HomePage_Banner
HomePage_Banner
HomePage_Banner
HomePage_Banner

ಜೆಡಿಎಸ್ ನೂಜಿಬಾಳ್ತಿಲ, ರೆಂಜಿಲಾಡಿ ಗ್ರಾಮ ಸಮಿತಿ ಸಭೆ ಜೆಡಿಎಸ್ ಗೆ ಸೇರ್ಪಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ನೂಜಿಬಾಳ್ತಿಲ, ರೆಂಜಿಲಾಡಿ ಗ್ರಾಮ ಸಮಿತಿಯ ಬೂತ್ ಮಟ್ಟದ ಸಭೆಯು ನೂಜಿಬಾಳ್ತಿಲದಲ್ಲಿ ನಡೆಯಿತು.

ಸಭೆಯಲ್ಲಿ
ಅಧ್ಯಕ್ಷತೆ ವಹಿಸಿದ ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್‌ರವರು ಮಾತನಾಡಿ ಮುಂದಿನ ಜಿಲ್ಲಾ ಪಂಚಾಯತ್‌ಗೆ ಹಾಗೂ ತಾಲೂಕು ಪಂಚಾಯತ್ ಗ್ರಾಮಗಳ ವಿಂಗಡಣೆ ಕುರಿತು ವಿವರವಾಗಿ ತಿಳಿಸಿದ್ದಲ್ಲದೆ ಈ ಗ್ರಾಮಗಳಿಗೆ ಹಿಂದಿನ ಕುಮಾರಸ್ವಾಮಿ ಸರಕಾರದಲ್ಲಿ ಗ್ರಾಮಾಭಿವೃದ್ಧಿಗೆ ಹಾಗೂ ರೈತರ ಸಾಲಮನ್ನಾ ಬಗ್ಗೆ ಬಡಜನತೆಗೆ ಹಾಗೂ ಅಂಗವಿಕಲರು, ವೃದ್ಯಾಪ್ಯ ವೇತನದವರಿಗೆ ಸಿಗುವ ಸವಲತ್ತುಗಳು ಪ್ರಕೃತ ಈಗ ಇಲ್ಲದೆ ಇರುವುದರಿಂದ ಹಾಗೂ ಈ ಸರಕಾರ ರಿಕ್ಷಾ ಚಾಲಕರು, ಮಡಿವಾಳರಿಗೆ, ಕುಶಲಕರ್ಮಿಗಳಿಗೆ, ಕೂಲಿ ಕಾರ್ಮಿಕರಿಗೆ, ಸಹಾಯಧನ ನೀಡುತ್ತೇವೆ ಎಂದು ಬರೇ ಘೋಷಣೆ ಮಾಡಿರುವುದಲ್ಲದೆ ಈ ತನಕ ಸಾರ್ವಜನಿಕರಿಗೆ ಏನೂ ಪ್ರಯೋಜವಾಗಿರುವುದಿಲ್ಲ ಎಂದು ಆರೋಪಿಸಿದರು.

ಮಹಿಳಾ ಘಟಕದ ಅಧ್ಯಕ್ಷೆ ಪೀಲೋಮಿನ ಸ್ಕರಿಯಾ ಮಾತನಾಡಿ ಮಹಿಳೆಯರಿಗೆ ನಿರ್ಬಯವಾಗಿ ಓಡಾಡುವ ಪರಿಸ್ಥಿತಿ ಇಲ್ಲ ಪ್ರಕೃತ ಒಂದೂವರೆ ತಿಂಗಳಿನಿಂದ ಟಿವಿ-ಮಾಧ್ಯಮದಲ್ಲಿ ಬರತಕ್ಕಂತಹ ವಿಚಾರಗಳನ್ನು ಗಮನಿಸಿದರೆ ಈ ಸರಕಾರದಲ್ಲಿ ಮಹಿಳೆಯರಿಗೆ ಮಾನ್ಯತೆ ಇರುವುದಿಲ್ಲ ಎಂದು ಹೇಳಿದರು.

ಸಭೆಯಲ್ಲಿ ತಾಲೂಕು ಉಪಾಧ್ಯಕ್ಷ ಚಂದ್ರಶೇಖರ ಗೌಡ, ಸುಂದರ ಗೌಡ, ಪ್ರಧಾನ ಕಾರ್ಯದರ್ಶಿ ಸ್ಕರಿಯಾ ಮಾಸ್ಟರ್, ಹಾಗೂ ಯುವ ಜನತಾದಳ ಅಧ್ಯಕ್ಷ ಹರಿಪ್ರಸಾದ್ ಎನ್ಕಾಜೆ, ಹಾಗೂ ಸಂಘಟನಾ ಕಾರ್ಯದರ್ಶಿ ಇ ಜೆ ಜೋಸ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.

ಜೆಡಿಎಸ್ ಗೆ ಸೇರ್ಪಡೆ
ಜಾನ್ಸನ್‌ಜಾರ್ಜ್ ಜೋಸೆಪ್, ಲೀನಿನ್ ವರ್ಗಿಸ್, ಜಾರ್ಜ್ ಇ. ಎಮ್, ಜೋಬಿನ್ ತೋಮಸ್, ಜೀಜೋ ಮ್ಯಾಥ್ಯು, ಅಭಿ ಪಿ.ಎಂ, ಸಂಜಯ್ ಎಮ್.ಎಸ್, ತೋಮಸ್ ಪಿ.ಜೆ, ಜಾನ್ಸನ್ ಪಿ.ಜೆ, ಸಂತೋಷ್ ಕೆ.ಜೆ, ಜೆಸ್ಟಿನ್,ಸಂತೋಷ್ ಎನ್.ಪಿ, ರಾಜೇಶ್ ಎನ್.ಪಿ, ಮೌಶಿನ್, ಮಜೀಲ್, ಶರತ್ ರೈ, ಅಜಿತ್, ಪ್ರವೀಣ್ ಕುಮಾರ್ ಕೆ.ವಿ, ಮೇರಿ ಸಾಮುವೆಲ್, ಲೌಲಿ ತೋಮಸ್, ಈಪನ್ ಜೋಸೆಪ್, ಉಮೇಶ್ ಕೆ.ಆರ್, ಜಾನ್ಸನ್, ಪಿಲಿಪ್ ಟಿ.ಯಂ, ತೋಮಸ್ ಕೆ.ವಿ ಮತ್ತು ಜೋಸೆಫ್ ಪಿ ಇ, ಅವರುಗಳು ಜೆಡಿಎಸ್ ಪಕ್ಕಕ್ಕೆ ಸೇರ್ಪಡೆಗೊಂಡಿದ್ದು ಅವರನ್ನು ಪಕ್ಷದ ಶಾಲು ಹೊದಿಸಿ ಬರಮಾಡಿಕೊಳ್ಳಲಾಯಿತು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.