HomePage_Banner
HomePage_Banner
HomePage_Banner
HomePage_Banner

ಬಾರ್‍ಯ: ಜಾಗದ ತಕರಾರು..!   ಇತ್ತಂಡದಿಂದ ಹೊಡೆದಾಟ, 12 ಮಂದಿಯ ವಿರುದ್ಧ ಪ್ರಕರಣ ದಾಖಲು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಬಾರ್‍ಯ ಗ್ರಾಮದ ಪುಲಿಂಬಾಡಿ ಎಂಬಲ್ಲಿ ಜಾಗದ ತಕರಾರಿಗೆ ಸಂಬಂಧಿಸಿ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದ್ದು, ಇತ್ತಂಡದ ೧೨ ಮಂದಿಯ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾರ್‍ಯ ಗ್ರಾಮದ ಪುಲಿಂಬಾಡಿ ನಿವಾಸಿ ಕೇಶವ ಗೌಡ ಎಂಬವರು ಆರೋಪಿಗಳಾದ ನೆರೆಮನೆಯ ಅಬೂಬಕ್ಕರ್, ಸಲೀಂ, ಫಾರೂಕ್, ಇರ್ಫಾನ್, ಸಾದುದ್ದೀನ್, ಸಿರಾಜ್, ನಾಸಿರ್ ಮತ್ತು ಮಸೂದ್ ಎಂಬವರು “ತಮ್ಮೊಳಗಿನ ತಕರಾರು ಇರುವ ಜಾಗಕ್ಕೆ ಬಂದು ಸೊಪ್ಪು ಹಾಗೂ ಕಟ್ಟಿಗೆ ಕಡಿಯುತ್ತಿದ್ದು, ಇದನ್ನು ಗಮನಿಸಿ ಬಂದು ವಿಚಾರಿಸಿದ ನನಗೆ ಮತ್ತು ತಂಗಿಯ ಮಗ ಸಂದೀಪ್‌ಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ” ಎಂದು ಆರೋಪಿಸಿ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಅಬೂಬಕ್ಕರ್ ಎಂಬವರು ದೂರು ನೀಡಿ “ನಮಗೆ ಸೇರಿದ ಗುಡ್ಡ ಜಾಗದಲ್ಲಿ ಕೆಲಸದಾಳುಗಳು ಸೇರಿಕೊಂಡು ಮಳೆಗಾಲಕ್ಕೆ ಬೇಕಾದ ತರಗಲೆ ಹಾಗೂ ಸೊಪ್ಪು ಒಟ್ಟುಗೂಡಿಸುತ್ತಿದ್ದಾಗ ಸ್ಥಳಕ್ಕೆ ಬಂದ ಆರೋಪಿಗಳಾದ ಕೇಶವ, ಸಂದೀಪ, ಸುಧೀರ್, ಪ್ರಕಾಶ್ ಎಂಬವರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ” ಎಂದು ಆರೋಪಿಸಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬಾರ್‍ಯ ಗ್ರಾಮದ ಪುಲಿಂಬಾಡಿ ಕೇಶವ ಗೌಡ ಮತ್ತು ಅಬೂಬಕ್ಕರ್ ಮಧ್ಯೆ ಗುಡ್ಡೆ ಜಾಗದ ತಕರಾರು ಇದ್ದು, ಈ ಜಾಗದಲ್ಲಿ ಸೊಪ್ಪು ಕಡಿಯುವಾಗಿ ಇವರೊಳಗೆ ಮಾತಿನ ಚಕಮಕಿ ನಡೆದು ಪರಸ್ಪರ ಹೊಡೆದಾಟ ನಡೆದಿದೆ. ಇತ್ತಂಡದವರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಇತ್ತಂಡದ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.