HomePage_Banner
HomePage_Banner
HomePage_Banner
HomePage_Banner

ರಾಜ್ಯ ಸರಕಾರದ ಸಕಾಲ ಮುಖ್ಯ ಕಾರ್ಯನಿರ್ವಾಹಕ ವಿಜಯ ಭಾಸ್ಕರ್ ಮೇದಿನಿ ಜನಸೇವಾ ಕೇಂದ್ರಕ್ಕೆ ಭೇಟಿ-ಪ್ರಶಂಸೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಡಿಜಿಟಲ್ ಸೇವಾ ಸಿಂಧೂ ಯೋಜನೆಯಡಿಯಲ್ಲಿ ಕರ್ನಾಟಕ ಸರಕಾರದ ಜನಸೇವಾ ಕಾರ್ಯಗಳನ್ನು ಜನರಿಗೆ ಮುಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ, `ಉತ್ತಮ ಸೇವಾ ಕೇಂದ್ರ’ ಎಂಬ ಪ್ರಶಸ್ತಿಗೆ ಭಾಜನರಾದ ಇಲ್ಲಿನ ಕೋರ್ಟ್‌ರಸ್ತೆಯ ಪುತ್ತೂರು ಸೆಂಟರ್ ಎದುರುಗಡೆಯ ನಗರಸಭಾ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇದಿನಿ ಜನಸೇವಾ ಕೇಂದ್ರಕ್ಕೆ ಕರ್ನಾಟಕ ಸರಕಾರದ ಸಕಾಲ ಮುಖ್ಯ ಕಾರ್ಯ ನಿರ್ವಾಹಕರಾದ ವಿಜಯ ಭಾಸ್ಕರ್‌ರವರು ಏ.೯ ರಂದು ಭೇಟಿ ನೀಡಿ ಕೇಂದ್ರವು ನೀಡುವ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಕರ್ನಾಟಕ ಸರಕಾರದ ಸಕಾಲ ಮುಖ್ಯ ಕಾರ್ಯ ನಿರ್ವಾಹಕರಾದ ವಿಜಯ ಭಾಸ್ಕರ್‌ರವರೊಂದಿಗೆ ಪುತ್ತೂರು ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್, ತಹಶೀಲ್ದಾರ್ ರಮೇಶ್ ಬಾಬು, ಪುತ್ತೂರು ಕಸಬಾ ಗ್ರಾಮಕರಣಿಕ ಮಹೇಶ್, ಉಡುಪಿ ಜಿಲ್ಲಾ ಆಹಾರ ಅಧಿಕಾರಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕರ್ನಾಟಕದಾದ್ಯಂತ ಕಾರ್ಯನಿರ್ವಹಿಸುತ್ತಿರುವ ೧೭೦೦ ಸೇವಾ ಕೇಂದ್ರಗಳಲ್ಲಿ ಉತ್ತಮ ಜನಸೇವಾ ಕೇಂದ್ರ ಪ್ರಶಸ್ತಿಯು ಕೇವಲ ಹತ್ತು ಸೇವಾ ಕೇಂದ್ರಗಳಿಗೆ ಲಭಿಸಿತ್ತು. ಅದರಲ್ಲೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಮಂಗಳೂರು, ಪುತ್ತೂರು ಹಾಗೂ ಉಡುಪಿ ಇಲ್ಲಿನ ಮೂರು ಸೇವಾ ಕೇಂದ್ರಗಳು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಪುತ್ತೂರು ತಾಲೂಕಿನಲ್ಲಿ ಮೇದಿನಿ ಜನಸೇವಾ ಕೇಂದ್ರಕ್ಕೆ ಈ ಪ್ರಶಸ್ತಿ ಲಭಿಸಿರುವುದು ಹೆಗ್ಗಳಿಕೆ ಎನಿಸಿದೆ.

ಸಂಸ್ಥೆಯ ಮುಖ್ಯಸ್ಥೆ ಸರಿತಾ ನವೀನ್‌ರವರು ಸ್ವಾಗತಿಸಿ, ಸಂಸ್ಥೆಯು ಅಗತ್ಯ ಸೇವೆಗಳಾದ ಪಾನ್‌ಕಾರ್ಡ್ ತಕ್ಷಣ, ರೇಶನ್ ಕಾರ್ಡ್ ಅರ್ಜಿ, ರೇಶನ್ ಕಾರ್ಡ್ ಪ್ರಿಂಟ್, ವಿದ್ಯಾಸಾರಥಿ ಸ್ಕಾಲರ್‌ಶಿಪ್, ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಡೌನ್‌ಲೋಡ್, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತ ಸ್ಕಾಲರ್‌ಶಿಪ್, ಜೀವನ್ ಪ್ರಮಾಣ್ ಪತ್ರ, ಜಾತಿ ಆದಾಯ, ಖಜಾನೆ-೨, ಕರ್ನಾಟಕದ ಎಲ್ಲಾ ಜಿಲ್ಲೆಯ ಆರ್.ಟಿ.ಸಿ, ವಾಸ್ತವ್ಯ ಪ್ರಮಾಣ ಪತ್ರ, ಸ್ಮಾರ್ಟ್ ಕಾರ್ಡ್ ಪ್ರಿಂಟ್(ಡಿ.ಎಲ್ ಮತ್ತು ಆರ್.ಸಿ), ಹಿರಿಯ ನಾಗರಿಕರ ಕಾರ್ಡ್‌ಗೆ ಅರ್ಜಿ, ನವೋದಯ ಶಾಲೆಯ ಅರ್ಜಿ, ಪಾಸ್‌ಪೋರ್ಟ್‌ಗೆ ಅರ್ಜಿ, ಜೆರಾಕ್ಸ್ ಮತ್ತು ಕಲರ್ ಜೆರಾಕ್ಸ್, ವೋಟರ್ ಐಡಿ, ಸರಕಾರಿ ಹುದ್ದೆಗೆ ಅರ್ಜಿ, ಲೈಫ್ ಇನ್ಸೂರೆನ್ಸ್ ಅಲ್ಲದೆ ಇನ್ನಿತರ ಆನ್‌ಲೈನ್ ಸೇವೆಗಳೊಂದಿಗೆ, ಐಸಿಐಸಿಐ ಲೋಂಬಾರ್‍ಡ್ ಮೋಟಾರ್ ಕಾಂಪ್ರೆಹೆನ್ಸಿವ್ ಇನ್ಸೂರೆನ್ಸ್, ಮೋಟಾರ್ ಕಾಂಪ್ರೆಹೆನ್ಸಿವ್ ಯೂನಿವರ್ಸಲ್ ಸೋಂಪೊ ಜನರಲ್ ಇನ್ಸೂರೆನ್ಸ್, ರಿಲಯನ್ಸ್ ಮೋಟಾರ್ ಕಾಂಪ್ರೆಹೆನ್ಸಿವ್ ಇನ್ಸುರೆನ್ಸ್ ಜೊತೆಗೆ ಇಪಿಎಫ್ ಕ್ಲೈಮ್, ಇ-ನಾಮಿನಿ ವ್ಯವಸ್ಥೆಯನ್ನು ಕ್ಲಪ್ತ ಸಮಯದಲ್ಲಿ ಗ್ರಾಹಕರಿಗೆ ಒದಗಿಸುವ ವ್ಯವಸ್ಥೆ ಮಾಡುತ್ತಿದ್ದೇವೆ ಅದಲ್ಲದೆ ಗ್ರಾಹಕರ ಅನೂಕಲತೆಗೆ ತಕ್ಕಂತೆ ಮಿನಿವಿಧಾನ ಸೌಧದ ಬಳಿಯ ಸರಕಾರಿ ನೌಕರರ ಸಂಘದ ಸಮುದಾಯ ಭವನ ಕಟ್ಟಡದಲ್ಲಿ ಮತ್ತೊಂದು ಶಾಖೆಯನ್ನು ತೆರೆದು ಸೇವೆಯನ್ನು ನೀಡುತ್ತಿದ್ದೇವೆ ಎಂದು ಕರ್ನಾಟಕ ಸರಕಾರದ ಸಕಾಲ ಮುಖ್ಯ ಕಾರ್ಯ ನಿರ್ವಾಹಕರಾದ ವಿಜಯ ಭಾಸ್ಕರ್‌ರವರಿಗೆ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.