HomePage_Banner
HomePage_Banner
HomePage_Banner
HomePage_Banner

ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಜ್ಞಾನ ನೀಡಿದ ವಿದ್ಯಾ ದೇಗುಲದ ಪ್ರೀತಿಯ ಪ್ರತಿರೂಪ; ಬಿಳಿನೆಲೆಯಲ್ಲಿ ನಡೆದ ಸ್ನೇಹಮಿಲನ ಉದ್ಘಾಟಿಸಿ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಹಳೆಯ ವಿದ್ಯಾರ್ಥಿಗಳು ಜತೆಯಾಗಿ ಕಲಿತ ವಿದ್ಯಾಸಂಸ್ಥೆಯಲ್ಲಿ ಸಮ್ಮಿಲನಗೊಳ್ಳುವುದು ಸ್ಪೂರ್ತಿಯ ಸಂಕೇತ.ಇದು ಜ್ಞಾನ ನೀಡಿದ ವಿದ್ಯಾ ದೇಗುಲದ ಮೇಲಿನ ಪ್ರೀತಿಯ ಪ್ರತಿರೂಪ.ವಿದ್ಯಾಲಯದಲ್ಲಿ ಅದ್ಯಾಪಕರಾಗಿದ್ದವರು ಎಲ್ಲಾ ಕಾಲಕ್ಕೂ ಸಲ್ಲುವವರಾಗಿದ್ದು ಅವರಿಗೆ ನಿವೃತ್ತಿ ಎನ್ನುವುದು ಇಲ್ಲ. ಗುರುಗಳ ಸ್ಪೂರ್ತಿ ಎಲ್ಲಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪ್ರಗತಿಗೆ ಚಿಲುಮೆಯಾಗುತ್ತದೆ.ಕ್ರೀಡಾ ಅಧ್ಯಾಪಕರು ಶಿಷ್ಯರಿಗೆ ಬದುಕುವ ಶಿಕ್ಷಣ ಕಲಿಸುವ ಗುರುವಾದುದರಿಂದ ಅವರು ವಿದ್ಯಾರ್ಥಿಗಳ ಮನದಲ್ಲಿ ಸದಾ ಹಸಿರಾಗಿರುತ್ತಾರೆ ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಸ್ನೇಹ ಸಮ್ಮಿಲನ ಸಮಿತಿ, ಪ್ರಾಕ್ತನ ವಿದ್ಯಾರ್ಥಿ ಸಂಘ ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ಬಿಳಿನೆಲೆ, ಶ್ರೀ ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ ಇದರ ಆಶ್ರಯದಲ್ಲಿ ಶನಿವಾರ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಗುರುವಂದನಾ ಹಾಗೂ ದೈಹಿಕ ಶಿಕ್ಷಣ ಶಿಕ್ಷಣ ಶಿವರಾಮ ಯೇನೆಕಲ್ಲು ಅವರಿಗೆ ಬೀಳ್ಕೊಡುಗೆ ಸಮಾರಂಭ ಸ್ನೇಹ ಸಮ್ಮಿಲನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶಿವರಾಮರ ಅನೇಕ ಶಿಷ್ಯರು ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸಿರುವುದು ಗ್ರಾಮೀಣ ಭಾಗಕ್ಕೆ ಹಿರಿಮೆ.ಇವರುನೀಡಿದ ಶಿಕ್ಷಣವು ವಿದ್ಯಾರ್ಥಿಗಳ ಮನಸಿನಲ್ಲಿ ಅಚ್ಚಳಿಯದೆ ನಿಂತ ಕಾರಣ ಗುರುತ್ವಾಕರ್ಷಣೆಯಂತೆ ಶಿವರಾಮರ ಬೀಳ್ಕೊಡುಗೆಗೆ ಬೇರೆ ಬೇರೆ ಕಡೆಯಲ್ಲಿರುವ ಅವರ ಶಿಷ್ಯರು ಆಕರ್ಷಿತರಾಗಿ ಆಗಮಿಸಿರುವದು ಸಾಕ್ಷಿ ಎಂದರು.

ಸ್ನೇಹ ಸಮ್ಮಿಲನದ ಅಧ್ಯಕ್ಷ ಪ್ರಮೋದ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಯೇನೆಕಲ್ಲು, ಸುಳ್ಯ ತಾಲೂಕು ಕಬಡ್ಡಿ ಎಸೋಸಿಯೇಶನ್‌ನ ಜಯಪ್ರಕಾಶ್ ರೈ, ಗೋಪಾಲಕೃಷ್ಣ ಪ್ರೌಢಶಾಲೆಯ ಮುಖ್ಯಗುರು ವಸಂತಿ.ಜೆ, ಸ್ನೇಹಸಮ್ಮಿಲನ ಕಾರ್ಯಕ್ರಮದ ಗೌರವಾಧ್ಯಕ್ಷ ಕೇಶವ, ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಬೈಲು ವೇದಿಕೆಯಲ್ಲಿದ್ದರು. ಪ್ರಮೋದ್ ಕುಮಾರ್ ಸ್ವಾಗತಿಸಿದರು. ಮನೋಜ್ ವಂದಿಸಿದರು. ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪ್ರಾಕ್ತನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸ್ವಾಮಿಗಳ ಅದ್ದೂರಿ ಮೆರವಣಿಗೆ:
ಬೆಳಗ್ಗೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳನ್ನು ಹಾಗೂ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಗುರುಗಳನ್ನು ಗೋಪಾಲಕೃಷ್ಣ ದೇವಳದಿಂದ ಮೆರವಣಿಗೆ ಮೂಲಕ ವಿದ್ಯಾಸಂಸ್ಥೆಗೆ ಕರೆತರಲಾಯಿತು. ಕುಣಿತ ಭಜನೆ, ಚೆಂಡೆ,ಬ್ಯಾಂಡ್ ವಾದನ, ಗೊಂಬೆಕುಣಿತ ದೊಂದಿಗೆ ಗುರುಗಳನ್ನು ಅದ್ದೂರಿಯಿಂದ ವೇದಿಕೆಗೆ ಕರೆತರಲಾಯಿತು. ಬಳಿಕ ಪ್ರಾಕ್ತನ ವಿದ್ಯಾರ್ಥಿಗಳ ಸವಿಸವಿ ನೆನಪು ಕಾರ್ಯಕ್ರಮ ನೆರವೇರಿತು.ವಿದ್ಯಾಸಂಸ್ಥೆಯಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ತಮ್ಮ ಈಗಿನ ಉದ್ಯೋಗ ಸೇರಿದಂತೆ ಇತರ ವಿಚಾರಗಳನ್ನು ಹಂಚಿಕೊಂಡರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.