HomePage_Banner
HomePage_Banner
HomePage_Banner
HomePage_Banner

ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳ ಮುಷ್ಕರ ಮಧ್ಯೆ ಪುತ್ತೂರು ವಿಭಾಗದಿಂದ ರಸ್ತೆಗಿಳಿದ 8 ಬಸ್‌ಗಳು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ನಡೆಸುತ್ತಿರುವ ಮುಷ್ಕರ ಮುಂದುವರಿದಿರುವ ಮಧ್ಯೆಯೇ ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗದಿಂದ ಎ.8ರಂದು 8 ಬಸ್‌ಗಳು ಓಡಾಟ ನಡೆಸಿದೆ.

ಸಾಕಷ್ಟು ಖಾಸಗಿ ಬಸ್‌ಗಳು, ಟೆಂಪೋಟ್ರ್ಯಾಕ್ಸ್, ಮ್ಯಾಕ್ಸಿಕ್ಯಾಬ್‌ಗಳು ಎರಡನೇ ದಿನವೂ ವಿವಿಧ ಮಾರ್ಗಗಳಲ್ಲಿ ಸಂಚರಿಸಿತ್ತು. ಆದರೆ ಮುಷ್ಕರದ ಕಾರಣ ಪ್ರಯಾಣಿಕರು ಬಹಳಷ್ಟು ಇರಲಿಲ್ಲ. ಕೆಲವು ಮಾರ್ಗಗಳ ಖಾಸಗಿ ಬಸ್‌ಗಳಲ್ಲಿ ಜನ ಸಂದಣಿ ಕಂಡುಬಂತು. ಕೆಲವು ಚಾಲಕರು, ನಿರ್ವಾಹಕರ ಮನವೊಲಿಸಿದ ಅಧಿಕಾರಿಗಳು ಪುತ್ತೂರು ವಿಭಾಗಕ್ಕೆ ಸಂಬಂಧಿಸಿ 8 ಬಸ್‌ಗಳನ್ನು ರಸ್ತೆಗೆ ಇಳಿಸಿದ್ದರು. ಹಾಗಾಗಿ ಪುತ್ತೂರು ಡಿಪೊದಿಂದ 2 ಬಸ್, ಧರ್ಮಸ್ಥಳ ಘಟಕದಿಂದ 4 ಬಸ್, ಬಿಸಿರೋಡ್ ಘಟಕದಿಂದ ೨ ಬಸ್‌ಗಳು ಓಡಾಟ ನಡೆಸಿದೆ.

ಉಪ್ಪಿನಂಗಡಿ, ಮಂಗಳೂರು, ಸುಳ್ಯ, ಬೆಳ್ತಂಗಡಿ, ಉಜಿರೆ ಕಡೆಗಳಲ್ಲಿ ಬಸ್ ಓಡಾಟ ನಡೆಸಿದೆ. ಬಹುತೇಕ ಎಲ್ಲಾ ಖಾಸಗಿ ಬಸ್‌ಗಳು ಪರಿಸ್ಥಿತಿಯ ಅವಕಾಶ ಸದ್ಬಳಕೆ ಮಾಡಿಕೊಂಡು ಹಲವು ಸುತ್ತು ಸಂಚಾರ ನಡೆಸಿದವು. ನಗರ ಪ್ರದೇಶಗಳಿಂದ ಗ್ರಾಮಗಳಿಗೆ ಹೋಗುವ ಜನರು ಆಟೊರಿಕ್ಷಾ, ಸರಕು ಸಾಗಣೆ ವಾಹನಗಳ ಮೂಲಕವೂ ಸಾಗಿದರು. ಕೆಲವು ಖಾಸಗಿ ವಾಹನಗಳು ಕೆಎಸ್‌ಆರ್‌ಟಿಸಿ ನಿಲ್ದಾಣದ ಬಳಿಯೇ ಜನರನ್ನು ಹತ್ತಿಸಿಕೊಳ್ಳತ್ತಿದ್ದ ದೃಶ್ಯ ಕಂಡು ಬಂತು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.