HomePage_Banner
HomePage_Banner
HomePage_Banner
HomePage_Banner

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ | ಉತ್ಸವಕ್ಕೆ ಮಾತ್ರ ಅವಕಾಶವಿರುವುದರಿಂದ ಗುಂಪು ಸೇರದಂತೆ ಮನವಿ – ಮುಳಿಯ ಕೇಶವ ಪ್ರಸಾದ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಮಾಸ್ಕ್, ಸಾನಿಟೈಸರ್, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು ಕಡ್ಡಾಯ
  • ಸ್ವಯಂ ಸೇವಕರ, ಧ್ವನಿವರ್ಧಕ ಉದ್ಘೋಷಕರ ಸೂಚನೆಗಳನ್ನು ಭಕ್ತರು ಕಡ್ಡಾಯ ಪಾಲಿಸಿ
  • ಧ್ವಜಾರೋಹಣ, ಧ್ವಜಾವರೋಹಣ ಸಂದರ್ಭದಲ್ಲಿ ದೇವಳದ ಒಳಗೆ ಪರಿಚಾರಕರನ್ನು ಹೊರತು ಪಡಿಸಿ ಭಕ್ತಾದಿಗಳಿಗೆ ಪ್ರವೇಶವಿಲ್ಲ, ಧ್ವಜಾರೋಹಣದ ಬಳಿಕ ಭಕ್ತಾದಿಗಳಿಗೆ ಸರತಿ ಸಾಲಿನಲ್ಲಿ ಅವಕಾಶ.
  • ಪೇಟೆ ಸವಾರಿಯಲ್ಲಿ ನಿಗದಿತ ಸ್ವಯಂ ಸೇವಕರು, ಪರಿವಾರದವರು ಬಿಟ್ಟು ಉಳಿದವರಿಗೆ ಅವಕಾಶವಿಲ್ಲ
  • ಕಟ್ಟೆಪೂಜೆ ಸ್ಥಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಿರ್ಬಂಧ
  • ಕಟ್ಟೆ ಪೂಜೆ ಸ್ಥಳದಲ್ಲಿಸಾರ್ವಜನಿಕ ಅನ್ನಸಂತರ್ಪಣೆ ಉಪಹಾರ ವಿತರಿಸುವುದು ನಿರ್ಬಂಧ
  • ಶ್ರೀದೇವರ ದರ್ಶನ ಬಲಿಗೆ ಒಳ ಪ್ರವೇಶಕ್ಕೆ ನಿರ್ಬಂಧ
  • ದೇವಳದ ಹೊರಗೆ ಹಾಕಿದ ಎಲ್‌ಇಡಿ ಯಲ್ಲಿ ದೇವರ ದರ್ಶನ ಬಲಿ ವೀಕ್ಷಣೆ
  • ಬಟ್ಟಲು ಕಾಣಿಕೆಯ ಸಮಯದಲ್ಲಿ ಎಲ್ಲಾ ಭಕ್ತಾದಿಗಳಿಗೆ ಸರತಿ ಸಾಲಿನಲ್ಲಿ ಅವಕಾಶ
  • ಬ್ರಹ್ಮರಥ ಎಳೆಯಲು ಸೀಮಿತ ಸ್ವಯಂಸೇವಕರಿಗೆ ಮಾತ್ರ ಅವಕಾಶ
  • ಹೊರೆಕಾಣಿಕೆಯನ್ನು ದೇವಳದ ಹೊರ ಆವರಣದಲ್ಲಿರುವ ಕೌಂಟರ್‌ನಲ್ಲಿ ಒಪ್ಪಿಸುವುದು
  • ದೇವಳದ ಗದ್ದೆಯಲ್ಲಿ ಸಂತೆ ವ್ಯಾಪಾರಕ್ಕೆ ಅವಕಾಶವಿಲ್ಲ
  • ಮಹಾಲಿಂಗೇಶ್ವರ ದೇವರ ಸಭಾಭವನದ ಒಳಗಡೆ ಸಂತೆ ವ್ಯಾಪಾರ
  • ಸಂಪ್ರದಾಯಕ್ಕೆ ತಕ್ಕಂತೆ ಸಿಡಿ ಮದ್ದು ಪ್ರದರ್ಶನ
  • ಅನುಮತಿ ಇಲ್ಲದೆ ಮೊಬೈಲ್, ವಿಡಿಯೋ ಚಿತ್ರಿಕರಣ ನಿಷೇಧ

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೆಶ್ವರ ದೇವರ ಜಾತ್ರೋತ್ಸವ ಎ.೧೦ರಿಂದ ಸಂಪ್ರದಾಯದಂತೆ ಆರಂಭಗೊಳ್ಳಲಿದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಈ ಭಾರಿ ಜಾತ್ರೆಗಿಂತಲೂ ಉತ್ಸವಕ್ಕೆ ಮಾತ್ರ ಅವಕಾಶವಿದೆ. ಹಾಗಾಗಿ ಗುಂಪು ಸೇರದಂತೆ ಕೋವಿಡ್ ನಿಯಮ ಪಾಲಿಸಿಕೊಂಡು ಉತ್ಸವ ನಡೆಯಲಿದೆ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಹೇಳಿದರು.

ಪತ್ರಿಕಾಗೋಷ್ಠಿಯ ವಿವರ ಹೀಗಿದೆ:
ಎ.೧೦ರಂದು ಧ್ವಜಾರೋಹಣ ನಡೆಯಲಿರುವುದು, ಧ್ವಜಸ್ತಂಭಕ್ಕೆ ನೀಡುವ ಹೊರೆ ಕಾಣಿಕೆಯನ್ನು ಸಮರ್ಪಿಸುವವರು ದೇವಳದ ಒಳಗೆ ೮ ಗಂಟೆಯ ಒಳಗಾಗಿ ನೀಡಬೇಕಾಗಿ ವಿನಂತಿ. ಪ್ರತಿ ದಿನ ದೇವರ ಬಲಿ ಉತ್ಸವದಲ್ಲಿ ಭಕ್ತಾಭಿಮಾನಿಗಳು ಕೋವಿಡ್ ನಿಯಮಾನುಸಾರ ಮುಖಗವಸು ಸಾನಿಟೈಸರ್ ಉಪಯೋಗಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ದೇವಸ್ಥಾನಕ್ಕೆ ಪ್ರವೇಶಿಸುವ ಸಂದರ್ಭಗಳಲ್ಲಿ ಸ್ವಯಂಸೇವಕರ ಸೂಚನೆಗಳನ್ನು ಹಾಗೂ ಧ್ವನಿವರ್ಧಕದ ಉದ್ಘೋಷಕರ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ ಸಹಕರಿಸುವುದು.

ಅಯ್ಯಪ್ಪ ಗುಡಿಯ ಬದಿಯಲ್ಲಿ ಶಾಮಿಯಾನ ಹಾಕಿರುವ ಸ್ಥಳದಲ್ಲಿ ಭಕ್ತಾದಿಗಳಿಗೆ ನೆರಳಿನ ವ್ಯವಸ್ಥೆಯನ್ನು ಮಾಡಲಾಗುವುದು, ಅಲ್ಲಿಂದ ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು. ಸಂಜೆ ದೇವರ ಬಲಿ ಹೊರಟು ಪೇಟೆ ಸವಾರಿ ಸಂದರ್ಭದಲ್ಲಿ ದೇವರೊಂದಿಗೆ ನಿಯಮಾನುಸಾರ ನಿಗದಿತ ಸ್ವಯಂಸೇವಕರು, ದೇವರ ಧ್ವಜ, ಪತಾಕೆ, ದೀವಟಿಗೆ, ಗ್ಯಾಸ್‌ಲೈಟ್ ಹಾಗೂ ವ್ಯವಸ್ಥಾಪನಾ ಸಮಿತಿ ಪರಿವಾರ ಹೊರತು ಪಡಿಸಿ ಇತರರಿಗೆ ಅವಕಾಶವಿರುವುದಿಲ್ಲ, ಕಟ್ಟೆಪೂಜೆ ನಡೆಯುವ ಸ್ಥಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಸಾರ್ವಜನಿಕ ಅನ್ನಸಂತರ್ಪಣೆ ಉಪಹಾರ ವಿತರಿಸುವುದು ನಿರ್ಬಂಧಿಸುವುದರೊಂದಿಗೆ ಸೀಮಿತ ಭಕ್ತಾದಿಗಳು ಭಾಗವಹಿಸುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಕಟ್ಟೆಯ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ.

ಎ.೧೪ರಂದು ವಿಷು ಸಂಕ್ರಮಣದ ದಿನ ದೇವಸ್ಥಾನದ ಒಳಗೆ ಸರತಿಯ ಸಾಲಿನಲ್ಲಿ ಅಯ್ಯಪ್ಪ ಗುಡಿಯ ಬಲಭಾಗದಲ್ಲಿ ವ್ಯವಸ್ಥೆ ಮಾಡಿದ ಶಾಮಿಯಾನದ ನೆರಳಿನಿಂದ ತೆರಳುವುದು. ಎ.೧೬ರಂದು ಬಲ್ನಾಡು ಶ್ರೀದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಬರುವ ಹೊತ್ತಿನಲ್ಲಿ ಭಕ್ತಾದಿಗಳು ಗುಂಪು ಸೇರದೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ವಿನಂತಿಸಲಾಗಿದೆ. ಎ.೧೭ಕ್ಕೆ ಶ್ರೀದೇವರ ದರ್ಶನಬಲಿ ಸಮಯದಲ್ಲಿ ನಿಯಮಾನುಸಾರ ದೇವಳದ ಒಳಗೆ ಬರಲು ಅವಕಾಶವಿರುವುದಿಲ್ಲ. ದೇವಳದ ಹೊರಗೆ ಹಾಕಿದ ಎಲ್‌ಇಡಿ ಯಲ್ಲಿ ದೇವರ ದರ್ಶನಬಲಿಯನ್ನು ನೋಡಬಹುದಾಗಿದೆ, ಹೊರಬದಿಯಲ್ಲಿ ನೆರಳಿಗಾಗಿ ಶಾಮಿಯಾನದ ವ್ಯವಸ್ಥೆ ಮಾಡಲಾಗುವುದು, ಬಟ್ಟಲು ಕಾಣಿಕೆಯ ಸಮಯದಲ್ಲಿ ಎಲ್ಲಾ ಭಕ್ತಾದಿಗಳನ್ನು ನಿಯಮಾನುಸಾರ ಸರತಿ ಸಾಲಿನಲ್ಲಿ ಬಿಡಲಾಗುವುದು. ಬಟ್ಟಲು ಕಾಣಿಕೆ ಹಾಕಿ ಪ್ರಸಾದ ಸ್ವೀಕರಿಸಿದ ಭಕ್ತಾದಿಗಳನ್ನು ಸರತಿಯಂತೆ ಹೊರಗೆ ಬಿಡಲಾಗುವುದು.

ಬ್ರಹ್ಮ ರಥೋತ್ಸವದ ಸಮಯದಲ್ಲಿ ಬ್ಯಾರಿಕೇಡ್ (ತಡೆಬೇಲಿ)ಯ ಮತ್ತು ಲೈಟ್ ಕಂಬದ ಮಧ್ಯದ ಬಫರ್ ಝೋನ್‌ಗೆ ಯಾರಿಗೂ ಪ್ರವೇಶ ಇರುವುದಿಲ್ಲ. ರಥ ಎಳೆಯಲು ಸೀಮಿತ ಸ್ವಯಂಸೇವಕರಿಗೆ ಮಾತ್ರ ಅವಕಾಶವಿರುವುದನ್ನು ಮನಗಂಡು ಸಹಕರಿಸಲು ಕೋರಿದೆ, ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ ಸರಕಾರದ ಸೂಚನೆಯನ್ನು ಗೌರವಿಸಬೇಕಾಗಿ ವಿನಂತಿಸಲಾಗಿದೆ. ಎ.೧೮ರಂದು ಆದಿತ್ಯವಾರ ವೀರಮಂಗಲ ಅವಭೃತಕ್ಕೆ ದೇವರು ತೆರಳುವ ಸಂದರ್ಭ ಸವಾರಿಯಲ್ಲಿ ಭಾಗವಹಿಸಲು ಭಕ್ತಾದಿಗಳಿಗೆ ಅವಕಾಶವಿರುವುದಿಲ್ಲ, ಎ.೧೯ರಂದು ಧ್ವಜಾವರೋಹಣ ಸಂದರ್ಭದಲ್ಲಿ ದೇವಳದ ಒಳಗೆ ಪರಿಚಾರಕರನ್ನು ಹೊರತು ಪಡಿಸಿ ಭಕ್ತಾದಿಗಳಿಗೆ ಒಳ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ದೇವಳಕ್ಕೆ ಸಮರ್ಪಿಸುವ ಹೊರೆಕಾಣಿಕೆಯನ್ನು ದೇವಳದ ಹೊರ ಆವರಣದಲ್ಲಿರುವ ಕೌಂಟರ್‌ನಲ್ಲಿ ಒಪ್ಪಿಸುವಂತೆ ವಿನಂತಿಸಲಾಗಿದೆ. ಈ ಎಲ್ಲಾ ನಿಯಮಗಳನ್ನು ಮನಗಂಡು ಭಕ್ತಾದಿಗಳು ಆಡಳಿತ ಮಂಡಳಿ ಅರ್ಚಕವೃಂದ ಹಾಗೂ ನೌಕರವೃಂದದೊಂದಿಗೆ ಸಹಕರಿಸಬೇಕೆಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ವಿನಂತಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ರಾಮಚಂದ್ರ ಕಾಮತ್, ರಾಮದಾಸ್ ಗೌಡ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.