HomePage_Banner
HomePage_Banner
HomePage_Banner
HomePage_Banner

ಏ.11: ಪೆರ್ನೆ ವಿಷ್ಣುಮೂರ್ತಿ ಫ್ರೆಂಡ್ಸ್ ಕ್ರಿಕೆಟರ್‍ಸ್‌ರವರಿಂದ ವಿ.ಎಫ್.ಸಿ ಟ್ರೋಫಿ ಕ್ರಿಕೆಟ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಿಷ್ಣುಮೂರ್ತಿ ಫ್ರೆಂಡ್ಸ್ ಕ್ರಿಕೆಟರ್‍ಸ್ ಪೆರ್ನೆ ಇದರ ಆಶ್ರಯದಲ್ಲಿ ಪ್ರತಿಷ್ಠಿತ ೨೪ ತಂಡಗಳ, ೧೧ ಜನರ ಮುಕ್ತ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ `ವಿ.ಎಫ್.ಸಿ ಟ್ರೋಫಿ-೨೦೨೧’ ಏ.೧೧ ರಂದು ಪೆರ್ನೆ ಶ್ರೀರಾಮಚಂದ್ರ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ.

ಉದ್ಘಾಟನೆಯನ್ನು ಸಂಪ್ಯ ಶ್ರಿ ವಿಷ್ಣುಮೂರ್ತಿ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು ನೆರವೇರಿಸಲಿದ್ದು, ಪ್ರಗತಿಪರ ಕೃಷಿಕ ಗಿರೀಶ್ ಪೆರ್ಗಡೆ, ಪೆರ್ನೆ ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷ ತೋಯಾಜಾಕ್ಷ ಶೆಟ್ಟಿ, ಪೆರ್ನೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುನಿಲ್ ಪಿಂಟೋ, ಮಾಜಿ ಅಧ್ಯಕ್ಷ ಜಾರಪ್ಪ ಗೌಡ ಹನುಮಾಜೆ, ಪೆರ್ನೆ ಆತ್ಮೀಯಾ ಫ್ರೆಂಡ್ಸ್ ಅಧ್ಯಕ್ಷ ಮಹಮ್ಮದ್ ಫಾರೂಕ್, ಪ್ರಗತಿಪರ ಕೃಷಿಕ ನಾರಾಯಣ ಮಣಿಯಾಣಿರವರು ಭಾಗವಹಿಸಲಿದ್ದಾರೆ.

ಸಂಜೆ ಸಮಾರೋಪ ಸಮಾರಂಭ ಜರಗಲಿದ್ದು, ವ್ಯಾಘ್ರಚಾಮುಂಡಿ ದೈವಸ್ಥಾನ(ರಿ.)ಕೊರತ್ತಿಕಟ್ಟೆ ಮಾಡತ್ತಾಯ ಪೆರ್ನೆ ಇದರ ಅಧ್ಯಕ್ಷರಾದ ಕಿರಣ್ ಶೆಟ್ಟಿ ಮುಂಡವಿನಕೋಡಿರವರು ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಸಹಿತ ಹಲವಾರು ಗಣ್ಯರು ಉಪಸ್ಥಿತಲಿರುವರು ಎಂದು ಪ್ರಕಟಣೆ ತಿಳಿಸಿದೆ.

ಪ್ರಥಮ: ರೂ.೧೦,೦೦೧ ಮತ್ತು ವಿ.ಎಫ್.ಸಿ ಟ್ರೋಫಿ
ದ್ವಿತೀಯ: ರೂ.೬೦೦೧ ಮತ್ತು ವಿ.ಎಫ್.ಸಿ ಟ್ರೋಫಿ
ಉತ್ತಮ ಬ್ಯಾಟ್ಸ್‌ಮ್ಯಾನ್, ಉತ್ತಮ ಬೌಲರ್, ಉತ್ತಮ ಅಲ್‌ರೌಡರ್ ಪ್ರಶಸ್ತಿ ನೀಡಲಾಗುವುದು

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.