HomePage_Banner
HomePage_Banner
HomePage_Banner
HomePage_Banner

ಎ. 12: ವೇ.ಮೂ.ರಾಮಕೃಷ್ಣ ಮಿತ್ಯಾಂತರಿಗೆ ಬಾರ್ಯ ನೂರಿತ್ತಾಯ ಪ್ರತಿಷ್ಠಾನದ ಪ್ರಶಸ್ತಿ

ಪುತ್ತೂರು: ಪುತ್ತೂರಿನ ದಿ. ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯ ಪ್ರತಿಷ್ಠಾನವು ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಪೌರೋಹಿತ್ಯ ಕ್ಷೇತ್ರದ ಸಾಧಕ ವೇ.ಮೂ.ರಾಮಕೃಷ್ಣ ಮಿತ್ಯಾಂತರು ಆಯ್ಕೆಯಾಗಿದ್ದಾರೆ. 2021 ಎಪ್ರಿಲ್ 12ರಂದು ಪರ್ಲಡ್ಕ `ಅಗಸ್ತ್ಯ’ ಮನೆಯ ಕಿರು ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ರಾಮಕೃಷ್ಣ ಮಿತ್ಯಾಂತರು ಪೌರೋಹಿತ್ಯ ವಿಭಾಗದಲ್ಲಿ ಅನುಭವಿ. ಜಪ-ತಪಾದಿ, ಪೂಜಾ ಕೈಂಕರ್ಯಗಳಲ್ಲಿ ನಿಷ್ಠಾವಂತರು. ಶಾಸ್ತ್ರವನ್ನು ಮೀರದ, ಅನುಷ್ಠಾನದಲ್ಲಿ ರಾಜಿಯಿಲ್ಲದ ಜೀವನ. ಒಂದು ಕಾಲಘಟ್ಟದಲ್ಲಿ ಭಾಗಮಂಡಲ ದೇವಳದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು. ಅರುವತ್ತೇಳರ ಹರೆಯದ ಮಿತ್ಯಾಂತರು ಪೌರೋಹಿತ್ಯದೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರತಿಷ್ಠಾನವು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಪ್ರತಿವರುಷ ಗೌರವಿಸುವ ಪರಿಪಾಠ ಇಟ್ಟುಕೊಂಡಿದೆ. ಇದುವರೆಗೆ – ಬ್ರಹ್ಮಶ್ರೀ ದಿ.ಕೆಮ್ಮಿಂಜೆ ಕೇಶವ ತಂತ್ರಿ, ದಿ.ಡಾ.ಶೇಣಿ ಗೋಪಾಲಕೃಷ್ಣ ಭಟ್, ದಿ.ರಾಮದಾಸ ಸಾಮಗ, ದಿ.ಬಾರ್ಯ ಜಯಕೀರ್ತಿ ಬುಣ್ಣು, ದಿ.ಚಂದು ಮೇಸ್ತ್ರಿ, ದಿ.ನಾಟಿವೈದ್ಯೆ ಅಕ್ಕು ಹೆಂಗ್ಸು, ಪಾಕಶಾಸ್ತ್ರಜ್ಞ ದಿ.ಶ್ರೀನಿವಾಸ ಭಟ್, ಸರಾಫ್ ರಾಮಚಂದ್ರ ಆಚಾರ್ಯ, ಸಂಗೀತ ಸಾಧಕ ಕುದ್ಮಾರು ವೆಂಕಟ್ರಮಣ ಭಟ್, ಅಧ್ಯಾಪಕ ವಾಸುದೇವ ಮಯ್ಯ, ವೈದ್ಯ ಡಾ.ಜೆ.ಸಿ.ಅಡಿಗ, ಬರೆಪ್ಪಾಡಿ ಅನಂತಕೃಷ್ಣ ಭಟ್, ಉಮೇಶ ಶೆಣೈ, ಸಹಕಾರಿ ನಿರಂಜನ ಕುಮಾರ್, ಪ್ರೊ.ವೇದವ್ಯಾಸ, ಕೆಯ್ಯೂರು ನಾರಾಯಣ ಭಟ್, ಫಿಲೋಮಿನಾ ಇ. ಬ್ರೆಗ್ಸ್, ವೇ.ಮೂ.ಹರೀಶ್ ಉಪಾಧ್ಯಾಯ ಮತ್ತು ಪೂಕಳ ಲಕ್ಷ್ಮೀನಾರಾಯಣ ಭಟ್ ಪ್ರಶಸ್ತಿ ಸ್ವೀಕರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.