ವಿಟ್ಲ: ವಿಟ್ಲ ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮ ಮತ್ತು ಸಪರಿವಾರ ದೈವಗಳ ದೇಗುಲದಲ್ಲಿ ಎ. 28-29 ರಂದು ನಡೆಯುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಎ.೮ರಂದು ವಿಟ್ಲ ನಾರಾಯಣ ಪ್ರಸಾದ್ ಬನ್ನಿಂತಾಯ ರವರ ವೈದಿಕತ್ವದಲ್ಲಿ ಚಪ್ಪರ ಮುಹೂರ್ತ ನಡೆಯಿತು. ಶ್ರೀ ಮಹಮ್ಮಾಯಿ ಅಮ್ಮನವರ ಸೇವಾ ಸಮಿತಿಯ ಗೌರವಾಧ್ಯಕ್ಷ ಕೃಷ್ಣಯ್ಯ ಕೆ. ವಿಟ್ಲ, ಆಡಳಿತ ಮೊಕ್ತೇಸರ ವಿ. ಶೀನ, ಸಮಿತಿ ಕಾರ್ಯಾಧ್ಯಕ್ಷ ಪದ್ಮನಾಭ ಗೌಡ ಚಂದಪ್ಪಾಡಿ, ಅಧ್ಯಕ್ಷ ಗಣೇಶ ಆಳ್ವ ಕಲ್ಲಗದ್ದೆ, ಕಾರ್ಯದರ್ಶಿ ರಾಜೇಶ್ ವಿಟ್ಲ, ಕೋಶಾಧಿಕಾರಿ ವಿ.ರಾಮದಾಸ ಶೆಣೈ, ಉದ್ಯಮಿ ಸತೀಶ್ ಆಳ್ವ ಇರಾ ಬಾಳಿಕೆ ಮೊದಲಾದವರು ಉಪಸ್ಥಿತರಿದ್ದರು.