತಾರಾಮ ಭಟ್ಟರು ಸುಳ್ಯ ,ಪುತ್ತೂರು ತಾಲೂಕುಗಳ ಗಡಿಭಾಗದ ಪೆರ್ನಾಜೆ ಎಂಬಲ್ಲಿ ಶ್ರೀ ಸೀತಾರಾಘವ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಸ್ಥಾಪಿಸಿ ಸಹಸ್ರಾರು ಮಕ್ಕಳಿಗೆ ವಿದ್ಯಾದಾತರಾಗಿ ಮೆರೆದವರು.

೧೯೮೪ ರಲ್ಲಿ ಶ್ರೀ ಸೀತಾರಾಘವ ಪದವಿಪೂರ್ವ ಕಾಲೇಜು ಅನುಷ್ಠಾನಕ್ಕೆ ಬಂದಿತು ಏ.೧೦ರಂದು ಸೀತಾರಾಮ್ ಭಟ್ ಪೆರ್ನಾಜೆ ಸ್ಮೃತಿ ಶಿಲಾಮೂರ್ತಿ, ನೂತನ ಧ್ವಜಸ್ತಂಭ ಲೋಕಾರ್ಪಣೆ ಕಾರ್ಯಕ್ರಮ ಶ್ರೀ ಸೀತಾರಾಮ ಭಟ್ ಸುವರ್ಣ ರಂಗಮಂದಿರದಲ್ಲಿ ನಡೆಯಲಿದೆ.

ಪೂಜ್ಯರ ನೆನಪು ಚಿರಸ್ಥಾಯಿಯಾಗಿರಿಸಲು ಸಂಸ್ಥೆಯ ಮುಖ್ಯ ದ್ವಾರದಲ್ಲಿ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಿ ಲೋಕಾರ್ಪಣೆಯನ್ನು ಡಾ.ಪ್ರಭಾಕರ್ ಭಟ್ ಕಲ್ಲಡ್ಕ ನಿರ್ವಹಿಸುವರು. ನೂತನ ಧ್ವಜಸ್ತಂಭವನ್ನು ಸಚಿವ ಅಂಗಾರ ಎಸ್ ಲೋಕಾರ್ಪಣೆ ಮಾಡಲಿರುವರು, ನೂತನ ಧ್ವಜಸ್ತಂಭವನ್ನು ಶ್ರೀಮತಿ ಸಾವಿತ್ರಿ ರಾಮಚಂದ್ರಭಟ್ಟರು ಕೊಡುಗೆಯಾಗಿ ನೀಡಿದವರು. ಸಭಾಕಾರ್ಯಕ್ರಮವನ್ನು ಶ್ರೀ ಸಂಜೀವ ಮಠಂದೂರು ಶಾಸಕರು ಪುತ್ತೂರು ವಿಧಾನ ಸಭಾ ಕ್ಷೇತ್ರ ಅವರು ಉದ್ಘಾಟಿಸಲಿದ್ದು, ಅತಿಥಿಗಳಾಗಿ  ಸಿ ಲೋಕೇಶ್ ಕೆ ಎಸ್ ಕ್ಷೇತ್ರಶಿಕ್ಷಣಾಧಿಕಾರಿಗಳು ಪುತ್ತೂರು, ಡಾ.ಮಹೇಶ್ ಪ್ರಸನ್ನ ಪ್ರಾಚಾರ್ಯರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಪುತ್ತೂರು, ಪಿ ರಮೇಶ್ ರೈ ಸಾಂತ್ಯ ಅಧ್ಯಕ್ಷರು ಗ್ರಾಮ ಪಂಚಾಯತ್ ನೆಟ್ಟಣಿಗೆ ಮುಡ್ನೂರು, ಸಮಾರಂಭದ ಅಧ್ಯಕ್ಷರಾಗಿ ಶಂಕರ್ ನಾರಾಯಣ ಭಟ್ ಪೆರ್ನಾಜೆ ಅಧ್ಯಕ್ಷರು ಶ್ರೀ ಸೀತಾರಾಘವ ವಿದ್ಯಾವರ್ಧಕ ಸಂಘ (ರಿ) ಪೆರ್ನಾಜೆ ಮತ್ತು ಸದಸ್ಯರು ಭಾಗವಹಿಸಲಿರುವರು. ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಮತಿ ಡಿ.ಸುಕನ್ಯಾ ಹಾಗೂ ಶಿಲಾಮೂರ್ತಿಯ ಶಿಲ್ಪಿ ಶ್ರೀ ಶಿವಸುಬ್ರಹ್ಮಣ್ಯ ರವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಗುವುದು ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ಮಕ್ಕಳಿಂದ ಬಯಲು ಸಮೂಹ ನೃತ್ಯ ಭರತನಾಟ್ಯ ಅಪರಾಹ್ನ ಮಕ್ಕಳಿಂದ ಸಾಂಸ್ಕೃತಿಕ ವೈಭವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಡೆಯಲಿದೆ. ಎಂದು ಮಳಿ ರಾಮಚಂದ್ರಭಟ್ ಕೆ ಆರ್ ಗೋಪಾಲಕೃಷ್ಣ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.