HomePage_Banner
HomePage_Banner
HomePage_Banner
HomePage_Banner

ಬೆಟ್ಟಂಪಾಡಿ ಕಾಲೇಜಿನಲ್ಲಿ ಎನ್ನೆಸ್ಸೆಸ್ ವಾರ್ಷಿಕವರದಿ ಪುಸ್ತಕ ಅನಾವರಣ | ವರದಿಗಾರಿಕೆ ಕೌಶಲ್ಯವನ್ನು ವೃದ್ಧಿಸಿಕೊಳ್ಳಿ: ಡಾ. ವರದರಾಜ ಸಿ ಎಚ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬೆಟ್ಟಂಪಾಡಿ: ವಿದ್ಯಾರ್ಥಿಗಳು ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ಕಾರ್ಯಕ್ರಮದ ವರದಿ ತಯಾರಿಸುವುದು ಅತ್ಯಾವಶ್ಯಕ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಹೇಳಿದರು. ಎನ್ನೆಸ್ಸೆಸ್ ಘಟಕಗಳು ಹಲವಾರು ಸಮಾಜಿಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಇದರ ವಿಸ್ತೃತ ದಾಖಲಾತಿಗೆ ಸಂಬಂಧಿಸಿದಂತೆ, ಸ್ವಯಂ ಸೇವಕರು ವರದಿಗಾರಿಕೆಯ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಕರೆನೀಡಿದರು. ಅವರು ಇತ್ತೀಚೆಗೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಆಯೋಜಿಸಿದ ಕಾರ್ಯಕ್ರಮದಲ್ಲಿ ೨೦೧೯-೨೦ನೇ ಸಾಲಿನ ಎನ್ನೆಸ್ಸೆಸ್ ವಾರ್ಷಿಕ ವರದಿ ಪುಸ್ತಕವನ್ನು ಅನಾವರಣಗೊಳಿಸಿ ಮಾತನಾಡಿದರು.

ಸ್ವಯಂ ಸೇವಕರುಗಳಾದ ರಂಜಿತಾ ಜಿ, ಧನ್ಯಶ್ರೀ ಶೆಟ್ಟಿ ಎ, ಅನುಪಮ ಕೆ, ಶ್ರಾವ್ಯ ಟಿ, ಚೈತ್ರ ಬಿ ಇವರುಗಳನ್ನೊಳಗೊಂಡ ವಾರ್ಷಿಕ ವರದಿ ಸಮಿತಿ ಈ ವರದಿಯನ್ನು ತಯಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಶ್ರೀ ಹರಿಪ್ರಸಾದ್ ಎಸ್ ಮತ್ತು ಶ್ರೀ ಶಶಿಕುಮಾರ, ಘಟಕ ನಾಯಕರುಗಳಾದ ಪುಣ್ಯಶ್ರಿ ರೈ ಜಿ, ಹೃತಿಕ್ ಬಿ, ರಂಜಿತಾ ಜಿ ಮತ್ತು ನಿತಿನ್ ಉಪಸ್ಥಿತರಿದ್ದರು. ಘಟಕ ನಾಯಕಿ ಪುಣ್ಯಶ್ರಿ ರೈ ಜಿ, ಕಾರ್ಯಕ್ರಮ ನಿರೂಪಿಸಿದರು.

ಎನ್ನೆಸ್ಸೆಸ್ ಆಯೋಜಿಸುವ ಕಾರ್ಯಕ್ರಮಗಳ ವರದಿ ತಯಾರಿಸುವುದಕ್ಕೆ ಸಂಬಂಧಿಸಿದಂತೆ ಸ್ವಯಂ ಸೇವಕರ ತಂಡವೊಂದಿದ್ದು, ತಂಡದ ಸದಸ್ಯರು ಯೋಜನಾಧಿಕಾರಿಗಳ ಸಲಹೆ ಸೂಚನೆಯಂತೆ ವರದಿ ತಯಾರಿಸುತ್ತಿದ್ದಾರೆ. ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಮುದ್ರಿತವಾಗುತ್ತಿರುವ ಈ ವರದಿಗಳು ಕಾಲೇಜಿನ ಎನ್ನೆಸ್ಸೆಸ್ ಕಾರ್ಯಕ್ರಮಗಳನ್ನು ದಾಖಲಿಸಿಡುವುದರ ಜೊತೆಗೆ ಸ್ವಯಂ ಸೇವಕರ ಬರವಣಿಗೆ ಶೈಲಿಯನ್ನು ಬೆಳೆಸುವ ಉದ್ಧೇಶವನ್ನು ಇಟ್ಟುಕೊಂಡಿದೆ – ಶ್ರೀ ಹರಿಪ್ರಸಾದ್ ಎಸ್ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.