HomePage_Banner
HomePage_Banner
HomePage_Banner
HomePage_Banner

ಕರ್ನಾಟಕ ರಾಜ್ಯ ಅಬಕಾರಿ ಇಲಾಖೆ ದ.ಕ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕೆಲಸದ ಒತ್ತಡ ನಿವಾರಿಸಲು ಕ್ರೀಡೆ ಅಗತ್ಯ – ಅಬಕಾರಿ ಡಿ.ಸಿ ಬಿಂಧುಶ್ರೀ

ಪುತ್ತೂರು: ಕೆಲಸದ ಒತ್ತಡ ನಿವಾರಿಸಲು ಕ್ರೀಡೆ ಬಹಳ ಅಗತ್ಯ. ಇಂತಹ ಸಂದರ್ಭದಲ್ಲಿ ಇಲಾಖೆಯಲ್ಲಿ ಬರಿ ಕೆಲಸದಲ್ಲೇ ಮುಳುಗಿರುವ ಸಿಬ್ಬಂದಿಗಳಿಗೆ ಒಂದು ದಿನದ ಕ್ರೀಡೆ ಉಲ್ಲಾಸ ನೀಡಲಿದೆ ಎಂದು ಕರ್ನಾಟಕ ರಾಜ್ಯ ಅಬಕಾರಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಅಬಕಾರಿ ಡಿ.ಸಿ ಬಿಂಧುಶ್ರೀ ಅವರು ಹೇಳಿದರು.


ಪುತ್ತೂರು ಸಾಮೆತ್ತಡ್ಕ ಸುದಾನ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಎ.೧೦ರಂದು ನಡೆದ ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಸಿಬ್ಬಂದಿಗಳ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಎಲ್ಲಾ ಒತ್ತಡ ಕಡೆಯಲು ಒಂದು ಸಮಯ ಬೇಕು. ಕ್ರೀಡೆ ಅಥವಾ ಓದು ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸ ಇರುತ್ತದೆ. ಇದು ಒತ್ತಡವನ್ನು ನಿವಾರಿಸುತ್ತದೆ ಎಂದರು.

ಸನ್ಮಾನ:
ಕೋವಿಡ್ ಸಂದರ್ಭದಲ್ಲಿ ಬಡರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಎಲ್ಲರಿಗೂ ಮಾದರಿಯಾದ ಡಾ.ರವಿನಾರಾಯಣ ಅವರನ್ನು ಅಬಕಾರಿ ಇಲಾಖೆಯ ವತಿಯಿಂದ ಇದೇ ಸಂದರ್ಭದಲ್ಲಿ ಸನ್ಮಾನಿಸಿಲಾಯಿತು. ಸನ್ಮಾನ ಸ್ವೀಕರಿಸಿದ ಡಾ. ರವಿನಾರಾಯಣ ಅವರು ಮಾತನಾಡಿ ರೋಗಿಗಳಲ್ಲಿ ಧೈರ್ಯ ತುಂಬಬೇಕೇ ಹೊರತು ಧೈರ್ಯ ಕಳೆದು ಕೊಳ್ಳುವಂತೆ ಮಾಡಬಾರದು. ಈ ನಿಟ್ಟಿನಲ್ಲಿ ಕೋವಿಡ್ ಸಂದರ್ಭದಲ್ಲಿ ಕೋವಿಡ್ ವ್ಯಾದಿ ಓಡಿಸುವ ಚಿಕಿತ್ಸೆ ಮುಂದುವರಿಸಿದ್ದೇವೆ ಎಂದರು. ಅತಿಥಿಯಾಗಿ ಭಾಗವಹಿಸಿದ್ದ ಸುದಾನ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಭುಜಂಗ ಆಚಾರ್ಯ ಶುಭ ಹಾರೈಸಿದರು.

ಪುತ್ತೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಶಿವಪ್ರಸಾದ್ ವೇದಿಕೆಯಲ್ಲಿ ಉಪಸ್ಥಿರಿದ್ದರು. ಜಿಲ್ಲಾ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ಸುಧೀರ್, ಪುತ್ತೂರು ವಲಯ ಅಬಕಾರಿ ಉಪನಿರೀಕ್ಷಕಿ ಸುಜಾತ, ವಲಯದ ಅಬಕಾರಿ ನಿರೀಕ್ಷಕ ಸುಬ್ರಹ್ಮಣ್ಯ, ಉಪನಿರೀಕ್ಷಕ ಅಂಗಾರ ಪಿ, ಸುಕುಮಾರ್ ಅತಿಥಿಗಳನ್ನು ಗೌರವಿಸಿದರು. ವಿಜಯ ಕುಮಾರ್ ವಂದಿಸಿದರು. ಪ್ರೇಮಾನಂದ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅಬಕಾರಿ ಡಿ.ಸಿ ಬಿಂಧುಶ್ರೀ ಅವರು ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.