HomePage_Banner
HomePage_Banner
HomePage_Banner
HomePage_Banner

ನೂಜಿಬಾಳ್ತಿಲ ಉಚಿತ ಕೋವಿಡ್-19 ಲಸಿಕಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ.ಕ. ಸಮುದಾಯ ಆರೋಗ್ಯ ಕೇಂದ್ರ ಗ್ರಾಮ ಪಂಚಾಯಿತಿ ನೂಜಿಬಾಳ್ತಿಲ ಆಯೋಗದೊಂದಿಗೆ ಉಚಿತ ಕೋವಿಡ್ 19 ಲಸಿಕಾ ಕಾರ್ಯಕ್ರಮವು ಎಪ್ರಿಲ್ 8 ರಂದು ನಡೆಯಿತು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿ.ಪಿ ವರ್ಗಿಸ್ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು ಕೋವಿಡ್ ನಿಯಂತ್ರಣಕ್ಕೆ ಪ್ರತಿಯೊಬ್ಬರು ಮಾಸ್ಕ್ ದರಿಸುವುದು, ಸ್ವಚ್ಛತೆ, ಸಾಮಾಜಿಕ ಅಂತರವನ್ನು ಕಾಪಾಡುವುದು ಬಹಳ ಮುಖ್ಯವಾಗಿದೆ. ನಮ್ಮ ಕರ್ತವ್ಯಗಳನ್ನು ನಾವು ಮಾಡಿದರೆ ರೋಗ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯ‌. ಈಗಾಗಲೇ ಕೋವಿಡ್ ಎರಡನೆಯ ಅಲೆಯ ಬೀತಿ ಆರಂಭವಾಗಿದ್ದು ಈಗಾಗಲೇ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಉಚಿತವಾಗಿ ನೀಡಲಾಗಿದೆ 45 ವರ್ಷದವರಿಗೆ ಈ ದಿನ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಇದರಲ್ಲಿ ಯಾರು ಭಯಪಡುವ ಅಗತ್ಯವಿಲ್ಲ ಲಸಿಕೆಯನ್ನು ಪಡೆದುಕೊಂಡು ಎಲ್ಲರೂ ಆರೋಗ್ಯವಂತರಾಗಿರುವ ಎಂದರು. ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಗಂಗಮ್ಮ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಇಮ್ಯಾನುವೆಲ್ ಇವರು ಮಾತನಾಡಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸರಕಾರದ ನಿಯಮಗಳನ್ನು ಪಾಲಿಸುವುದು, ಸ್ವಚ್ಛತೆಯನ್ನು ಕಾಪಾಡುವುದು, ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳುವುದರಿಂದ ನಾವು ಸೋಂಕಿನಿಂದ ತಪ್ಪಿಸಿಕೊಳ್ಳಬಹುದು ಸುಮಾರು ಮಂದಿಗೆ 173 ಪಡೆದುಕೊಳ್ಳುವುದರಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ರೋಗವನ್ನು ತಡೆಗಟ್ಟುವ ಶಕ್ತಿ ನಮ್ಮಲ್ಲಿರುತ್ತದೆ ಎಂದರು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಳಾದ ಸುಚಿತ್ರ ರಾವ್ ಕೋವಿಡ್ 19 ಲಸಿಕೆಯ ಬಗ್ಗೆ ಮಾಹಿತಿ ನೀಡಿದರು. ಈ ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಶೇಖರ ಹಳೆ ನೂಜಿ, ವಸಂತ ಕುಬಲಾಡಿ, ಕಲ್ಲುಗುಡ್ಡೆ ಶ್ರೀಕೃಷ್ಣ ಕ್ಲಿನಿಕ್ ವೈದ್ಯರಾದ ಆಶಾ ಕೃಷ್ಣ, ಆಶಾ ಕಾರ್ಯಕರ್ತರಾದ ವಿನೋದ, ಶಿಲ್ಪ, ಮರಿಯಮ್ಮ, ಲೀಲಾ, ಜಯಂತಿ,ಸುಧಾ. ಅಂಗನವಾಡಿ ಕಾರ್ಯಕರ್ತೆಯರಾದ ಅಮೀನ.ಕೆ, ಸಾರಮ್ಮ ,ಸುಮಿತ್ರ , ಹಾಗೂ ಊರವರು ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸಹಕರಿಸಿದರು. ಗ್ರಾಮ ಪಂಚಾಯತ್ ಕಾರ್ಯದರ್ಶಿ ಗುರುವಾ ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಪಂಚಾಯಿತ್ ಅಭಿವೃದ್ಧಿ ಅಧಿಕಾರಿ ಆನಂದ ಸ್ವಾಗತಿಸಿ ವಂದಿಸಿದರು. ಕೋವಿಡ್ ಲಸಿಕಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾದಪಿ.ಪಿ ವರ್ಗಿಸ್ ಇವರು ಲಸಿಕೆಯನ್ನು ಪಡೆದುಕೊಂಡರು. ಲಸಿಕಾ ಕಾರ್ಯಕ್ರಮದಲ್ಲಿ ಕಿರಿಯ ಆರೋಗ್ಯ ಸಹಾಯಕಿ ದಯಾ ಕಿರಣ, ಅನ್ನಮ್ಮ.ವಿ.ವಿ, ರಾಜೇಶ್ವರಿ ಎನ್.ವಿ. , ಡಾಟಾ ಎಂಟ್ರಿ ಆಪರೇಟರ್ ಕಡಬ ಅನಿತಾ .ಸುಮಾರು 173 ಮಂದಿಗೆ ಕೋರೋನ ಲಸಿಕೆಯನ್ನು ನೀಡಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.