ಪುತ್ತೂರು: ಸುರತ್ಕಲ್ ಕಾಟಿಪಳ್ಳ ಶ್ರೀ ನಾರಾಯಣಗುರು ಪಿಯು ಕಾಲೇಜಿನ ಆಶ್ರಯದಲ್ಲಿ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಜರಗಿದ ಜಿಲ್ಲಾ ಮಟ್ಟದ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಬಾಲಕ-ಬಾಲಕಿಯರ ತಂಡ ವಿವಿಧ ವಿಭಾಗಗಳಲ್ಲಿ ಹಲವಾರು ಬಹುಮಾನಗಳನ್ನು ಪಡೆದುಕೊಂಡಿದೆ.
ಪ್ರಥಮ ವಾಣಿಜ್ಯ ವಿಭಾಗದ ಸುಜನ್ ಕೆ.ರವರು ೧೧೦ಮೀ. ಹರ್ಡಲ್ಸ್ ಹಾಗೂ ೪*೪೦೦ ರಿಲೇಯಲ್ಲಿ ತೃತೀಯ, ದ್ವಿತೀಯ ವಾಣಿಜ್ಯ ವಿಭಾಗದ ಮನ್ವಿತ್ರವರು ೪*೪೦೦ ರಿಲೇಯಲ್ಲಿ ತೃತೀಯ, ಪ್ರಥಮ ಕಲಾ ವಿಭಾಗದ ಮೊಹಮ್ಮದ್ ಅಮೀರ್ರವರು ೪೦೦ ಹರ್ಡಲ್ಸ್ನಲ್ಲಿ ದ್ವಿತೀಯ, ೪*೪೦೦ ರಿಲೇ ಹಾಗೂ ೪*೧೦೦ ರಿಲೇಯಲ್ಲಿ ತೃತೀಯ, ಪ್ರಥಮ ಕಲಾ ವಿಭಾಗದ ಷಣ್ಮುಖರವರು ಪೋಲ್ವಾಲ್ಟ್ನಲ್ಲಿ ತೃತೀಯ, ದ್ವಿತೀಯ ವಾಣಿಜ್ಯ ವಿಭಾಗದ ತೇಜಸ್ರವರು ೪*೪೦೦ ಹಾಗೂ ೪*೧೦೦ ರಿಲೇಯಲ್ಲಿ ತೃತೀಯ, ದ್ವಿತೀಯ ಕಲಾ ವಿಭಾಗದ ನಿಯಾಜ್ರವರು ೪*೧೦೦ ರಿಲೇಯಲ್ಲಿ ತೃತೀಯ, ದ್ವಿತೀಯ ವಿಜ್ಞಾನ ವಿಭಾಗದ ರಾಝಿ ಅಹಮ್ಮದ್ರವರು ೪*೧೦೦ ರಿಲೇಯಲ್ಲಿ ತೃತೀಯ, ಪ್ರಥಮ ವಾಣಿಜ್ಯ ವಿಭಾಗದ ವಿತಾಶ್ರೀರವರು ಹ್ಯಾಮರ್ ತ್ರೋನಲ್ಲಿ ತೃತೀಯ, ಪ್ರಥಮ ವಾಣಿಜ್ಯ ವಿಭಾಗದ ಮೊಹಮ್ಮದ್ ಶಿಫಾಝ್ರವರು ೪*೧೦೦ ರಿಲೇಯಲ್ಲಿ ತೃತೀಯ ಬಹುಮಾನಗಳನ್ನು ಗಳಿಸಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋ, ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋ, ರಾಜೇಶ್ ಮೂಲ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.