HomePage_Banner
HomePage_Banner
HomePage_Banner
HomePage_Banner

ಕುಂಟ್ಯಾನ ಧರ್ಣಪ್ಪ ಗೌಡರ ವೈಕುಂಠ ಸಮಾರಾಧನೆ – ಶ್ರದ್ಧಾಂಜಲಿ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸಮುದಾಯ ಭವನ ನಿರ್ಮಾಣದ ಪ್ರೇರಣಾಕರ್ತರು – ಚಿದಾನಂದ ಬೈಲಾಡಿ
  • ತರಕಾರಿ ಕೃಷಿಗೆ ಗೌರವ ತಂದು ಕೊಟ್ಟವರು – ವಾಸುದೇವ ನಡ್ಕ

ಪುತ್ತೂರು: ಕೃಷಿ ಕ್ಷೇತ್ರದ ಸಾಧಕ ಕುಂಟ್ಯಾನ ಧರ್ಣಪ್ಪ ಗೌಡ ಅವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಎ.೧೦ ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಆರಂಭದಲ್ಲಿ ಕುಂಟ್ಯಾನ ಧರ್ಣಪ್ಪ ಗೌಡ ಅವರ ಮನೆ ಮಂದಿ ಧರ್ಣಪ್ಪ ಗೌಡರ ಭಾವ ಚಿತ್ರದ ಎದುರು ದೀಪ ಪ್ರಜ್ವಲಿಸಿದರು. ಬಳಿಕ ನುಡಿನಮನ ಸಲ್ಲಿಸಿ, ಪುಷ್ಪಾರ್ಚಣೆ ಮಾಡಿ ಶ್ರದ್ದಾಂಜಲಿ ಅರ್ಪಿಸಲಾಯಿತು.

ಸಮುದಾಯ ಭವನ ನಿರ್ಮಾಣದ ಪ್ರೇರಣಾಕರ್ತರು
ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ ಅವರು ಮಾತನಾಡಿ ಒಕ್ಕಲಿಗ ಗೌಡ ಸಮುದಾಯ ಭವನ ಪುತ್ತೂರಿನಲ್ಲಿ ನಿರ್ಮಾಣ ಮಾಡಲು ಕಾರಣಕರ್ತರಾದವರ ಪೈಕಿ ಧರ್ಣಪ್ಪ ಗೌಡರೂ ಒಬ್ಬರಾಗಿದ್ದರು. ಆಗಿನ ಸಂದರ್ಭ ಸಮುದಾಯ ಭವನ ನಿರ್ಮಾಣಕ್ಕೆಂದು ನಾವು ಮುಂದೆ ಹೊರಟಾಗ ಸಮುದಾಯ ಭವನದ ಒಟ್ಟು ವೆಚ್ಚದ ಶೇ.೧ ಭಾಗವನ್ನು ನನ್ನ ಲೆಕ್ಕದಲ್ಲಿ ಕೊಡುತ್ತೇನೆಂದು ನಮಗೆ ಪ್ರೇರಣೆ ನೀಡಿದವರಾಗಿದ್ದರು. ಅವರ ಆ ಪ್ರೇರಣೆ ನಮ್ಮನ್ನು ಹುರಿದುಂಬಿಸಿ ರೂ. ೧ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ ಸಾಧ್ಯವಾಯಿತು. ಇದೇ ಸಂದರ್ಭದಲ್ಲಿ ಅವರು ಮಾತು ಕೊಟ್ಟಂತೆ ರೂ. ೧ಲಕ್ಷ ಆಗಿನ ಕಾಲದಲ್ಲಿ ನೀಡಿ ಎಲ್ಲರಿಗೂ ಮಾದರಿಯಾದರು ಎಂದರು. ಧಾರ್ಮಿಕ, ಶೈಕ್ಷಣಿಕ, ಕೃಷಿ ಸೇವೆಯಲ್ಲಿ ತಮ್ಮನ್ನು ತಾನು ತೊಡಗಿಸಿಕೊಂಡ ಧರ್ಣಪ್ಪ ಗೌಡರು ಎಲ್ಲರೂ ಮಾದರಿಯಾಗಿದ್ದಾರೆ. ಅದೂ ಅಲ್ಲದೆ ಪುತ್ತೂರು ಒಕ್ಕಲಿಗ ಪತ್ತಿನ ಸಹಕಾರಿ ಸಂಘದ ಪ್ರಥಮ ಸದಸ್ಯತ್ವವನ್ನು ಅವರು ಪಡೆದು ಕೊಂಡಿದ್ದರು ಎಂದ ಅವರು ಇವತ್ತು ಅವರದ್ದೇ ದಾರಿಯಲ್ಲಿ ಅವರ ಮಕ್ಕಳು ನಡೆಯುತ್ತಿರುವುದು ಸಂತೋಷದ ವಿಚಾರ ಎಂದರು.

ತರಕಾರಿ ಕೃಷಿಗೆ ಗೌರವ ತಂದು ಕೊಟ್ಟವರು:
ಧರ್ಣಪ್ಪ ಗೌಡರ ಸಂಬಂಧಿಕ ವಾಸುದೇವ ನಡ್ಕ ಅವರು ಮಾತನಾಡಿ ಧರ್ಣಪ್ಪ ಗೌಡರು ಕೃಷಿಕರಾಗುವುದಕ್ಕಿಂತಲೂ ಒರ್ವ ಋಷಿಯಾಗಿದ್ದರು. ಕೃಷಿಯನ್ನು ತಪ್ಪಸನ್ನಾಗಿ ತೆಗೆದು ಕೊಂಡು ಅವರ ಎಲ್ಲಾ ಬೆವರ ಹನಿಗಳು ಹಣವಾಗಿ ಮಾರ್ಪಟ್ಟು, ಅವರ ಬಂದುಗಳಿಗೆ ಬೇಕಾದಂತೆ ಆರ್ಥಿಕ ಸಭದ್ರತೆಯನ್ನು ಕಟ್ಟಿ ಕೊಟ್ಟರು. ಅವರು ತರಕಾರಿ ಕೃಷಿಗೆ ಗೌರವ ತಂದು ಕೊಟ್ಟದ್ದು ಮಾತ್ರವಲ್ಲ ಇತರರಿಗೂ ಪ್ರೋತ್ಸಾಹ ನೀಡಿದರು. ಇಂತಹ ಸಾರ್ಥಕ ಜೀವನ ಸಾಧಿಸಿದ ಅವರ ಎಲ್ಲಾ ಗುಣಗಳನ್ನು ನಮ್ಮಲ್ಲಿ ನಾವು ಅಳವಡಿಸಿಕೊಳ್ಳಬೇಕು ಎಂದರು. ಸಭೆಯಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಧರ್ಣಪ್ಪ ಗೌಡರ ಪುತ್ರ ಪ್ರವೀಣ್ ಕುಂಟ್ಯಾನ ವಂದಿಸಿದರು. ವೇದಿಕೆಯಲ್ಲಿ ಪತ್ನಿ ಚಿನ್ನಮ್ಮ, ಪುತ್ರಿಯರಾದ ಸುಚಿತ್ರಾ, ಸುಮಿತ್ರಾ, ಸೊಸೆ ಸವಿತಾ ಪ್ರವೀಣ್, ಅಳಿಯ ರಾಧಾಕೃಷ್ಣ, ರವಿ ಉಪಸ್ಥಿತರಿದ್ದರು. ಅನೇಕ ಬಂಧು ಮಿತ್ರರು ಕುಂಟ್ಯಾನ ಧರ್ಣಪ್ಪ ಗೌಡರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.