HomePage_Banner
HomePage_Banner
HomePage_Banner
HomePage_Banner

ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರವರ ತರವಾಡು ಮನೆ | ಕುಂಜಾಡಿಯಲ್ಲಿ ಧರ್ಮ ನೇಮೋತ್ಸವ ಸಂಪನ್ನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಹೊಸತನಗಳಿಗೆ ಸಾಕ್ಷಿಯಾಯಿತು ಧರ್ಮ ನೇಮೋತ್ಸವ

 

ಸುಧಾಕರ ಆಚಾರ್ಯ ಕಾಣಿಯೂರು

ಕಾಣಿಯೂರು: ಐನೂರು ವರ್ಷಗಳ ಇತಿಹಾಸ ಹೊಂದಿರುವ ಪಾಲ್ತಾಡಿ ಗ್ರಾಮದ ಪ್ರತಿಷ್ಠಿತ ಕೆಳಗಿನ ಕುಂಜಾಡಿ ದ.ಕ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರವರ ತರವಾಡು ಮನೆಯಲ್ಲಿ ಧರ್ಮ ನೇಮೋತ್ಸವವು ಎ ೮ರಂದು ಪ್ರಾರಂಭಗೊಂಡ ಧರ್ಮ ನೇಮೋತ್ಸವವು ಎ ೧೦ರಂದು ಬೆಳಿಗ್ಗೆ ಸಂಪನ್ನಗೊಂಡಿದೆ. ಕುಂಜಾಡಿ ಕೆಳಗಿನ ಮನೆಯಲ್ಲಿ ನಡೆದ ಧರ್ಮ ನೇಮೋತ್ಸವವು ಅನೇಕ ಹೊಸತನಗಳಿಗೆ ಸಾಕ್ಷಿಯಾಯಿತು. ಗ್ರಾಮೀಣ ಭಾಗದಲ್ಲಿ ಭೂತ ನೇಮಗಳು ಸಾಮಾನ್ಯವೇ ಆದರೂ ಅರವತ್ತು ವರ್ಷಗಳ ಬಳಿಕ ನಡೆದ ಈ ಧರ್ಮ ನೇಮ ವಿಜೃಂಭಣೆಯಿಂದ ಕಂಗೊಳಿಸಿತು. ದ.ಕ ಸಂಸದ ಹಾಗೂ ಬಿ.ಜೆ.ಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಂದಾಳತ್ವದ ಕಾರ್ಯಕ್ರಮವಾದ್ದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರದ ಸಚಿವರುಗಳು ಹಾಗೂ ಸಂಸದರು, ಅನೇಕ ಜನ ಪ್ರತಿನಿಧಿಗಳು, ಅಧಿಕಾರಿಗಳು, ಸಾಮಾಜಿಕ, ಧಾರ್ಮಿಕ ಮುಖಂಡರುಗಳು ಕಾರ್ಯಕ್ರಮದುದ್ದಕ್ಕೂ ಭಾಗವಹಿಸಿದ್ದರು.

ಧರ್ಮನೇಮೋತ್ಸವದ ಅಂಗವಾಗಿ ನಿರಂತರ ಭಜನಾ ಸಂಕೀರ್ತನೆಯು ನಡೆದವು.. ಕೆಳಗಿನ ಕುಂಜಾಡಿಯಲ್ಲಿ ಎರಡು ದಿನಗಳ ಕಾಲ ನಡೆದ ದೈವಾರಧನೆಗಳಿಗೆ ದೈವಗಳ ಭಂಡಾರವು ಮೂರು ಮನೆಗಳಿಂದ ಭಂಡಾರ ಬಂದಿದ್ದು ಬಂಬಿಲ ಗುತ್ತಿನ ಮನೆಯಿಂದ ಉಲ್ಲಾಕ್ಲು ದೈವ ಪಡ್ಯೊಟ್ಟು ಮನೆಯಿಂದ ಗ್ರಾಮದೈವ ಅಬ್ಬೆಜಾಲಾಯ, ಸರ್ವೆ ಮನೆಯಿಂದ ಪಿಲಿಭೂತ, ವರ್ಣರ ಪಂಜುರ್ಲಿ,ಜಾವತೆ,ಕಲ್ಲುರ್ಟಿ,ಗುಳಿಗ ದೈವಗಳ ಭಂಡಾರ ಹಾಗೂ ಕುಂಜಾಡಿ ಮೂಲಸ್ಥಾನದಿಂದ ರಕ್ತೇಶ್ವರಿ ದೈವದ ಭಂಡಾರ ತಂದು ರಾತ್ರಿಯ ವೇಳೆ ನೇಮ ಜರುಗಿತು.

ಜೊತೆಗೆ ನಿರಂತರ ಪ್ರಸಾದ ವಿತರಣೆಯು ನಡೆಯಿತು. ಧರ್ಮನೇಮದಲ್ಲಿ ದಾನ-ಧರ್ಮಕ್ಕೆ ಮೊದಲ ಪ್ರಾಶಸ್ತ್ಯ ..ಅಂತೆಯೇ ಕೆಳಗಿನ ಕುಂಜಾಡಿಯಲ್ಲೂ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ನಿರಂತರ ಅನ್ನದಾನ ಹಾಗೂ ಉಪಹಾರದ ವ್ಯವಸ್ಥೆ ನಡೆಯಿತು. ಬೆಳಗ್ಗೆ ಮತ್ತು ಸಂಜೆ ಉಪಹಾರ,ಮಧ್ಯಾಹ್ನ ಹಾಗೂ ರಾತ್ರಿ ಭೋಜನವನ್ನು ಸಾವಿರಾರು ಭಕ್ತಾದಿಗಳು ಸ್ವೀಕರಿಸಿದರು.

ಒಂದೆಡೆ ಬಫೆ ವ್ಯವಸ್ಥೆಯಿದ್ದರೆ ಇನ್ನೊಂದೆಡೆ ಕುಳಿತು ಊಟ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ದಣಿದು ಬಂದವರಿಗೆ ಪಾನೀಯ,ಕಬ್ಬು ಜ್ಯೂಸ್ ಹಾಗೂ ಮಜ್ಜಿಗೆ ನೀಡಲಾಯಿತು. ವಿಶೇಷ ಅಂದರೆ ಈ ಧರ್ಮ ನೇಮೋತ್ಸವ ಒಂದು ಕುಟುಂಬದ ಕಾರ್ಯಕ್ರಮವಾಗಿ ಆಯೋಜನೆಗೊಂಡಿರಲಿಲ್ಲ. ಬದಲಾಗಿ ಊರ, ಪರವೂರ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಹಿಂದೂ ಸಮಾಜದ ಏಕತೆಯ ಸಂಕೇತವಾಗಿ ಇಲ್ಲಿನ ಕಾರ್ಯಕ್ರಮಗಳು ಮೂಡಿಬಂದವು. ಇದೊಂದು ಊರಿನ ಹಬ್ಬದ ರೀತಿಯ ಪರಿಕಲ್ಪನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಊರ ಪರವೂರಿನ ಭಕ್ತಾಭಿಮಾನಿಗಳ ತುಂಬು ಸಹಕಾರ ದೊರೆತಿದೆ. ಕಾರ್ಯಕ್ರಮವು ಗ್ರಾಮದ ಜನತೆಗೆ ಹಬ್ಬದ ವಾತವರಣ ಸೃಷ್ಠಿಸಿದೆ. ಇಡೀ ಗ್ರಾಮವೇ ಕಾರ್ಯಕ್ರಮದ ಸಲುವಾಗಿ ಶ್ರಂಗಾರಗೊಂಡಿದವು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.