HomePage_Banner
HomePage_Banner
HomePage_Banner
HomePage_Banner

ಇಂಪೋರ್ಟೇಡ್ ಟೈಲ್ಸ್, ಸ್ಯಾನಿಟರಿವೇರ್ಸ್ ವಿಸ್ತಾರ ಮಳಿಗೆ ಪ್ರೊ ಪ್ರೇಸ್ಟೀಜ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಇಂಡಿಯನ್, ಯುರೋಪ್ ಟೈಲ್ಸ್‌ಗಳು
  • ನ್ಯಾಚುರಲ್ ಸ್ಟೋನ್, ಕ್ಲಾಡಿಂಗ್ ಸ್ಟೋನ್‌ಗಳು
  • ಹೆಸರಾಂತ ಕಂಪೆನಿಯ ಉತ್ಪನ್ನ ಫ್ಯಾಕ್ಟರಿ ದರದಲ್ಲೇ ಲಭ್ಯ
  • ಮಂಗಳೂರಿನ ಪ್ರೆಸ್ಟೀಜ್ ಎಂಟರ್ ಪ್ರೈಸಸ್ ಇದರ 6ನೇ ಶಾಖೆ

ಪುತ್ತೂರು ; ಯುರೋಪ್ ರಾಷ್ಟ್ರಗಳಿಂದ ಆಮದು ಮಾಡಿಕೊಂಡಿರುವ ವರ್ಣರಂಜಿತ, ಅತ್ಯುತ್ತಮ ಗುಣಮಟ್ಟದ, ವಿಶಾಲ ಶ್ರೇಣಿಯ ವಾಲ್ ಪ್ಲೋರ್ ಟೈಲ್ಸ್‌ಗಳು,ನ್ಯಾಚುರಲ್ ಸ್ಟೋನ್, ಕ್ಲಾಡಿಂಗ್ ಸ್ಟೋನ್, ವಾಟರ್ ಹೀಟರ್, ಸ್ಯಾನಿಟರಿವೇರ್ಸ್, ಬಾತ್ ರೂಂ ಫಿಟ್ಟಿಂಗ್ಸ್, ಪ್ಲಬಿಂಗ್ ಮತ್ತು ಮೊಡ್ಯುಲರ್ ಕಿಚನ್ ಇವುಗಳೆಲ್ಲಾದರ ಬೃಹತ್ ಮಳಿಗೆ, ಮಂಗಳೂರಿನ ಪ್ರೇಸ್ಟೀಜ್ ಎಂಟರ್ ಪ್ರೈಸಸ್ ಇದರ ಆರನೇಯ ಶಾಖೆ, ಪ್ರೋ ಪ್ರೇಸ್ಟೀಜ್ ಏ.೮ ರಂದು ಏಳ್ಮುಡಿ ಪ್ರೊವಿಡೆನ್ಸ್ ಪ್ಲಾಜ್ಹಾದಲ್ಲಿ ಶುಭಾರಂಭಗೊಂಡಿತು. ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಪಾಲುದಾರ ಖಲಂದರ್ ಶಾಝ್ ರವರ ತಂದೆ ತಾಯಿ ಬಿ.ಕೆ ಅಬ್ದುಲ್ ಗಫೂರ್, ಹಲೀಮಾ ಗಫೂರ್, ಎಐಸಿಸಿ ವೀಕ್ಷಕ(ಕೇರಳದ ಪೋಟ್ಪುಝ್), ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಬಿಎನ್‌ಐ ಮಂಗಳೂರುನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಗಣೇಶ್ ಶರ್ಮ, ಉದ್ಯಮಿ ಜಯಂತ್ ನಡುಬೈಲುರವರು ಸಂಸ್ಥೆಯ ವಿವಿಧ ವಿಭಾಗವನ್ನು ಉದ್ಘಾಟಿಸಿದರು.

ಉದ್ಯಮ ಯಶಸ್ಸು ಕಾಣಲಿ – ರಮಾನಾಥ ರೈ : ಬಹು಼ಶ ಪುತ್ತೂರಿಗೆ ಬಲು ದೊಡ್ಡ ಅಚ್ಚುಕಟ್ಟುವಾಗಿರುವಂಥ ಈ ಸುಂದರ ಮಾಳಿಗೆಯು ಉತ್ತಮ ರೀತಿಯಲ್ಲಿ ವ್ಯವಹರಿಸಿ ಪುತ್ತೂರಿನಲ್ಲೂ ಯಶಸ್ವಿ ಉದ್ಯಮವಾಗಿ ಬೆಳಗಲಿಯೆಂದು ಹಾರೈಸಿದರು.

ಜನಾಕರ್ಷಣೆಯ ಕೇಂದ್ರವಾಗಲಿ- ಶಕುಂತಳಾ ಶೆಟ್ಟಿ : ಪುತ್ತೂರಿನಲ್ಲೂ ಹೊಸ ಹೊಸ ರೀತಿಯ ,ನಮೂನೆಯ ಹಾಗೂ ಬಣ್ಣ,ಬಣ್ಣದ ಕನಸಿನ ಮನೆ ಕಟ್ಟುವವರಿಗೆ ,ಎಲ್ಲಾ ಬಗೆಯ ಉತ್ಪನ್ನಗಳು ಇಲ್ಲಿ ಲಭ್ಯವಿದ್ದು ಜನತೆಗೆ ಒಳ್ಳೇಯ ಸೇವೆ ನೀಡುವ ಮೂಲಕ ಜನಾಕರ್ಷಣೆಯ ಕೇಂದ್ರವಾಗಲಿ ಎಂದು ಹಾರೈಸಿದರು.

ನಿರೀಕ್ಷೆಗೂ ಮೀರಿದ ಬೃಹತ್ ಮಳಿಗೆ- ಕಾವು ಹೇಮನಾಥ ಶೆಟ್ಟಿ : ವಿನೂತನ ಮಾದರಿಯ ಉತ್ಪನ್ನಗಳನ್ನು ನೋಡಿದಾಗ ನಾವು ಪುತ್ತೂರಿನಲ್ಲೇ ಇದ್ದೇವಾ ! ಅನ್ನುವ ಅನುಮಾನ ಮೂಡುತ್ತಿದೆ , ಮುಂದಿನ ದಿನಗಳಲ್ಲಿ ಪುತ್ತೂರಿನ ಜನತೆ ದೂರದ ನಗರಗಳನ್ನು ಅವಲಂಬಿಸುವುದು ,ಅಲೆದಾಡುವುದು ಬೇಕಾಗಿಲ್ಲ ,ನಿರೀಕ್ಷೆಗೂ ಮೀರಿದ ಮನ ಮೆಚ್ಚುವಂಥ ವಿಶಾಲ ಸಂಗ್ರಹ ಇಲ್ಲಿದೆ ಎಂದರು.

ಜಿಲ್ಲಾ ಕೇಂದ್ರವಾಗಲಿರುವ ಪುತ್ತೂರಿಗೆ ಸಿಹಿ-ಉದ್ಯಮಿ ಜಯಂತ್ ನಡುಬೈಲ್ : ಬೆಳೆಯುತ್ತಿರುವ ಈ ನಗರಕ್ಕೆ ಒಂದು ಉತ್ತಮ ಕೊಡುಗೆಯನ್ನು ಪ್ರೆಸ್ಟೀಜ್ ಸಮೂಹ ಸಂಸ್ಥಯು ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತಾ ಜನತೆಯ ಸಹಕಾರದೊಂದಿಗೆ ಜಿಲ್ಲಾ ಕೇಂದ್ರವಾಗುತ್ತಿರುವ ಪುತ್ತೂರಿಗೆ ಸಿಹಿ ಸುದ್ದಿ ಜೊತೆಗೆ ಮತ್ತಷ್ಟು ಸಂಸ್ಥೆ ಹುಟ್ಟಲಿಯೆಂದು ಹೇಳಿದರು.

ಸಾವಿರಕ್ಕೂ ಮಿಕ್ಕಿ ಉತ್ಪನ್ನಗಳ ಪ್ರದರ್ಶನ-ಗಣೇಶ್ ಶರ್ಮಾ : ಸುಮಾರು ಎರಡು ಸಾವಿರ ಚದರ ಅಡಿಯಲ್ಲಿ ಸಾವಿರಕ್ಕೂ ಮಿಕ್ಕಿದ ಉತ್ಪನ್ನಗಳು ,ಐವತ್ತಕ್ಕೂ ಅಧಿಕ ನ್ಯಾಚುರಲ್ ಸ್ಟೋನ್ ವಿದೇಶಿ ಟೈಲ್ಸ್ ಗಳು ಇಲ್ಲಿ ಇವೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮಹಮ್ಮದ್, ಎ.ಪಿ.ಎಂ.ಸಿ. ಸದಸ್ಯ ಶಕೂರ್ ಹಾಜಿ, ನಮ್ಮ ಕುಡ್ಲ ಚಾನೆಲ್‌ನ ನಿರ್ದೇಶಕಿ ಸೌಮ್ಯ ಕರ್ಕೇರ, ಜಾಗ್ವಾರ್ ಸ್ಯಾನಿಟರಿಯ ದ.ಕ. ವ್ಯವಸ್ಥಾಪಕ ಲಕ್ಷ್ಮೀಕಾಂತ್, ಮಂಗಳೂರು ಶ್ರೀದುರ್ಗಾ ಏಜೆನ್ಸಿಯ ಗಿರೀಶ್, ಪಾಲುದಾರ ಖಲಂದರ್ ಶಾಝ್‌ರವರ ಮಾವ ಸಿದ್ಧೀಕ್ ಹಾಜಿ, ಮಂಗಳೂರು ಶ್ರೀಕೃಷ್ಣ ಸ್ಯಾನಿಟರಿಯ ಪಾಂಡುರಂಗ ಶೆಟ್ಟಿ, ಪ್ರೊವಿಡೆನ್ಸ್ ಫ್ಲಾಝಾದ ಮಾಲಕ ಜಯಕುಮಾರ್ ನಾಯರ್, ಲಯನ್ಸ್ ಕ್ಲಬ್ ಪುತ್ತೂರ್‍ದ ಮುತ್ತು ಇದರ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಎನ್‌ಎಸ್‌ಯುಐ ಸ್ಟೇಟ್ ಸೆಕ್ರೆಟರಿ ಫಾರೂಕು ಬಾಯಬೆ, ಕಾಂ. ಸಾಮಾಜಿಕ ಜಾಲತಾಣ ಸಂಚಾಲಕರಾದ ರಹೀಮಾನ್ ಹಾಗೂ ಜಗಧೀಶ್ ಕಜೆ, ಯೂತ್ ಕಾಂ. ಪ್ರ. ಕಾರ್ಯದರ್ಶಿ ಗಗನ್ ಶೆಟ್ಟಿ, ವಾಸ್ತವಿ ಹೇಮನಾಥ ಶೆಟ್ಟಿ ಕಾವು, ದರ್ಬೆ ಎಸ್‌ಎಸ್ ಸ್ಕೇಲ್ ಬಝಾರ್ ಮಾಲಕ ಶಮೀರ್ ಪರ್ಲಡ್ಕ, ರಾಘವೇಂದ್ರ ಪೈಂಟ್ಸ್‌ನ ಸತ್ಯಶಂಕರ್ ಭಟ್, ಬೊಳ್ವಾರ್ ಬಿಲ್ಡ್ ಆರ್ಟ್ ಕನ್‌ಸ್ಟ್ರಕ್ಷನ್‌ನ ಅಬ್ದುಲ್ ಕುಂಞಿ, ಬಿಝಿಯಾ ಕಂಪೆನಿ ಮಾಲಕ ಫಹಿಮ್ ಮಂಗಳೂರು ಸಹಿತ ಹಲವು ಅತಿಥಿಗಳು ಆಗಮಿಸಿ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಹಾರೈಸಿದರು. ಫ್ರೆಸ್ಟಿಜ್ ಸಂಸ್ಥೆಯ ಪಾಂಡೇಶ್ವರ ಬ್ರಾಂಚ್ ಮ್ಯಾನೇಜರ್ ಆಶ್ರಫ್ ಪುತ್ತೂರು, ದೇರಳಕಟ್ಟೆ ಬ್ರಾಂಚ್ ಮ್ಯಾನೇಜರ್ ಬಾತೀಶ್, ಅಕೌಂಟೆಂಟ್ ಸಿದ್ಧೀಕ್, ಮಾರ್ಕೇಟಿಂಗ್ ಮ್ಯಾನೇಜರ್ ಇಮ್ತೀಯಾಜ್ ಮಂಗಳೂರು, ಫ್ರೆಸ್ಟೀಜ್ ಟೈಲ್ಸ್ ಡಿಪ್ಪೋ ಮ್ಯಾನೇಜರ್ ಸಲೀಂ ಮಂಗಳೂರು, ಮೂಡಬಿದಿರೆ ಫ್ರೆಸ್ಟಿಜ್ ಬ್ರಾಂಚ್‌ನ ಪಾಲುದಾರ ಆದಿಲ್ ಮೂಡಬಿದಿರೆ ಸಹಕಾರ ನೀಡಿದರು. ಪಾಲುದಾರರಾದ ಶಂಶುದ್ಧೀನ್ ಮತ್ತು ಖಲಂದರ್ ಶಾಝ್ ಅತಿಥಿಗಳನ್ನು ಸ್ವಾಗತಿಸಿ, ಗೌರವಿಸಿ ವಂದಿಸಿದರು. ಕೆಂಗೆನ್ ವಾಟರ್ ಡಿಸ್ಟ್ರಿಬ್ಯೂಟರ್ ಮಾಧವ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

ಪುತ್ತೂರಿನಲ್ಲಿ ಉದ್ಯಮ ಆರಂಭಿಸಿದ್ದು ತುಂಬಾನೇ ಹೆಮ್ಮೆ ಸಂತೋಷ ಆಗುತ್ತದೆ. ಎಲ್ಲಾ ಪ್ರಸಿದ್ದ ಕಂಪೆನಿಯ ಉತ್ಪನ್ನವನ್ನು ಫ್ಯಾಕ್ಟರಿ ದರದಲ್ಲೇ ಅತ್ಯುತ್ತಮ ರೀತಿಯ ಸೇವೆ ಒದಗಿಸುವ ಮೂಲಕ ಜನತೆಯ ಪ್ರೀತಿ ಸ್ನೇಹ ನಂಬಿಕೆಯನ್ನು ಉಳಿಸಿ ಬೆಳೆಸುತ್ತೇವೆಶಂಶುದ್ದೀನ್ ಹಾಗೂ ಖಲಂದರ್ ಶಾಝ್ ಪಾಲುದಾರರು, ಪ್ರೊ ಪ್ರಸ್ಟೀಜ್ ಪುತ್ತೂರು

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.