HomePage_Banner
HomePage_Banner
HomePage_Banner
HomePage_Banner

ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಮಾಹಿತಿ ಘಟಕದ ಆಶ್ರಯದಲ್ಲಿ ಶ್ರೀ ರಾಮ ಪದವಿ ಪೂರ್ವ ಕಾಲೇಜು, ಕಲ್ಲಡ್ಕ ಇಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮವು ಎಪ್ರಿಲ್ ೯ ರಂದು ಜರಗಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಉಪನ್ಯಾಸಕಿ ಶ್ರೀರಕ್ಷಾ ಮತ್ತು ಕಾನೂನು ಉಪನ್ಯಾಸಕ ಕೌಶಿಕ್ ಸಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ಕೌಶಿಕ್ ಸಿ, ಇಂದಿನ ಸಮಾಜದಲ್ಲಿ ಕಾನೂನಿನ ಕಲಿಯುವಿಕೆಯು ಅತೀ ಮುಖ್ಯ. ಕಾನೂನಿನ ವಿವಿಧ ಕ್ಷೇತ್ರಗಳಾದ ಬೌದ್ಧಿಕ ಸ್ವತ್ತುಗಳ ಕಾನೂನು, ನ್ಯಾಯಾಂಗ ಮುಂತಾದವುಗಳ ಸವಿಸ್ತಾರವಾದ ಉದ್ಯೋಗಾವಕಾಶಗಳಿರುವ ಕ್ಷೇತ್ರವೂ ಆಗಿರುವುದರಿಂದ ಪದವಿ ಪೂರ್ವ ಶಿಕ್ಷಣದ ನಂತರ ಕಾನೂನು ಕಲಿಯುವಿಕೆಯತ್ತ ವಿದ್ಯಾರ್ಥಿಗಳು ತಮ್ಮ ಒಲವನ್ನು ತೋರಬೇಕು ಅಲ್ಲದೇ ಇಂತಹ ಹತ್ತು ಹಲವಾರು ಉದ್ಯೋಗಾವಕಾಶಗಳನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯವು ವಿದ್ಯಾರ್ಥಿಗಳಿಗೆ ಕಲ್ಪಿಸುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕಿ ಅಮಿತಾ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.