ಪುತ್ತೂರು: ಕುಂಬ್ರದ ನಿಶ್ಮಿತಾ ಕಾಂಪ್ಲೆಕ್ಸ್ ನಲ್ಲಿ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸಿದ್ದ ಉಡುಪುಗಳ ಮಾರಾಟದಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ಫ್ಯಾಷನ್ ವಿಝ್ ಡ್ರೆಸ್ ಮಳಿಗೆಯ ಸಹ ಸಂಸ್ಥೆ ಫ್ಯಾನ್ಸಿ ಒನ್ ಗ್ರಾಂ ಗೋಲ್ಡ್ ಹಾಗೂ ಫೂಟ್ ವೇರ್ ಗಳನ್ನು ಒಳಗೊಂಡ ಸುಸಜ್ಜಿತ ಮಳಿಗೆಯು ಫ್ಯಾಷನ್ ವಿಝ್ ಡ್ರೆಸ್ ಮಳಿಗೆಯ ಪಕ್ಕದಲ್ಲಿ ಎ.೮ ರಂದು ಶುಭಾರಂಭಗೊಂಡಿತು.
ಸಯ್ಯದ್ ಝೈನುಲ್ ಅಬಿದಿನ್ ತಂಙಳ್ ಕಣ್ಣವಂ ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ದುವಾ ನೆರವೇರಿಸಿದರು. ಶೇಕಮಲೆ ಖತೀಬ್ ಅಬ್ದುರ್ರಹ್ಮಾನ್ ಬಾಖವಿ,ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಕುಂಬ್ರ ಕೆ.ಐ.ಸಿ ಪ್ರಾಧ್ಯಾಪಕ ಅನೀಸ್ ಕೌಸರಿ, ಒಳಮೊಗ್ರು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಕೆದಂಬಾಡಿ ಗ್ರಾ.ಪಂ ಅಧ್ಯಕ್ಷ ರತನ್ ರೈ, ನಿಶ್ಮಿತಾ ಕಾಂಪ್ಲೆಕ್ಸ್ ಮಾಲಕ ಪುರಂದರ ರೈ, ನವೋದಯ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಬಶೀರ್ ಕಡ್ತಿಮಾರ್, ನ್ಯಾಯವಾದಿ ಅಕ್ಷತಾ, ಜಾಬಿರ್ ಪಲ್ಲತ್ತೂರು, ಆಚಿ ಕುಂಬ್ರ ಬಶೀರ್ ಕುಂಬ್ರ, ಉದ್ಯಮಿ ಅಶೋಕ್ ಪೂಜಾರಿ, ಒಳಮೊಗ್ರು ಗ್ರಾ.ಪಂ ಸದಸ್ಯರಾದ ವಿನೋದ್ ಶೆಟ್ಟಿ, ಅಶ್ರಫ್ ಉಜಿರೋಡಿ, ಶೀನಪ್ಪ ನಾಯ್ಕ, ಲತೀಫ್ ಟೈಲರ್, ಬಿಜೆಪಿ ಮುಖಂಡ ರಾಜೇಶ್ ರೈ ಪರ್ಪುಂಜ, ಹಮೀದ್ ಎಸ್.ಎ, ಮಹಮ್ಮದ್ ಮುಸ್ಲಿಯಾರ್, ಉಸ್ಮಾನ್ ಮುಸ್ಲಿಯಾರ್, ಡಾ ಸುಭಾಸ್, ಸೀತಾರಾಮ ರೈ, ಮಜೀದ್ ನಈಮಿ ಅಮ್ಚಿನಡ್ಕ, ನೌಫಲ್ ಝಾಹಿದ್ ಬೆಳ್ಳಾರೆ, ಶಾಫಿ ಪಂಜಳ , ಉದ್ಯಮಿ ಮೋಹನ ದಾಸ ರೈ, ರವಿ ಕಾವು, ಬಶೀರ್ ಕೂರ್ನಡ್ಕ, ಇಬ್ರಾಹಿಂ ಕೂರ್ನಡ್ಕ, ಸಾದಿಕೆ ಕೆಂಪಿ, ಸಿಯಾಕ್ ಕೆಂಪಿ, ಉಮ್ಮರ್ ಮಾಂತೂರು, ಉಮ್ಮರ್ ಉಪ್ಪಿನಂಗಡಿ ಮತ್ತಿತರ ಹಲವರು ಆಗಮಿಸಿ ಶುಭ ಹಾರೈಸಿದರು. ಮೊಯ್ದೀನ್ ಅಲಂಗೂರು ಅವರು ಪ್ರಥಮ ಖರೀದಿ ಮಾಡಿದರು. ಫ್ಯಾಷನ್ ವಿಝ್ ಮಾಲಕ ಅಬ್ದುಲ್ ಮಜೀದ್ ಆಲಂಗೂರು ಹಾಗೂ ಹಾರಿಸ್ ಆಲಂಗೂರು ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.
ಹಲವಾರು ವರ್ಷಗಳಿಂದ ಕುಂಬ್ರದಲ್ಲಿ ಕಾರ್ಯಾಚರಿಸುತ್ತಿರುವ ನಮ್ಮ ಫ್ಯಾಷನ್ ವಿಝ್ ಡ್ರೆಸ್ ಮಳಿಗೆಯ ಪಕ್ಕದಲ್ಲಿ ನೂತನವಾಗಿ ಫ್ಯಾನ್ಸಿ ಮತ್ತು ಫೂಟ್ ವೇರ್ ಮಳಿಗೆಯನ್ನು ಪ್ರಾರಂಭಿಸಿದ್ದೇವೆ. ನಮ್ಮಲ್ಲಿ ವಿವಿಧ ಫ್ಯಾನ್ಸಿ ಐಟಂಗಳು, ಒನ್ ಗ್ರಾಂ ಗೋಲ್ಡ್, ಶೂ ಮತ್ತು ಚಪ್ಪಲಿಗಳು, ಲೇಡೀಸ್ ಬ್ಯಾಗ್ ಲಭ್ಯವಿದೆ. ಗ್ರಾಹಕರು ಸಹಕರಿಸಬೇಕಾಗಿ ವಿನಂತಿ.
– ಅಬ್ದುಲ್ ಮಜೀದ್ ಅಲಂಗೂರು, ಮಾಲಕರು