ಪುತ್ತೂರು: ಶಾಫಿಂಗ್ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಹೊಸಬಗೆಯನ್ನು ಪರಿಚಯಿಸಿದ ಕೀರ್ತಿ ಮಂಗಲ್ ಸ್ಟೋರ್ಗೆ ಸಲ್ಲುತ್ತದೆ. ನಂಬಿಕೆ ಮತ್ತು ನಗುಮೊಗದ ಸೇವೆಯ ಮೂಲಕ ಗ್ರಾಹಕರ ಪ್ರೀತಿ ಗಳಿಸಿದ ನೆಹರೂನಗರದ ಮಂಗಲ್ಸ್ಟೋರ್ಸ್ನಲ್ಲಿ ಗ್ರಾಹಕ ಸೌಲಭ್ಯಗಳ ವಿಸ್ತರಣೆಯಾಗುತ್ತಿದೆ. ಗ್ರಾಹಕರಿಗೆ ಇನ್ನಷ್ಟು ಸೌಲಭ್ಯಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಸಲುವಾಗಿ ಮೆಡಿಕಲ್ ಶಾಪ್, ವೆಟರ್ರ್ನರಿ ಫಾರ್ಮಸ್ಸಿ ಹಾಗೂ ಪುತ್ತೂರಿನಲ್ಲಿ ಪ್ರಪ್ರಥಮವಾಗಿ ಖಾದಿ ಬಟ್ಟೆಗಳ ಭಂಡಾರ ಇಲ್ಲಿ ಕಾರ್ಯಾರಂಭಗೊಳ್ಳುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸೇವಾ ಸೌಲಭ್ಯಗಳನ್ನು ಮತ್ತು ಮಾರಾಟ ವ್ಯವಸ್ಥೆಯನ್ನು ಸಂಸ್ಥೆ ವಿಸ್ತರಿಸುತ್ತಿದೆ.
ಗ್ರಾಹಕ ಸ್ನೇಹಿ ಸಂಸ್ಥೆ
ಕೊರೋನಾ ಲಾಕ್ಡೌನ್ ಸಂದರ್ಭದಲ್ಲೂ ಗ್ರಾಹಕರಿಗೆ ತೊಂದರೆಯಾಗದಂತೆ ದಿನಸಿ ಸಾಮಾಗ್ರಿಗಳನ್ನು ನ್ಯಾಯಬೆಲೆಗೆ ಮಾರಾಟ ಮಾಡಿದ ಸಂಸ್ಥೆ ಎಂಬ ಹೆಗ್ಗಳಿಕೆ ಮಂಗಲ್ ಸ್ಟೊರ್ಸ್ಗಿದೆ. ಕಷ್ಟಕರ ಸಂದರ್ಭದಲ್ಲೂ ದರ ಏರಿಕೆ ಮಾಡದೆ ಗ್ರಾಹಕ ಸ್ನೇಹಿಯಾಗಿ ಸಂಸ್ಥೆ ವ್ಯವಹಾರ ನಡೆಸಿದೆ. ಕೃಷಿ ಮತ್ತು ರೈತರಿಗೆ ವಿಶ್ವಾಸನೀಯವಾದ ಕೃಷಿಮಿತ್ರ ಮಳಿಗೆಯು ಈಗಾಗಲೇ ರೈತರ ಪ್ರೀತಿಗೆ ಪಾತ್ರವಾಗಿದೆ. ಸಾಲ್ಮರದಲ್ಲಿರುವ ಎಪಿಎಂಸಿ ಪ್ರಾಂಗಣದಲ್ಲಿ ಮಂಗಲ್ ಸ್ಟೋರ್ಸ್ ತನ್ನ ೨ನೇ ಶಾಖೆ ತೆರೆಯುವುದರ ಮೂಲಕ ಅತ್ಯುತ್ತಮ ರೀತಿಯ ಗ್ರಾಹಕ ಸೇವೆಯನ್ನು ನೀಡುತ್ತಾ ಬಂದಿದೆ.
ಸ್ವದೇಶಿ ಬೆಂಬಲ
ಸ್ವದೇಶಿ ಚಾಕಲೇಟ್ ಎಂದೇ ಗುರುತಿಸಲ್ಪಟ್ಟಿರುವ ಪ್ರತಿಷ್ಠಿತ ಬಹುರಾಜ್ಯ ಸಹಕಾರ ಸಂಸ್ಥೆ ಕ್ಯಾಂಪ್ಕೋ ಉತ್ಪಾದಿಸುವ ಎಲ್ಲಾ ಚಾಕಲೇಟ್ ಉತ್ಪನ್ನಗಳ ಮಳಿಗೆಯನ್ನು ತೆರೆಯುವ ಮೂಲಕ ಮಂಗಲ್ ಸ್ಟೋರ್ಸ್ ಸ್ವದೇಶಿ ಉತ್ಪನ್ನಗಳ ಮಾರಾಟಕ್ಕೆ ಬೆಂಬಲ ನೀಡುತ್ತಿದೆ. ವ್ಯವಹಾರದ ಜೊತೆಗೆ ಸಮಾಜಮುಖಿಯಾಗಿಯೂ ಮಂಗಲ್ ಸ್ಟೊರ್ಸ್ ಕೆಲಸ ಮಾಡುತ್ತಿದೆ. ಗೃಹಿಣಿಯರ ಬೇಡಿಕೆಯಂತೆ ಮಳಿಗೆಯಲ್ಲಿ ತಾಜ ತರಕಾರಿ ಸಂತೆಯನ್ನು ನಿತ್ಯ ನಡೆಸುವ ಮೂಲಕ ವಿಶೇಷ ಮಾರಾಟವನ್ನು ಅತೀ ಕಡಿಮೆ ದರದಲ್ಲಿ ಮಾಡುತ್ತಿದೆ.
ಏನೆಲ್ಲಾ ದೊರೆಯುತ್ತದೆ
ದಿನಸಿ ಸಾಮಾಗ್ರಿಗಳು, ಗಿಫ್ಟ್ ಐಟಂಗಳು, ಚಾಟ್ಸ್ ಐಟಂಗಳು, ತಾಜಾ ತರಕಾರಿಗಳು, ಪೊಪ್ಯುಲರ್ ಸ್ವೀಟ್ಸ್ ಕೌಂಟರ್, ಫ್ರೆಶ್ ಜ್ಯೂಸ್, ತಾಜಾ ಹಣ್ಣುಹಂಪಲು, ಪತಂಜಲಿ ಉತ್ಪನ್ನಗಳು, ಪಾಪ್ಕಾರ್ನ್ ಕೌಂಟರ್, ನಂದಿನಿ ಹಾಲು, ಹಾಲಿನ ಉತ್ಪನ್ನಗಳು, ದೇಸಿ ಉತ್ಪಾನದವರ ಸಾವಯವ, ನೈಸರ್ಗಿಕ, ಆಯುರ್ವೇದ ಉತ್ಪನ್ನಗಳು, ೧೦ ಪ್ರಸಿದ್ಧ ಕಂಪನಿಗಳ ಐಸ್ಕ್ರೀಂ, ಚೈನೀಸ್ ಫುಡ್ ಐಟಂ, ಕೆಎಸ್ಆರ್ಟಿಸಿ ಟಿಕೆಟ್ ಬುಕ್ಕಿಂಗ್, ಸರ್ವಮಂಗಲ್ ಶುಭ ಸಮಾರಂಭಗಳ ದಿನಸಿ ಸಾಮಾಗ್ರಿ ಹಾಗೂ ತಾಜಾ ತರಕಾರಿಗಳ ಬುಕ್ಕಿಂಗ್ಗಾಗಿ, ಕ್ಯಾಂಪ್ಕೋ ವಿಶೇಷ ಕೌಂಟರ್, ಪ್ಲಾಸ್ಟಿಕ್ ಐಟಂಗಳು ಮಳಿಗೆಯಲ್ಲಿ ಲಭ್ಯ. ಗ್ರಾಹಕರ ನಿರಂತರ ಪ್ರೋತ್ಸಾಹವೇ ಮಳಿಗೆಯು ತನ್ನ ಸೇವಾ ಜಾಲವನ್ನು ವಿಸ್ತರಿಸಲು ಕಾರಣವಾಯಿತು ಎಂದು ಮಳಿಗೆಯ ಪಾಲುದಾರ ರಾಘವೇಂದ್ರ ನಾಯಕ್ ಹೇಳಿದರು.
ಗುಣಮಟ್ಟದ ಉತ್ಪನ್ನಗಳು, ಸ್ಪರ್ಧಾತ್ಮಕ ದರ, ಗ್ರಾಹಕ ಸ್ನೇಹಿ ಸಿಬಂದಿಗಳ ನಗುಮುಖದ ಸ್ವಾಗತ, ಭರವಸೆಯ ಖರೀದಿ, ವಿಶಾಲವಾದ ಪಾರ್ಕಿಂಕ್, ತ್ವರಿತ ಬಿಲ್ಲಿಂಗ್ ಸೆಂಟರ್, ಗ್ರಾಹಕ ಸಂತೃಪ್ತಿಯ ಸೇವೆ ಇಲ್ಲಿಯ ವಿಶೇಷತೆಗಳಾಗಿವೆ. ಒಮ್ಮೆ ಮಂಗಲ್ ಸ್ಟೋರ್ಗೆ ಭೇಟಿ ಕೊಟ್ಟರೆ ಮತ್ತೆ ಮತ್ತೆ ಹೋಗಬೇಕೆನ್ನುವ ಆಸೆ ಹುಟ್ಟುತ್ತದೆ.