HomePage_Banner
HomePage_Banner
HomePage_Banner
HomePage_Banner

ಆನ್ ಐರನಿಂಗ್, ಟೈಲರಿಂಗ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಕೋರ್ಟ್‌ರಸ್ತೆಯ ಮಾಯಿದೆ ದೇವುಸ್ ಚರ್ಚ್ ಕಟ್ಟಡದ ಪ್ರಥಮ ಮಹಡಿಯಲ್ಲಿ ಆನ್ ಐರನಿಂಗ್ ಮತ್ತು ಟೈಲರಿಂಗ್ ಸಂಸ್ಥೆಯು ಏ.೬ ರಂದು ಶುಭಾರಂಭಗೊಂಡಿದೆ.

ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಆಶೀರ್ವಚನಗೈದು ಮಾತನಾಡಿ, ದೇವರು ಪ್ರತಿಯೊಬ್ಬರಲ್ಲೂ ನಾನಾ ಪ್ರತಿಭೆಗಳನ್ನು ಹುದುಗಿಸಿರುತ್ತಾನೆ. ಆದರೆ ತನ್ನಲ್ಲಿದ್ದ ಪ್ರತಿಭೆಯನ್ನು ಯಾರು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುತ್ತಾರೋ ಅವರು ಯಶಸ್ವಿ ಎನಿಸಿಕೊಳ್ಳುತ್ತಾರೆ ಮಾತ್ರವಲ್ಲದೆ ಸಮಾಜವು ಕೂಡ ಗುರುತಿಸುತ್ತದೆ. ಮಹಿಳೆಯರು ಕೂಡ ನಾನಾ ಉದ್ಯೋಗಗಳನ್ನು ಮಾಡಲು ಶಕ್ತರಾಗಿದ್ದು, ಅವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಚರ್ಚ್ ಕಟ್ಟಡದಲ್ಲಿ ಐರನಿಂಗ್ ಮತ್ತು ಟೈಲರಿಂಗ್ ಸಂಸ್ಥೆಯು ಶುಭಾರಂಭಗೊಂಡಿದ್ದು, ಗ್ರಾಹಕರ ಪ್ರೋತ್ಸಾಹ ಮತ್ತು ಆಶೀರ್ವಾದ ಈ ಸಂಸ್ಥೆಯ ಮೇಲಿರಲಿ ಎಂದು ಶುಭಹಾರೈಸಿದರು.

ಮಾಯಿದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೋ, ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಕಾರ್ಯದರ್ಶಿ ಫೆಬಿಯನ್ ಗೋವಿಯಸ್ ಸಹಿತ ಹಲವರು ಆಗಮಿಸಿ ಶುಭಹಾರೈಸಿದ್ದಾರೆ. ಮಾಲಕಿ ಝೀಟಾ ಪಿಂಟೋರವರ ಪತಿ ಪೀಟರ್ ಪಿಂಟೋ, ಪುತ್ರಿ ಮವೀನಾ ಪಿಂಟೋ ಸಹಕರಿಸಿದರು.

ಸಂಸ್ಥೆಯ ಮಾಲಕಿ ಝೀಟಾ ಪಿಂಟೋರವರು ಸ್ವಾಗತಿಸಿ, ನಮ್ಮಲ್ಲಿ ಸೀರೆ ಗೊಂಡೆ, ಚೂಡಿದಾರ್ ಫಿಟ್ಟಿಂಗ್ಸ್, ಸ್ಟಿಚ್ಚಿಂಗ್ ವರ್ಕ್ಸ್, ಐರನಿಂಗ್ ಮತ್ತು ಕೀ-ಬೋರ್ಡ್ ತರಗತಿಗಳನ್ನು ನೀಡಲಾಗುವುದು. ಗ್ರಾಹಕರ ಪ್ರೀತಿ ಹಾಗೂ ಪ್ರೋತ್ಸಾಹ ಸದಾ ನಮ್ಮ ಮೇಲಿರಲಿ. ಹೆಚ್ಚಿನ ಮಾಹಿತಿಗೆ 9008119048 ನಂಬರಿಗೆ ಸಂಪರ್ಕಿಸಬಹುದು ಎಂದು ಹೇಳಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.