HomePage_Banner
HomePage_Banner
HomePage_Banner
HomePage_Banner

ಸೀತಾರಾಮ್ ಭಟ್ ಪೆರ್ನಾಜೆ ಸ್ಮೃತಿ, ಶಿಲಾಮೂರ್ತಿ, ನೂತನ ಧ್ವಜಸ್ತಂಭ ಲೋಕಾರ್ಪಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ೧೯೫೦ರ ದಶಕದಲ್ಲಿ ಗ್ರಾಮೀಣ ಶಿಕ್ಷಣದ ಅವಶ್ಯಕತೆಯನ್ನು ಮನಗಂಡು ಸಾಕ್ಷಾತ್ಕರಿಸಿದ ಅಕ್ಷರಋಷಿ ಪೆರ್ನಾಜೆ ಶ್ರೀ ಸೀತಾರಾಮ ಭಟ್ಟರು ಸುಳ್ಯ ,ಪುತ್ತೂರು ತಾಲೂಕುಗಳ ಗಡಿಭಾಗದ ಪೆರ್ನಾಜೆ ಎಂಬಲ್ಲಿ ಶ್ರೀ ಸೀತಾರಾಘವ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಸ್ಥಾಪಿಸಿ ಸಹಸ್ರಾರು ಮಕ್ಕಳಿಗೆ ವಿದ್ಯಾದಾತರಾಗಿ ಮೆರೆದವರು. ೧೯೮೪ ರಲ್ಲಿ ಶ್ರೀ ಸೀತಾರಾಘವ ಪದವಿಪೂರ್ವ ಕಾಲೇಜು ಅನುಷ್ಠಾನಕ್ಕೆ ಬಂದಿತು ಏ.೧೦ರಂದು ಸೀತಾರಾಮ್ ಭಟ್ ಪೆರ್ನಾಜೆ ಸ್ಮೃತಿ ಶಿಲಾಮೂರ್ತಿ, ನೂತನ ಧ್ವಜಸ್ತಂಭ ಲೋಕಾರ್ಪಣೆ ಕಾರ್ಯಕ್ರಮ ಶ್ರೀ ಸೀತಾರಾಮ ಭಟ್ ಸುವರ್ಣ ರಂಗಮಂದಿರದಲ್ಲಿ ನಡೆಯಿತು.


ಪೂಜ್ಯರ ನೆನಪು ಚಿರಸ್ಥಾಯಿಯಾಗಿರಿಸಲು ಸಂಸ್ಥೆಯ ಮುಖ್ಯ ದ್ವಾರದಲ್ಲಿ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಿ ಲೋಕಾರ್ಪಣೆಯನ್ನು ಡಾ.ಪ್ರಭಾಕರ್ ಭಟ್ ಕಲ್ಲಡ್ಕ ನಿರ್ವಹಿಸಿದರು. ನೂತನ ಧ್ವಜಸ್ತಂಭವನ್ನು ಸಚಿವ ಅಂಗಾರ ಎಸ್ ಲೋಕಾರ್ಪಣೆಗೈದರು.

ನೂತನ ಧ್ವಜಸ್ತಂಭವನ್ನು ಶ್ರೀಮತಿ ಸಾವಿತ್ರಿ ರಾಮಚಂದ್ರಭಟ್ಟರು ಕೊಡುಗೆಯಾಗಿ ನೀಡಿದರು. ಸಭಾಕಾರ್ಯಕ್ರಮವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದ್ದರು.


ಅತಿಥಿಗಳಾಗಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯರು ಡಾ.ಮಹೇಶ್ ಪ್ರಸನ್ನ, ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಅಧ್ಯಕ್ಷ ಪಿ ರಮೇಶ್ ರೈ ಸಾಂತ್ಯ, ಸಮಾರಂಭದ ಅಧ್ಯಕ್ಷರಾಗಿ ಪೆರ್ನಾಜೆ ಶ್ರೀ ಸೀತಾರಾಘವ ವಿದ್ಯಾವರ್ಧಕ ಸಂಘ (ರಿ) ಅಧ್ಯಕ್ಷ ಶಂಕರ್ ನಾರಾಯಣ ಭಟ್ ಪೆರ್ನಾಜೆ, ಮಳಿ ರಾಮಚಂದ್ರಭಟ್, ಪ್ರಾಚಾರ್ಯರರು ಕೆ ಆರ್ ಗೋಪಾಲಕೃಷ್ಣ, ಮುಖ್ಯ ಗುರು ಪಿ.ಕೃಷ್ಣ ಮತ್ತು ಸದಸ್ಯರು ಭಾಗವಹಿಸಿದ್ದರು.

ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಮತಿ ಡಿ.ಸುಕನ್ಯಾ ಹಾಗೂ ಶಿಲಾಮೂರ್ತಿಯ ಶಿಲ್ಪಿ ಶ್ರೀ ಶಿವಸುಬ್ರಹ್ಮಣ್ಯ ರವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ಮಕ್ಕಳಿಂದ ಬಯಲು ಸಮೂಹ ನೃತ್ಯ ಭರತನಾಟ್ಯ ಅಪರಾಹ್ನ ಮಕ್ಕಳಿಂದ ಸಾಂಸ್ಕೃತಿಕ ವೈಭವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಜರಗಿತು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.