HomePage_Banner
HomePage_Banner
HomePage_Banner
HomePage_Banner

ನರಿಮೊಗರು:ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿಗೆ ಅಧಿಕಾರ ಹಸ್ತಾಂತರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ನರಿಮೊಗರು ಶ್ರೀಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಲೋಕಪ್ಪ ಗೌಡ ಕರೆಮನೆಯವರ ಅಧ್ಯಕ್ಷತೆಯ ನೂತನ ವ್ಯವಸ್ಥಾಪನಾ ಸಮಿತಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮವು ಎ.೯ರಂದು ಮಧ್ಯಾಹ್ನ ನಡೆಯಿತು.

ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದ ಮುಂಡೂರು ಗ್ರಾಮಕರಣಿಕೆ ತುಳಿಸಿಯವರು ದೇವಸ್ಥಾನದ ದಾಖಲೆಪತ್ರಗಳು ಹಾಗೂ ಕೀಯನ್ನು ಅಧ್ಯಕ್ಷ ಲೋಕಪ್ಪ ಗೌಡರವರಿಗೆ ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದರು. ಅರ್ಚಕ ರಮೇಶ್ ಬೈಪಾಡಿತ್ತಾಯರವರು ಪ್ರಾರ್ಥನೆ ನೆರವೇರಿಸಿದರು. ಸದಸ್ಯರಾದ ಜನಾರ್ದನ ಜೋಯಿಷ, ನಾರಾಯಣ ನಾಯ್ಕ, ವೇದಾವತಿ, ಸಂಧ್ಯಾ ಕುಮಾರಿ, ಅವಿನಾಶ್, ನಾಗೇಶ್, ಬಾಲಚಂದ್ರ ಗೌಡ ಕಡ್ಯ, ಡಾ.ಎಂ.ಕೆ ಪ್ರಸಾದ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಮಹೇಶ್ವಂದ್ರ ಸಾಲಿಯಾನ್, ಜಯಂತ ನಡುಬೈಲು, ಸಂಜೀವ ಪೂಜಾರಿ ಕುರೆಮಜಲು, ಬಾಲಕೃಷ್ಣ ಕಣ್ಣಾರಾಯ ಬನೇರಿ, ಸುರೇಶ್ ಕಣ್ಣಾರಾಯ ಬನೇರಿ, ಮೋನಪ್ಪ ಕರ್ಕೇರಾ, ತಾ.ಪಂ ಮಾಜಿ ಸದಸ್ಯ ಯಶೋಧ, ಶರತ್ ಚಂದ್ರ ಬೈಪಾಡಿತ್ತಾಯ, ಮೋಹನ ರೈ ಓಲೆಮುಂಡೋವು, ಮುಂಡೂರು ಗ್ರಾ.ಪಂ ಸದಸ್ಯರಾದ ಕರುಣಾಕರ ಎಳಿಯ, ಉಮೇಶ್ ಅಂಬಟ, ರಸಿಕಾ ಶಿವನಾಥ ರೈ, ರಮೇಶ ಪಜಿಮಣ್ಣು, ಶಿವನಾಥ ರೈ ಮೇಗಿನಗುತ್ತು ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.

ಅಷ್ಟಮಂಗಲ ಚಿಂತನೆ ನಡೆಸಿ ಅಭಿವೃದ್ಧಿ ಕಾರ್ಯ:
ಕ್ಷೇತ್ರದಲ್ಲಿ ಮುಂದೆ ನಡೆಯಬೇಕಾಗಿರುವ ಅಭಿವೃದ್ಧಿ ಕಾರ್ಯಗಳು ಕುರಿತು ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಸಿ ಅವುಗಳ ಪ್ರಕಾರ ಮುಂದಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಅಷ್ಟಮಂಗಲ ಪ್ರಶ್ನಾ ಚಿಂತನೆಗೆ ದೈವಜ್ಞರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ದೇವರಲ್ಲಿ ಪ್ರಾರ್ಥಿಸಿ, ಭಕ್ತಾಧಿಗಳ ಸಮ್ಮುಖದಲ್ಲಿ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ಕ್ಷೇತ್ರದಲ್ಲಿ ಮುಂದೆ ನಡೆಯಲಿರುವ ಅಭಿವೃದ್ಧಿ ಕಾರ್ಯಗಳಿಗೆ ಭಕ್ತಾದಿಗಳು ಸಹಕರಿಸಿಸುವಂತೆ ಅಧ್ಯಕ್ಷ ಲೋಕಪ್ಪ ಗೌಡರವರು ಮಾನವಿ ಮಾಡಿದ್ದಾರೆ.

ಪುರಾತನ ಶಿಲಾ ಶಾಸನಕ್ಕೆ ಮತ್ತೆ ಕಾಯಕಲ್ಪ:
ದೇವಸ್ಥಾನದಲ್ಲಿದ್ದ ಸುಮಾರು ೧೦೦೦ ವರ್ಷಗಳ ಇತಿಹಾಸವಿರುವ ಪುರಾತನ ಶಾಸನವನ್ನು ಜೀರ್ಣೋದ್ಧಾರದ ಸಂದರ್ಭದಲ್ಲಿ ಕಾಮಗಾರಿಗಳಿಗೆ ಅನುಕೂಲವಾಗು ನಿಟ್ಟಿನಲ್ಲಿ ದೇವಸ್ಥಾನದ ಹೊರಬಾಗದಲ್ಲಿ ಇಡಲಾಗಿತ್ತು. ಇದಾದ ಬಳಿಕ ಆ ಪುರಾತನ ಶಿಲಾ ಶಾಸನ ಮತ್ತೆ ದೇವಸ್ಥಾನದಲ್ಲಿ ಸುಸ್ಥಿಯಲ್ಲಿಡೇ ಹಾಗೇ ಹೊರಬಾಗದಲ್ಲಿಯೇ ಇಡಲಾಗಿತ್ತು. ಇದೀಗ ನೂತನ ಆಡಳಿತ ಮಂಡಳಿಯ ಆ ಶಾಸನಕ್ಕೆ ಮತ್ತೆ ಕಾಯಕಲ್ಪ ಕಲ್ಪಿಸುವ ಕೆಲಸಕ್ಕೆ ಮುಂದಾಗಿದ್ದು ಶಾಸನವನ್ನು ಹೊರಭಾಗದಿಂದ ತೆಗೆದು ಕ್ರೇನ್ ಮೂಲಕ ದೇವಸ್ಥಾನದ ಅಂಗಣಕ್ಕೆದಲ್ಲಿ ಸುಸ್ಥಿತಿಯಲ್ಲಿಡಲಾಗಿದೆ. ಮುಂದೆ ಪ್ರಶ್ನಾ ಚಿಂತನೆ ನಡೆಸಿ ಶಾಸನಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಚಿಂತನೆ ವ್ಯವಸ್ಥಾಪನಾ ಸಮಿತಿಯ ಮುಂದಿದೆ ಎಂದು ಅಧ್ಯಕ್ಷ ಲೋಕಪ್ಪ ಗೌಡ ತಿಳಿಸಿದ್ದಾರೆ.

ಜಿಲ್ಲಾ ಧಾರ್ಮಿಕ ಸದಸ್ಯ ಭೇಟಿ:
ಕ್ಷೇತ್ರಕ್ಕೆ ಮಧ್ಯಾಹ್ನ ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಭೇಟಿ ನೀಡಿ ದೇವರ ದರ್ಶನ ಪಡೆದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.