ಚಿತ್ರ: ಯೂಸುಫ್ ರೆಂಜಲಾಡಿ
- ಉದ್ಯೋಗ ಸೃಷ್ಟಿ ಮಾಡುವ ಕಾರ್ಯ ಶ್ಲಾಘನೀಯ-ರಾಧಾಕೃಷ್ಣ ಬೋರ್ಕರ್
-ಅಭಿವೃದ್ಧಿ ಪಥದಲ್ಲಿ ಸಾಗಲಿ-ಹಕೀಂ ತಂಙಳ್
-ನಮ್ಮೂರಲ್ಲಿ ಪ್ರಾರಂಭಗೊಂಡಿರುವುದು ಖುಷಿಯಾಗಿದೆ-ರಮೇಶ್ ರೈ
-ಉದ್ಯೋಗ ಸೃಷ್ಟಿಯಾಗಿದೆ-ಫೌಝಿಯಾ ಇಬ್ರಾಹಿಂ
-ಗ್ರಾಮದ, ದೇಶದ ಅಭಿವೃದ್ಧಿಗೆ ಪೂರಕ-ರಾಮಚಂದ್ರ
-ನೆ.ಮುಡ್ನೂರು ಅಭಿವೃದ್ಧಿ ಪಥದಲ್ಲಿದೆ-ಶ್ರೀರಾಮ್ ಪಕ್ಕಳ
-ಈಶ್ವರಮಂಗಲಕ್ಕೆ ಚಿನ್ನದ ಕಿರೀಟ-ರವಿಕಿರಣ್ ಶೆಟ್ಟಿ
-ಎಲ್ಲರನ್ನು ಸೇರಿಸಿ ಮಾಡುವ ಉದ್ಯಮದಲ್ಲಿ ಯಶಸ್ಸು-ಖಾದರ್
ಪುತ್ತೂರು: ಈಶ್ವರಮಂಗಲ ಸಮೀಪದ ಮೇನಾಲ, ಬೆಳ್ಳಿಚೆಡವು ಎಂಬಲ್ಲಿ ನೂತನವಾಗಿ ಪ್ರಾರಂಭಗೊಂಡ ಗೇರು ಬೀಜ ಸಂಸ್ಕರಣಾ ಉದ್ಯಮ `ಮುಳ್ಳೇರಿಯಾ ಕ್ಯಾಶ್ಯೂ ಇಂಡಸ್ಟ್ರೀಸ್’ ಎ.೮ರಂದು ಶುಭಾರಂಭಗೊಂಡಿತು. ಸಯ್ಯದ್ ಹಕೀಂ ತಂಙಳ್ ಆದೂರು ರಿಬ್ಬನ್ ತುಂಡರಿಸುವ ಮೂಲಕ ಫ್ಯಾಕ್ಟರಿಯನ್ನು ಉದ್ಘಾಟಿಸಿದರು. ಅತಿಥಿಗಳು ವಿವಿಧ ವಿಭಾಗಗಳನ್ನು ಉದ್ಘಾಟಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಹಕೀಂ ತಂಙಳ್ ಆದೂರುರವರು ಇಲ್ಲಿ ಕ್ಯಾಶ್ಯೂ ಫ್ಯಾಕ್ಟರಿ ಆರಂಭಗೊಳ್ಳುತ್ತಿರುವುದು ಸಂತಸದ ವಿಚಾರ, ಇದು ಅಭಿವೃದ್ಧಿಯ ಪಥದಲ್ಲಿ ಸಾಗಲಿ ಎಂದು ಹಾರೈಸಿದು.
ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ ಪ್ರಧಾನಿಯವರ ಆತ್ಮ ನಿರ್ಭರ ಭಾರತ ಕಲ್ಪನೆಗೆ ಇಲ್ಲಿ ಶುಭಾರಂಗೊಂಡ ಕ್ಯಾಶ್ಯೂ ಫ್ಯಾಕ್ಟರಿ ಪೂರಕವಾಗಿದೆ. ಕ್ಯಾಶ್ಯೂ ಇಂಡಸ್ಟ್ರೀಸ್ ಮೂಲಕ ೧೦೦ ಜನರಿಗೆ ಉದ್ಯೋಗ ಒದಗಿಸಿ ಅವರ ಕುಟುಂಬಕ್ಕೆ ಊಟ ಕೊಡುವ ಹಾಗೆ ಮಾಡುವ ಕಾರ್ಯ ಶ್ಲಾಘನೀಯ, ಈ ಸಂಸ್ಥೆಯು ತನ್ನ ಲಾಭಾಂಶದಿಂದ ಒಂದಂಶವನ್ನು ಸಮಾಜ ಸೇವೆಗೂ ವಿನಿಯೋಗಿಸುವಂತಾಗಲಿ ಎಂದು ಹೇಳಿದರು.
ನೆ.ಮುಡ್ನೂರು ಗ್ರಾ.ಪಂ ಉಪಾಧ್ಯಕ್ಷೆ ಫೌಝಿಯಾ ಇಬ್ರಾಹಿಂ ಮಾತನಾಡಿ ಇಲ್ಲಿ ಕ್ಯಾಶ್ಯೂ ಇಂಡಸ್ಟ್ರೀಸ್ ಪ್ರಾರಂಭಗೊಂಡಿರುವುದರಿಂದ ಗ್ರಾಮಾಂತರ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಯಾಗಿದೆ, ಇಲ್ಲಿಗೆ ಗ್ರಾ.ಪಂನಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಕುಂಬ್ರ ಮೆಸ್ಕಾಂ ಸಹಾಯಕ ಇಂಜಿನಿಯರ್ ರಾಮಚಂದ್ರ ಮಾತನಾಡಿ ಗ್ರಾಮಾಂತರ ಪ್ರದೇಶದಲ್ಲಿ ಇಂಡಸ್ಟ್ರೀಸ್ಗಳು ಆರಂಭಗೊಳ್ಳುತ್ತಿರುವುದು ಗ್ರಾಮದ ಮತ್ತು ದೇಶದ ಅಭಿವೃದ್ಧಿಗೆ ಪೂರಕ ಎಂದು ಹೇಳಿದರು.
ನೆ.ಮುಡ್ನೂರು ಗ್ರಾ.ಪಂ ಸದಸ್ಯ ಶ್ರೀರಾಮ್ ಪಕ್ಕಳ ಮಾತನಾಡಿ ನೆ.ಮುಡ್ನೂರು ಗ್ರಾಮ ಅಭಿವೃದ್ಧಿ ಪಥದಲ್ಲಿದೆ, ಇಲ್ಲಿ ಕ್ಯಾಶ್ಯೂ ಫ್ಯಾಕ್ಟರಿ ಆರಂಭಗೊಂಡಿರುವುದರಿಂದ ಹಲವರಿಗೆ ಉದ್ಯೋಗ ದೊರೆಯಲಿದೆ ಎಂದು ಹೇಳಿದರು.
ಈಶ್ವರಮಂಗಲ ಪಂಚಲಿಂಗೇಶ್ವರ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ರವಿಕಿರಣ್ ಶೆಟ್ಟಿ ಬೆದ್ರಾಡಿ ಮಾತನಾಡಿ ಮುಳ್ಳೇರಿಯಾ ಕ್ಯಾಶ್ಯೂ ಇಂಡಸ್ಟ್ರೀಸ್ ಇಲ್ಲಿ ಆರಂಭಗೊಂಡಿರುವುದರಿಂದ ಈಶ್ವರಮಂಗಲಕ್ಕೆ ಚಿನ್ನದ ಕಿರೀಟ ಇಟ್ಟಂತಾಗಿದೆ, ಇದು ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹೇಳಿದರು.
ನೆ.ಮುಡ್ನೂರು ಗ್ರಾ.ಪಂ ಮಾಜಿ ಸದಸ್ಯ ಅಬ್ದುಲ್ ಖಾದರ್ ಕರ್ನೂರು ಮಾತನಾಡಿ ಜಾತಿ, ಮತ, ಧರ್ಮ ನೋಡದೆ ಎಲ್ಲರನ್ನು ಸೇರಿಸಿಕೊಂಡು ಮಾಡುವ ಉದ್ಯಮ ಯಶಸ್ವಿಯಾಗುತ್ತದೆ ಎಂದು ಹೇಳಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಮಾತನಾಡಿ ಕ್ಯಾಶ್ಯೂ ಇಂಡಸ್ಟ್ರೀಸ್ ಪ್ರಾರಂಭ ಮಾಡುವುದೆಂದರೆ ಸವಾಲಿನ ಕೆಲಸ, ಎಲ್ಲ ಸವಾಲುಗಳನ್ನು ನಿಭಾಯಿಸಿ ಈ ಫ್ಯಾಕ್ಟರಿ ಅಭಿವೃದ್ಧಿ ಕಾಣಲಿ, ನಮ್ಮ ಗ್ರಾಮದಲ್ಲಿ ಕ್ಯಾಶ್ಯೂ ಫ್ಯಾಕ್ಟರಿ ಆಗಿರುವುದು ಖುಷಿಯಾಗಿದೆ ಎಂದು ಹೇಳಿದರು.
ಕೆನರಾ ಬ್ಯಾಂಕ್ ಜಾಲ್ಸೂರು ಬ್ರಾಂಚ್ ಮೆನೇಜರ್ ಸಮೀನಾ, ಸಿವಿಲ್ ಇಂಜಿನಿಯರ್ ಶಂಕರ್ ಭಟ್, ವಾಸ್ತು ಶಿಲ್ಪಿ ಹರಿಚಂದ್ರ ಆಚಾರ್ಯ ಮೊದಲಾದವರು ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ `ಮುಳ್ಳೇರಿಯಾ ಕ್ಯಾಶ್ಯೂ ಇಂಡಸ್ಟ್ರೀಸ್’ನ ಮಾಲಕ ಸಿ.ಎಚ್ ಅಬ್ದುಲ್ ಖಾದರ್, ಜಯಕರ್ನಾಟಕ ಈಶ್ವರಮಂಗಲ ವಲಯಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ನೆ.ಮುಡ್ನೂರು ಗ್ರಾ.ಪಂ ಸದಸ್ಯರಾದ ಇಬ್ರಾಹಿಂ ಹಾಗೂ ಶಶಿಕಲಾ ರೈ, ಉದ್ಯಮಿ ಇಬ್ರಾಹಿಂ ದೇಲಂಪಾಡಿ ಉಪಸ್ಥಿತರಿದ್ದರು.
ನೆ.ಮುಡ್ನೂರು ಗ್ರಾ.ಪಂ ಸದಸ್ಯ ರಾಮ ಮೇನಾಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕ್ಯಾಶ್ಯೂ ಇಂಡಸ್ಟ್ರೀಸ್ನ ಮಾಲಕ ಸಿ.ಎಚ್ ಅಬ್ದುಲ್ ಖಾದರ್ರವರ ಪುತ್ರ ಮಹಮ್ಮದ್ ಫಾಯಿಝ್ ಅತಿಥಿಗಳಿಗೆ ಸ್ಮರಣಿಕೆ ನೀಡಿದರು. ಇನ್ನೋರ್ವ ಪುತ್ರ ಮಹಮ್ಮದ್ ಕುಂಞಿ ವಂದಿಸಿದರು. ಪುತ್ರ ಅಬ್ದುಲ್ ನೌಫಲ್, ಪುತ್ರಿ ಆಯಿಶತ್ ಮಹ್ಶೂಮ, ಸಾಮಾಜಿಕ ಕಾರ್ಯಕರ್ತ ಅಬ್ದುಲ್ಲ ಮೆಣಸಿನಕಾನ ಮತ್ತಿತರರು ಸಹಕರಿಸಿದರು.
ಮಾಲಕ ಅಬ್ದುಲ್ ಖಾದರ್ರವರಿಗೆ ಸನ್ಮಾನ:
ಮುಳ್ಳೇರಿಯಾ ಕ್ಯಾಶ್ಯೂ ಇಂಡಸ್ಟ್ರೀಸ್ನ ಮಾಲಕ ಸಿ.ಎಚ್ ಅಬ್ದುಲ್ ಖಾದರ್ ಅವರನ್ನು ಸಂಸ್ಥೆಯ ಸಿಬ್ಬಂದಿಗಳ ಪರವಾಗಿ ಅತಿಥಿಗಳು ಶಾಲು ಹಾಕಿ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.
ರಮಾನಾಥ ರೈ ಭೇಟಿ:
ಮದ್ಯಾಹ್ನದ ವೇಳೆಗೆ ಮಾಜಿ ಸಚಿವ ರಮಾನಾಥ ರೈ, ಎಐಸಿಸಿ ಮುವಾಟ್ಟಪುಝ ವಿಧಾನಸಭಾ ಕ್ಷೇತ್ರದ ವೀಕ್ಷಕರಾದ ಹೇಮನಾಥ ಶೆಟ್ಟಿ ಕಾವು, ಜಿ.ಪಂ ಸದಸ್ಯರಾದ ಎಂ.ಎಸ್ ಮಹಮ್ಮದ್, ಅನಿತಾ ಹೇಮನಾಥ ಶೆಟ್ಟಿ, ಯುವ ಕಾಂಗ್ರೆಸ್ ಮುಖಂಡ ಹನೀಫ್ ಪುಣ್ಚತ್ತಾರ್ ಮೊದಲಾದವರು ಆಗಮಿಸಿ ವಿವಿಧ ಮೆಷಿನರಿ ವಿಭಾಗವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಗಡಿನಾಡು ಪ್ರದೇಶವಾಗಿರುವ ಈಶ್ವರಮಂಗಲ ಮೇನಾಲದಲ್ಲಿ ಮುಳ್ಳೇರಿಯಾ ಕ್ಯಾಶ್ಯೂ ಇಂಡಸ್ಟ್ರೀಸ್ ಶುಭಾರಂಭಗೊಂಡಿರುವುದು ಹೆಮ್ಮೆಯ ವಿಚಾರ. ಗ್ರಾಮಾಂತರ ಪ್ರದೇಶದಲ್ಲಿ ಇಂತಹ ಫ್ಯಾಕ್ಟರಿ ಆರಂಭಗೊಳ್ಳುವುದರಿಂದ ಉದ್ಯೋಗ ಸೃಷ್ಟಿಯಾಗಿ ನೂರಾರು ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸಲು ಕಾರಣವಾಗಬಹುದು. ಈ ಫ್ಯಾಕ್ಟರಿ ಅಭಿವೃದ್ಧಿಯ ಉತ್ತುಂಗಕ್ಕೇರಲಿ ಎಂಬುವುದೇ ನಮ್ಮೆಲ್ಲರ ಹಾರೈಕೆ –ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಅಧ್ಯಕ್ಷರು ಜಯಕರ್ನಾಟಕ ಈಶ್ವರಮಂಗಲ ವಲಯ