HomePage_Banner
HomePage_Banner
HomePage_Banner
HomePage_Banner

ಕೆಯ್ಯೂರು: ನೇಮೋತ್ಸವಕ್ಕೆ ಹೋಗಿದ್ದ ಶಿವರಾಜ್ ಮರಳಿ ಬಂದು ನೇಣಿಗೆ ಶರಣು | ಮೊಬೈಲ್,ಪರ್ಸ್ ಸುಟ್ಟು ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಯುವಕನೋರ್ವ ಮೊಬೈಲ್, ಪರ್ಸ್ ಸುಟ್ಟು ಹಾಕಿ ಪ್ಯಾನಿಗೆ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.೦೮ ರ ತಡರಾತ್ರಿ ಕೆಯ್ಯೂರು ಗ್ರಾಮದ ದೇರ್ಲದಲ್ಲಿ ನಡೆದಿದೆ. ದೇರ್ಲ ವೆಂಕಟರಮಣ ಗೌಡರ ಪುತ್ರ ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದ ಶಿವರಾಜ್ (೨೭ವ)ರವರೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ.

ಶಿವರಾಜ್‌ರವರ ತರವಾಡು ಮನೆ ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಕಾಳಪ್ಪಜ್ಜನಮನೆ ತರವಾಡು ಮನೆಯಲ್ಲಿ ಎ.೦೮ ರಂದು ರಾತ್ರಿ ದೈವಗಳ ನೇಮೋತ್ಸವವಿದ್ದ ಕಾರಣ ವೆಂಕಟರಮಣ ಗೌಡ, ತಾಯಿ ಯಮುನಾವತಿ ಮತ್ತು ತಂಗಿಯಂದಿರಿಬ್ಬರು ನೇಮಕ್ಕೆ ಹೋಗಿದ್ದರು. ಅದೇ ಮಧ್ಯಾಹ್ನದ ಹೊತ್ತಿಗೆ ಓರ್ವ ತಂಗಿ ಮೇಘಾನರವರು ಮನೆಗೆ ಬಂದಿದ್ದರೆನ್ನಲಾಗಿದೆ. ಆ ದಿನ ರಾತ್ರಿ ಶಿವರಾಜ್‌ರವರು ಕೂಡ ನೇಮೋತ್ಸವಕ್ಕೆ ತೆರಳಿದ್ದರು. ಮನೆಯಲ್ಲಿ ಮೇಘನಾ ಮತ್ರ ವಾಸವಿದ್ದರು. ಮಧ್ಯರಾತ್ರಿ ಸುಮಾರಿಗೆ ಬೈಕ್‌ನಲ್ಲಿ ಮನೆಗೆ ಬಂದ ಶಿವರಾಜ್‌ರವರನ್ನು ಮೇಘನಾರವರು ಬಾಗಿಲು ತೆರೆದು ಒಳಗೆ ಕರೆಸಿಕೊಂಡಿದ್ದರು. ತಂಗಿಯೊಂದಿಗೆ ಚೆನ್ನಾಗಿಯೇ ಮಾತನಾಡಿದ್ದ ಶಿವರಾಜ್ ಬಳಿಕ ರೂಮ್‌ಗೆ ತೆರಳಿದ್ದರು. ಬೆಳಿಗ್ಗೆ ಮೇಘಾನರವರು ಎದ್ದು ನೋಡಿದಾಗ ರೂಮ್‌ನ ಲೈಟ್ ಉರಿಯುತ್ತಿದ್ದು ಅಣ್ಣ ಇನ್ನೂ ಎದ್ದಿಲ್ಲವ ಎಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ. ತಕ್ಷಣ ತನ್ನ ತಂದೆತಾಯಿಗೆ ಈ ವಿಷಯ ತಿಳಿಸಿದರೆನ್ನಲಾಗಿದೆ.

ಮೊಬೈಲ್, ಪರ್ಸ್ ಸುಟ್ಟು ಹಾಕಿದ್ದ ಶಿವರಾಜ್
ಶಿವರಾಜ್ ಮೊದಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರ ಎಂಬ ಸಂಶಯ ಮೂಡುತ್ತಿದ್ದು ನೈಲಾನ್ ಹಗ್ಗದಿಂದ ಪ್ಯಾನಿಗೆ ನೇಣು ಬಿಗಿದು ಕೊಳ್ಳುವ ಮೊದಲು ತನ್ನ ಮೊಬೈಲ್ ಮತ್ತು ಪರ್ಸ್ ಅನ್ನು ಸುಟ್ಟು ಹಾಕಿದ್ದಾರೆ. ಪರ್ಸ್‌ನಲ್ಲಿದ್ದ ಎಟಿಎಂ ಕಾರ್ಡ್ ಸಮೇತ ಎಲ್ಲವೂ ಸುಟ್ಟು ಹೋಗಿದೆ. ಮೊಬೈಲ್ ಕೂಡ ಸಂಪೂರ್ಣ ಸುಟ್ಟು ಹೋಗಿದೆ. ಯಾವುದೇ ಕುರುಹುಗಳು ಸಿಗಬಾರದು ಎಂಬ ಉದ್ದೇಶದಿಂದ ಈ ರೀತಿ ಮಾಡಿಕೊಂಡಿರಬಹುದೇ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಸಂಪ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪರೋಪಕಾರಿ ಯುವಕ
ಶಿವರಾಜ್‌ರವರ ತಂದೆ ವೆಂಕಟರಮಣ ಗೌಡರವರು ಶ್ರೀಕ್ಷೇತ್ರ ಕೆಯ್ಯೂರಿನ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ, ತಾಯಿ ಯಮುನಾವತಿಯವರು ದೇರ್ಲ ಎಟ್ಯಡ್ಕ ಶಾಲೆಯ ಮುಖ್ಯಶಿಕ್ಷಕಿಯಾಗಿದ್ದಾರೆ.ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರ. ಶಿವರಾಜ್‌ರವರು ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿದ್ದರೂ ಪರೋಪಕಾರಿ ಯುವಕನಾಗಿದ್ದ ಎನ್ನುತ್ತಾರೆ ಸ್ಥಳೀಯರು. ಲಾಕ್‌ಡೌನ್ ಸಂದರ್ಭದಲ್ಲೂ ಮನೆಮನೆಗೆ ದಿನಸಿ ಸಾಮಾಗ್ರಿಗಳನ್ನು ತನ್ನ ರಿಕ್ಷಾದಲ್ಲಿ ಮುಟ್ಟಿಸಿ ಮಾನವೀಯತೆ ಮೆರೆದಿದ್ದರು. ಶಿವರಾಜ್ ಬಗ್ಗೆ ಎಲ್ಲರಿಗೂ ಒಳ್ಳೆಯ ಅಭಿಪ್ರಾಯವಿದ್ದು ಯಾವುದೇ ಕೆಟ್ಟ ಅಭ್ಯಾಸಗಳಿಲ್ಲದ ಒಬ್ಬ ಒಳ್ಳೆಯ ಪರೋಪಕಾರಿ ಯುವಕನ್ನು ಕಳೆದುಕೊಂಡಿದ್ದೇವೆ ಎನ್ನುತ್ತಾರೆ ಸ್ಥಳೀಯರು.

ಪ್ರೇಮ ವೈಫಲ್ಯ ಸಾವಿಗೆ ಕಾರಣವಾಯಿತಾ?
ಹೀಗೊಂದು ಸಂಶಯ ಜನರಲ್ಲಿ ಮೂಡತೊಡಗಿದೆ. ಶಿವರಾಜ್ ಏನಾದರೂ ಪ್ರೀತಿ ಬಲೆಗೆ ಬಿದ್ದಿದ್ದರಾ? ಪ್ರೀತಿಸಿದ ಹುಡುಗಿ ಕೈಕೊಟ್ಟಿರಬಹುದೇ? ಎಂಬ ಸಂಶಯ ಕಾಡತೊಡಗಿದೆ. ಏಕೆಂದರೆ ಮೊಬೈಲ್, ಪರ್ಸ್ ಸುಟ್ಟು ಹಾಕಿರುವ ಹಿಂದಿನ ಉದ್ದೇಶವನ್ನು ಗಮನಿಸಿದರೆ ಇಂತಹ ಸಂಶಯ ಮೂಡುವುದು ಸಹಜ ಎನ್ನುತ್ತಾರೆ ಸ್ಥಳೀಯರು. ಈ ಬಗ್ಗೆ ಪೊಲೀಸರ ತನಿಖೆಯಿಂದ ಸತ್ಯಾಂಶ ಇನ್ನಷ್ಟೇ ಹೊರಬೀಳಬೇಕು, ಒಟ್ಟಿನಲ್ಲಿ ನೇಮೋತ್ಸವದಿಂದ ಬಂದ ರಾತ್ರಿಯೇ ನೇಣಿಗೆ ಶರಣಾಗಿದ್ದು ಮಾತ್ರ ವಿಪರ್‍ಯಾಸವೇ ಸರಿ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.