HomePage_Banner
HomePage_Banner
HomePage_Banner
HomePage_Banner

ಶಾಪಿಂಗ್ ಪ್ರಿಯರಿಗೆ ಸಿಹಿಸುದ್ದಿ… | ಮಂಗಲ್ ಸ್ಟೋರ್‍ಸ್‌ನಿಂದ ವಿಶೇಷ ಕೊಡುಗೆ; ಮೆಡಿಕಲ್ ಶಾಪ್, ವೆಟರ್ನರಿ ಪೆಟ್ ಶಾಪ್, ಖಾದಿ ಭಂಡಾರದ ಮಳಿಗೆ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  •  ಇನ್ನೂ ಒಂದೇ ಸೂರಿನಡಿಯಲ್ಲಿ ನಿಮ್ಮ ಅಚ್ಚುಮೆಚ್ಚಿನ ಶಾಪಿಂಗ್!
  •  ಸ್ವದೇಶಿ ವಸ್ತುಗಳಿಗೆ ಬೆಂಬಲ
  • ಪುತ್ತೂರಿನಲ್ಲಿ ಪ್ರಪ್ರಥಮ ಖಾದಿ ಭಂಡಾರ

ಪುತ್ತೂರು: ಬೆಳೆಯುತ್ತಿರುವ ನಗರಕ್ಕೆ ಮತ್ತೊಂದು ಗರಿ ಬಂದಿದೆ. ಗ್ರಾಹಕರಿಗೆ ಹೊಸಬಗೆಯ ಹಾಗೂ ಒಂದೇ ಸೂರಿನಡಿಯಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸು ಮೂಲಕ ನೆಹರುನಗದಲ್ಲಿರುವ ಮಂಗಲ್ ಸ್ಟೋರ್‍ಸ್ ಹೊಸ ಮುನ್ನುಡಿಯನ್ನು ಬರೆದಿದೆ.

ಮೆಡಿಕಲ್ ಶಾಪ್, ವೆಟರ್‌ರ್ನರಿ ಫಾರ್ಮಸ್ಸಿ ಹಾಗೂ ಖಾದಿ ಬಟ್ಟೆಗಳ ಭಂಡಾರ ಕಾರ್ಯಾರಂಭಗೊಳ್ಳುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸೇವಾ ಸೌಲಭ್ಯಗಳನ್ನು ಮತ್ತು ಮಾರಾಟ ವ್ಯವಸ್ಥೆಯನ್ನು ಸಂಸ್ಥೆ ಮತ್ತಷ್ಟು ವಿಸ್ತರಿಸಿದೆ. ನವೀಕೃತ ವಿಸ್ತೃತ ವಿಭಾಗದ ಉದ್ಘಾಟನೆ ಕಾರ್ಯಕ್ರಮ ಎ.೧೦ರಂದು ಜರಗಿತು. ಸುಸಜ್ಜಿತ ಮೆಡಿಕಲ್ ಮಳಿಗೆಯನ್ನು ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಕಳೆದ ೨೦ ವರುಷಗಳಿಂದ ಮಂಗಲ್ ಸ್ಟೋರ್‍ಸ್ ಗ್ರಾಹಕರ ಅಚ್ಚುಮೆಚ್ಚಿನ ಶಾಪಿಂಗ್ ಮಳಿಗೆಯಾಗಿ ಮುನ್ನಡೆಯುತ್ತಿದೆ. ಲಾಕ್‌ಡೌನ್ ಸಂದರ್ಭದಲ್ಲೂ ಗ್ರಾಹಕರಿಗೆ ಎಲ್ಲಾ ಮಟ್ಟದಲ್ಲಿ ಅಗತ್ಯ ಸಾಮಾಗ್ರಿಗಳ ಪೊರೈಕೆಯನ್ನು ಕಲ್ಪಿಸಿಕೊಟ್ಟಿದೆ. ಇದೀಗ ಮೆಡಿಕಲ್, ಖಾದಿ ಭಂಡಾರ ಮಳಿಗೆ ತೆರೆದು ಇಲ್ಲಿನ ಜನತೆಗೆ ಮತ್ತಷ್ಟು ಸಹಕಾರಿ ಎಂದ ಅವರು ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ಶುಭಹಾರೈಸಿದರು.

ಮಳಿಗೆಯ ಮಾರ್ಗದರ್ಶಕರೂ ಮಾಸ್ಟರ್ ಪ್ಲಾನರಿಯ ಮ್ಹಾಲಕ ಎಸ್.ಕೆ. ಆನಂದ್ ರವರು ಮಾತನಾಡಿ, ನಾಡಿನ ಎಲ್ಲರೂ ಸುಖದ ಬಾಳನ್ನು ಅನುಭವಿಸುವಂತಾರಬೇಕೆಂಬ ಉದ್ದೇಶದಿಂದ ಜನರ ಇಷ್ಟಾನುಸಾರದಂತೆ ಅತೀ ಕಡಿಮೆ ಮತ್ತು ನಂಬಿಕೆಯಾರ್ಹ ಸಾಮಾಗ್ರಿಗಳು ಲಭ್ಯವಾಗಬೇಕಾಗಿದೆ ಈ ನಿಟ್ಟಿನಲ್ಲಿ ಮಂಗಲ್ ಸ್ಟೋರ್‍ಸ್ ಈ ವಿಶಿಷ್ಟ ಕಾರ್ಯತೊಡಗಿಸಿಕೊಂಡಿರುವುದಕ್ಕೆ ಶ್ಲಾಘಿಸಿ ಸಂಸ್ಥೆ ಮತ್ತಷ್ಟು ಯಶಸ್ವಿಯನ್ನು ಪಡೆಯಲ್ಲಿ ಎಂದು ಶುಭಹಾರೈಸಿದರು.

ಬಿ.ಟಿ. ನಾರಾಯಣ ಭಟ್ ರವರು ಮಾತನಾಡಿ, ಈಗೀನ ಕಾಲದಲ್ಲಿ ಎಲ್ಲಾ ಆಹಾರ ಸಾಮಾಗ್ರಿಗಳು ರಾಸಾಯನಿಕ ಕಲಬೆರೆಕೆ ಮಯಾವಾಗಿವೆ, ಅಲ್ಲದೇ ಔಷಧ ವಸ್ತುಗಳು ದುಬಾರಿ ಬೆಲೆ, ಶರೀರಕ್ಕೆ ಹಾನಿಯಾಗಿ ಪರಿಣಮಿಸುತ್ತಿವೆ. ಇದೀಗ ಜನರ ಆರೋಗ್ಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಂಬಿಕಾರ್ಹ, ಉತ್ತಮ ಗುಣಮಟ್ಟ, ದ ಔಷಧ, ದಿನಸಿ ಸಾಮಾಗ್ರಿಗಳ ಪೊರೈಕೆಯಲ್ಲಿ ಮಂಗಲ್ ಸ್ಟೋರ್‍ಸ್‌ನ ಕಾರ್ಯ ಮೆಚ್ಚುವಂತಾದ್ದು ಎಂದು ಅವರು ಹೇಳಿದರು.

ಖಾದಿ ಮಳಿಗೆಯನ್ನು ಉದ್ಘಾಟಿಸಿದ ಹಾರೆಕೆರೆ ವೆಂಟ್ರಮಣ ಭಟ್ ಮಾತನಾಡಿ, ಖಾದಿ ಬಟ್ಟೆಗಳನ್ನು ಜನರಿಗೆ ಪುತ್ತೂರಿನಲ್ಲಿ ಪರಿಚಯಿಸುವುರೊಂದಿಗೆ ಜನರಲ್ಲಿ ಸ್ವದೇಶಿ ವಸ್ತುಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಿದಂತಾಗಿದೆ. ಈ ಮಹತ್ತರ ಯೋಜನೆ ರೂಪಿಸಿ ಸಂಸ್ಥೆಯನ್ನು ಶ್ಲಾಘಿಸಿದರು.

ಬಿ.ಸಿ. ರೋಡ್ ಗಣೇಶ್ ಮೆಡಿಕಲ್ಸ್‌ನ ವಿನಯ್ ರವರು ಮಾತನಾಡಿ, ಮಂಗಲ್ ಸ್ಟೋರ್‍ಸ್‌ನಲ್ಲಿ ಗ್ರಾಹಕರಿಗೆ ಬೇಡಿಕೆಗೆ ಅನುಗುಣವಾಗಿ ಎಲ್ಲಾ ರೀತಿಯಲ್ಲಿ ಔಷಧಗಳ ಪೊರೈಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಖಾದಿ ಮಳಿಗೆಯ ಅಮೋಘ ಗಾರ್ಮೆಟ್ಸ್‌ನ ಅರವಿಂದ್ ರವರು ಮಾತನಾಡಿ, ಪ್ರಪ್ರಥಮವಾಗಿ ಪುತ್ತೂರಿನಲ್ಲಿ ಖಾದಿ ಬಟ್ಟೆಗಳ ಮಳಿಗೆ ಆರಂಭಿಸಿರುವ ಮಂಗಲ್ ಸ್ಟೋರ್‍ಸ್‌ನಲ್ಲಿ ವಿಶೇಷ ವಿನ್ಯಾಸವುಳ್ಳ ಬಟ್ಟೆಗಳು ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಮಹಿಳೆಯರಿಗಾಗಿ ಬಟ್ಟೆ ಸಂಗ್ರಹ ಮಳಿಗೆಯನ್ನು ತೆರೆಯಲಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಕಾಶ್, ರೇಖಾ ಅನಂದ್, ಅರ್ಜುನ್, ಸುದರ್ಶನ್, ತಿಮ್ಮಪ್ಪಯ್ಯ, ಸವಿತಾ, ಅಕ್ಷಯ್, ಲಕ್ಷ್ಮೀ ರಾಘವೇಂದ್ರ, ಮುಕ್ತ ನಾಯಕ್, ಅನುಷಾ ನಾಯಕ್, ಅರತಿ, ವೈಷ್ಣವಿ, ಚಂದ್ರ ಶೇಖರ್, ಅರುಣಾ ನಾಯಕ್, ನವೀನ್ ನಾಯಕ್ ಸಹಿತ ಮತ್ತಿತರರು ಉಪಸ್ಥಿತರಿದ್ದರು. ಮಳಿಗೆಯ ಪಾಲುದಾರ ರಾಘವೇಂದ್ರ ನಾಯಕ್ ಸ್ವಾಗತಿಸಿದರು. ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.

ನಮ್ಮ ಮಳಿಗೆಯಲ್ಲಿ ದಿನಸಿ ಸಾಮಾಗ್ರಿಗಳು, ಗಿಫ್ಟ್ ಐಟಂಗಳು, ಚಾಟ್ಸ್ ಐಟಂಗಳು, ತಾಜಾ ತರಕಾರಿಗಳು, ಪೊಪ್ಯುಲರ್ ಸ್ವೀಟ್ಸ್ ಕೌಂಟರ್, ಫ್ರೆಶ್ ಜ್ಯೂಸ್, ತಾಜಾ ಹಣ್ಣುಹಂಪಲು, ಪತಂಜಲಿ ಉತ್ಪನ್ನಗಳು, ಪಾಪ್‌ಕಾರ್ನ್ ಕೌಂಟರ್, ನಂದಿನಿ ಹಾಲು, ಹಾಲಿನ ಉತ್ಪನ್ನಗಳು, ದೇಸಿ ಉತ್ಪಾನದವರ ಸಾವಯವ, ನೈಸರ್ಗಿಕ, ಆಯುರ್ವೇದ ಉತ್ಪನ್ನಗಳು, ೧೦ ಪ್ರಸಿದ್ಧ ಕಂಪನಿಗಳ ಐಸ್‌ಕ್ರೀಂ, ಚೈನೀಸ್ ಫುಡ್ ಐಟಂ, ಕೆಎಸ್‌ಆರ್‌ಟಿಸಿ ಟಿಕೆಟ್ ಬುಕ್ಕಿಂಗ್, ಸರ್ವಮಂಗಲ್ ಶುಭ ಸಮಾರಂಭಗಳ ದಿನಸಿ ಸಾಮಾಗ್ರಿ ಹಾಗೂ ತಾಜಾ ತರಕಾರಿಗಳ ಬುಕ್ಕಿಂಗ್‌ಗಾಗಿ, ಕ್ಯಾಂಪ್ಕೋ ವಿಶೇಷ ಕೌಂಟರ್, ಪ್ಲಾಸ್ಟಿಕ್ ಐಟಂಗಳು ಲಭ್ಯವಿದೆ. ಅಲ್ಲದೇ ಗ್ರಾಹಕರ ನಿರಂತರ ಪ್ರೋತ್ಸಾಹವೇ ಮಳಿಗೆಯು ತನ್ನ ಸೇವಾ ಜಾಲವನ್ನು ವಿಸ್ತರಿಸಲು ಕಾರಣವಾಗಿದೆ.
– ರಾಘವೇಂದ್ರ ನಾಯಕ್
ಪಾಲುದಾರರು, ಮಂಗಲ್ ಸ್ಟೋರ್‍ಸ್

ಮಂಗಲ್ ಸ್ಟೋರ್ ವಿಶೇಷತೆಗಳು
ಗುಣಮಟ್ಟದ ಉತ್ಪನ್ನಗಳು, ಸ್ಪರ್ಧಾತ್ಮಕ ದರ, ಗ್ರಾಹಕ ಸ್ನೇಹಿ ಸಿಬಂದಿಗಳ ನಗುಮುಖದ ಸ್ವಾಗತ, ಭರವಸೆಯ ಖರೀದಿ, ವಿಶಾಲವಾದ ಪಾರ್ಕಿಂಕ್, ತ್ವರಿತ ಬಿಲ್ಲಿಂಗ್ ಸೆಂಟರ್, ಗ್ರಾಹಕ ಸಂತೃಪ್ತಿಯ ಸೇವೆ ಇಲ್ಲಿಯ ವಿಶೇಷತೆಗಳಾಗಿವೆ. ಒಮ್ಮೆ ಮಂಗಲ್ ಸ್ಟೋರ್‌ಗೆ ಭೇಟಿ ಕೊಟ್ಟರೆ ಮತ್ತೆ ಮತ್ತೆ ಹೋಗಬೇಕೆನ್ನುವ ಆಸೆ ಹುಟ್ಟುತ್ತದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.