HomePage_Banner
HomePage_Banner
HomePage_Banner
HomePage_Banner

ಏ.24-25:ನುಳಿಯಾಲು ತರವಾಡು ಮನೆಯಲ್ಲಿ ಧರ್ಮ ನೇಮೋತ್ಸವ-ಇಂದು ಚಪ್ಪರ ಮುಹೂರ್ತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸುಮಾರು ೪೦೦ ವರ್ಷಗಳ ಇತಿಹಾಸವಿರುವ ನುಳಿಯಾಲು ತರವಾಡು ಶ್ರೀ ಧರ್ಮಚಾವಡಿ, ನಿಡ್ಪಳ್ಳಿ ಇಲ್ಲಿನ ನುಳಿಯಾಲು ತರವಾಡು ಮನೆಯಲ್ಲಿ ಏ.೨೪ ಮತ್ತು ೨೫ ರಂದು ಸಮಸ್ತ ದೈವಗಳಿಗೆ ಜರಗುವ ಧರ್ಮ ನೇಮೋತ್ಸವ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಆ ಪ್ರಯುಕ್ತ ಏ.11 ರಂದು ಚಪ್ಪರ ಮುಹೂರ್ತ ಕಾರ್ಯಕ್ರಮ ಜರಗಲಿರುವುದು.

ಸುಮಾರು ೨ ಕೋಟಿ ರುಪಾಯಿ ವೆಚ್ಚದಲ್ಲಿ ಧರ್ಮಚಾವಡಿಯಿಂದ ಹಿಡಿದು ತರವಾಡು ಮನೆ ಎಲ್ಲವೂ ನೂತನವಾಗಿ ನಿರ್ಮಾಣಗೊಂಡು ಮೂರು ವರ್ಷದ ಹಿಂದೆ ಬ್ರಹ್ಮಕಲಶೋತ್ಸವ ನಡೆದು ಕಂಗೊಳಿಸುತ್ತಿರುವ ಶ್ರೀ ಕ್ಷೇತ್ರದಲ್ಲಿ ಪ್ರಸಕ್ತ ಜರಗುವ ಧರ್ಮ ನೇಮೋತ್ಸವ ಧಾರ್ಮಿಕ ಕಾರ್ಯಕ್ರಮಕ್ಕೆ ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿರವರ ಮಾರ್ಗದರ್ಶನದಲ್ಲಿ ಚಪ್ಪರ ಮುಹೂರ್ತ ಕಾರ್ಯಕ್ರಮ ಜರಗಲಿದ್ದು, ಅನೇಕ ಗಣ್ಯರು ಈ ಸಂದರ್ಭದಲ್ಲಿ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವರು. ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ ಅಲ್ಲದೆ ಶ್ರೀ ಕ್ಷೇತ್ರದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತಾಧಿಗಳು ಕೋವಿಡ್ ನಿಯಮವನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಶ್ರೀ ಕ್ಷೇತ್ರದ ಯಜಮಾನರಾದ ಜಗನ್ನಾಥ ರೈ ನುಳಿಯಾಲು, ಧರ್ಮನೇಮ ಸೇವೆಯ ಸೇವಾಕರ್ತರಾದ ಮಂಗಳೂರು ಯಮುನಾ ಗ್ರೂಪ್ಸ್‌ನ ಪುರುಷೋತ್ತಮ ಆರ್.ಶೆಟ್ಟಿ ನುಳಿಯಾಲು, ಶ್ರೀಮತಿ ಅಶ್ವಿನಿ ಪಿ.ಶೆಟ್ಟಿ, ಆರ್ಯನ್ ಪಿ.ಶೆಟ್ಟಿ, ಆದಿತ್ಯ ಪಿ.ಶೆಟ್ಟಿ ಹಾಗೂ ನುಳಿಯಾಲು ತರವಾಡು ಬಾರಿಕೆ ಟ್ರಸ್ಟ್‌ನ ಸಮಸ್ತ ಕುಟುಂಬಸ್ಥರು ಮತ್ತು ಬಂಧುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.