HomePage_Banner
HomePage_Banner
HomePage_Banner
HomePage_Banner

ಏ.11: ನೆಲ್ಲಿಕಟ್ಟೆ ಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಪುರುಷರ, ಮಹಿಳೆಯರ ಕ್ರೀಡಾಕೂಟ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದ.ಕ ಜಿಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್, ಪುತ್ತೂರು, ಆಶ್ರಯದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|ಬಿ.ಆರ್ ಅಂಬೇಡ್ಕರ್‌ರವರ 130ನೇ ಜನ್ಮದಿನಾಚರಣೆಯ ಪ್ರಯುಕ್ತ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಪುರುಷರಿಗೆ ಹಾಗೂ ಮಹಿಳೆಯರಿಗೆ ಕ್ರೀಡಾಕೂಟವು ಏ.11ರಂದು ಸ.ಹಿ.ಪ್ರಾ ಶಾಲೆ, ಪುತ್ತೂರು(ನೆಲ್ಲಿಕಟ್ಟೆ) ಶಾಲಾ ಮೈದಾನದಲ್ಲಿ ಜರಗಲಿದೆ.

ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್‌ನ ಸ್ಥಾಪಕ ಜಿಲ್ಲಾಧ್ಯಕ್ಷರಾದ ರಾಜು ಹೊಸ್ಮಠರವರ ಸಾರಥ್ಯದಲ್ಲಿ ಕಬಡ್ಡಿ ಹಾಗೂ ಹಗ್ಗ ಜಗ್ಗಾಟ ಕ್ರೀಡೆ ನಡೆಯಲಿದ್ದು, ಇದರ ಉದ್ಘಾಟನೆಯನ್ನು ಸಂಪ್ಯ ಶ್ರಿ ವಿಷ್ಣುಮೂರ್ತಿ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು ನೆರವೇರಿಸಲಿದ್ದಾರೆ. ಅನೇಕ ಗಣ್ಯರು ಈ ಸಂದರ್ಭದಲ್ಲಿ ಭಾಗವಹಿಸಲಿದ್ದಾರೆ.

ಪುರುಷರ ಕಬಡ್ಡಿ ಕ್ರೀಡಾಕೂಟಕ್ಕೆ ಪ್ರಥಮ ರೂ.7777, ದ್ವಿತೀಯ ರೂ.5555 ಬಹುಮಾನ ನೀಡಲಾಗುತ್ತಿದ್ದು, ಪ್ರಥಮ, ದ್ವಿತೀಯ ವಿಜೇತರು ಸೇರಿದಂತೆ ತೃತೀಯ, ಚತುರ್ಥ ಸ್ಥಾನಿಗಳಿಗೂ ವಿಶ್ವ ಮಾನವ ಡಾ|ಬಿ.ಆರ್ ಅಂಬೇಡ್ಕರ್ ಜೈ ಭೀಮ್ ಟ್ರೋಫಿಯನ್ನು ನೀಡಲಾಗುತ್ತದೆ. ಪುರುಷರ ಲೆವೆಲ್ ಮಾದರಿ(೧೦ ಜನ) ಹಗ್ಗ ಜಗ್ಗಾಟದಲ್ಲಿ ಪ್ರಥಮ ರೂ.5001, ದ್ವಿತೀಯ ರೂ.3001 ಹಾಗೂ ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ಪ್ರಥಮ ರೂ.3001, ದ್ವಿತೀಯ ರೂ.1500 ಬಹುಮಾನದೊಂದಿಗೆ ವಿಶ್ವ ಮಾನವ ಡಾ|ಬಿ.ಆರ್ ಅಂಬೇಡ್ಕರ್ ಜೈ ಭೀಮ್ ಟ್ರೋಫಿಯನ್ನು ನೀಡಲಾಗುತ್ತದೆ. ಕಡ್ಡಾಯವಾಗಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದವರಿಗೆ ಮಾತ್ರ ಪಂದ್ಯಾಟದಲ್ಲಿ ಭಾಗವಹಿಸುವ ಅವಕಾಶ ಇರುತ್ತದೆ. ಪುರುಷರ ಕಬಡ್ಡಿ ಪಂದ್ಯಾಟಕ್ಕೆ ಪ್ರವೇಶ ಶುಲ್ಕ ರೂ.700, ಪುರುಷರ ಹಗ್ಗ ಜಗ್ಗಾಟ ಪಂದ್ಯಕ್ಕೆ ಪ್ರವೇಶ ಶುಲ್ಕ ರೂ.500, ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯಕ್ಕೆ ರೂ.300ಪ್ರವೇಶ ಶುಲ್ಕವಿರುತ್ತದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9449217768,7899584033,9108599681,6364659709,9945830058,8105726353 ಸಂಪರ್ಕಿಸಿ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.