HomePage_Banner
HomePage_Banner
HomePage_Banner
HomePage_Banner

ಕುಂಬ್ರ ಶ್ರೀರಾಮ ಭಜನಾ ಮಂದಿರದ 39 ಪ್ರತಿಷ್ಠಾ ಮಂಗಳೋತ್ಸವ ಸಂಭ್ರಮ | ಅರ್ಧ ಏಕಾಹ ಭಜನೆ, ಸತ್ಯನಾರಾಯಣ ಪೂಜೆ, ಕಟೀಲು ಯಕ್ಷಗಾನ ಬಯಲಾಟ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ರಾಮಗಿರಿಯ ಶ್ರೀರಾಮ ಭಜನಾ ಮಂದಿರದ ೩೯ ನೇ ವಾರ್ಷಿಕ ಪ್ರತಿಷ್ಠಾ ಮಂಗಳೋತ್ಸವ ಎ.೧೦ ರಂದು ಸಂಭ್ರಮದಿಂದ ಜರಗಿತು.


ಮಂಗಳೋತ್ಸವದ ಅಂಗವಾಗಿ ಬೆಳಿಗ್ಗೆ ಸೂರ್ಯೋದಯಕ್ಕೆ ವಿವಿಧ ಭಜನಾ ತಂಡಗಳಿಂದ ಅರ್ಧ ಏಕಾಹ ಭಜನೆ ಆರಂಭಗೊಂಡು ಸಂಜೆ ಸೂರ್ಯಾಸ್ತಮಾನಕ್ಕೆ ಭಜನಾ ಮಂಗಳೋತ್ಸವ ನಡೆಯಿತು. ಸುಮಾರು ೧೦ ತಂಡಗಳು ಭಜನೆಯಲ್ಲಿ ಪಾಲ್ಗೊಂಡವು. ಬೆಳಿಗ್ಗೆ ಗಣಪತಿ ಹೋಮ ನಡೆದು ಅರ್ಚಕ ಪ್ರಕಾಶ್ ನಕ್ಷತ್ರಿತ್ತಾಯರವರ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭಗೊಂಡಿತು.ಮಧ್ಯಾಹ್ನ ಮಹಾಪೂಜೆ ಬಳಿಕ ಭಕ್ತಾಧಿಗಳಿಗೆ ಪ್ರಸಾದ ವಿತರಣೆ,ಅನ್ನಸಂತರ್ಣೆ ನಡೆಯಿತು.ನೂರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

ಅನ್ನಸಂತರ್ಪಣೆ
ಪ್ರತಿಷ್ಠಾ ಮಂಗಳೋತ್ಸವದ ಅಂಗವಾಗಿ ಮಧ್ಯಾಹ್ನ ಮತ್ತು ರಾತ್ರಿ ವಿಶೇಷ ಅನ್ನಸಂತರ್ಪಣೆ ನಡೆಯಿತು. ನೂರಾರು ಭಕ್ತರು ಅನ್ನಪ್ರಸಾದ ಸ್ವೀರಿಸಿದರು. ಬೆಳಿಗ್ಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಮನರಂಜಿಸಿದ `ರಾಮ ರಾಮ ಶ್ರೀರಾಮ’ ಯಕ್ಷಗಾನ ಬಯಲಾಟ
ಮಂಗಳೋತ್ಸವದ ಅಂಗವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸೇವಾರ್ಥವಾಗಿ ರಾತ್ರಿ `ರಾಮ ರಾಮ ಶ್ರೀರಾಮ’ ಎಂಬ ಯಕ್ಷಗಾನ ಬಯಲಾಟ ನಡೆಯಿತು. ರಾತ್ರಿ ೮.೩೦ ಕ್ಕೆ ಕಟೀಲು ಶ್ರೀದೇವಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಬಳಿಕ ರಾಮ ರಾಮ ಶ್ರೀರಾಮ ಎನ್ನುವ ಪೌರಣಿಕ ಯಕ್ಷಗಾನ ಬಯಲಾಟ ನಡೆಯಿತು. ನೂರಾರು ಭಕ್ತರು ಯಕ್ಷಗಾನ ವೀಕ್ಷಿಸಿದರು. ಸರಕಾರದ ಕೋವಿಡ್ ನಿಯಾಮವಳಿಯಂತೆ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ, ಪ್ರ.ಕಾರ್ಯದರ್ಶಿ ರತನ್ ರೈ ಕುಂಬ್ರ, ಕೋಶಾಧಿಕಾರಿ ಅಶೋಕ್ ಕುಮಾರ್ ಬಡಕ್ಕೋಡಿ ಹಾಗೂ ಸಮಿತಿಯ ಪದಾಧಿಕಾರಿಗಳು ಭಕ್ತಾಧಿಗಳನ್ನು ಸ್ವಾಗತಿಸಿ ಪ್ರಸಾದ ನೀಡಿ ಸತ್ಕರಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.