HomePage_Banner
HomePage_Banner
HomePage_Banner
HomePage_Banner

ಹಾ.ಉ ಸಂಘಗಳ ನೌಕರರ ಸಂಘದಿಂದ ರಾಮಕೃಷ್ಣ ಭಟ್‌ರವರಿಗೆ ಅಭಿನಂದನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದ.ಕ ಹಾಲು ಒಕ್ಕೂಟದಲ್ಲಿ ಹನ್ನೆರಡು ವರ್ಷಗಳಿಂದ ಉಪ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಇದೀಗ ವ್ಯವಸ್ಥಾಪಕರಾಗಿ ಪದೋನ್ನತಿ ಪಡೆದ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಡಾ.ರಾಮಕೃಷ್ಣ ಭಟ್ ರವರಿಗೆ ತಾಲೂಕು ಹಾಲು ಉತ್ಪಾದಕರ ಸಹಕಾರಿ ಸಂಘದ ನೌಕರರ ಸಂಘ ವತಿಯಿಂದ ಅಭಿನಂದನಾ ಕಾರ್ಯಕ್ರಮವು ಎ.೧೧ರಂದು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಹಾಲ್‌ನಲ್ಲಿ ನಡೆಯಿತು.

ಡಾ.ರಾಮಕೃಷ್ಣ ಭಟ್‌ರವರನ್ನು ಅಭಿನಂದಿಸಿದ ದ.ಕ ಹಾಲು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್ ಮಾತನಾಡಿ, ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ದುಡಿಯುವ ನೌಕರರಿಗೂ ಜೀವನದ ಭದ್ರತೆಯಿರಬೇಕು.

ನೌಕರರ ಹುದ್ದೆಗಳು ಖಾಯಂಗೊಳ್ಳಬೇಕು. ಇದಕ್ಕಾಗಿ ನೌಕರರ ಸಂಘಟಿತರಾಗಿ ಹೋರಾಡಬೇಕಾಗಿದೆ. ಈ ನಿಟ್ಟಿನಲ್ಲಿ ನೌಕರರ ಸಂಘಟನೆ ಬಲೀಷ್ಠವಾಗಬೇಕು. ತಮ್ಮ ನ್ಯಾಯಕ್ಕಾಗಿ ಹೋರಾಟ ನಡೆಸಬೇಕು. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಯಾವುದೇ ಕಾರಣಕ್ಕೂ ಸಂಘಟನೆಯನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಹೇಳಿದ ಅವರು, ರಾಮಕೃಷ್ಣ ಭಟ್‌ರವರು ಅಧಿಕಾರ ವ್ಯಾಮೋಹದ ಹಿಂದೆ ಹೋದವರಲ್ಲ. ತನಗೆ ದೊರೆತ ಸ್ಥಾನವನ್ನು ದಕ್ಷ, ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದು ಅವರಿಗೆ ಸೂಕ್ತ ಸ್ಥಾನ ದೊರೆತಿದೆ ಎಂದು ಹೇಳಿದರು.

ನಿರ್ದೇಶಕ ಎಸ್.ಬಿ ಜಯರಾಮ ರೈ ಮಾತನಾಡಿ, ಉಪವ್ಯವಸ್ಥಾಪಕರಾಗಿ ರಾಮಕೃಷ್ಣ ಭಟ್‌ರವರು ಪ್ರಾಮಾಣಿಕಯಿಂದ ಒಕ್ಕೂಟದ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಕಾರ್ಯ ನಿರ್ವಹಿಸಿದವರು. ಪ್ರತಿ ಸಂಘಗಳಿಗೆ ಭೇಟಿ ನೀಡಿ ಸಮಸ್ಯೆಗಳಿಗೆ ಸೂಕ್ತ ಸ್ಪಂಧನೆ ನೀಡುವ ಮೂಲಕ ಪ್ರೀತಿ, ವಿಶ್ವಾಸಗಳಿಸಿದ್ದರು. ತಮ್ಮ ಕಾರ್ಯದಕ್ಷತೆಯ ಮೂಲಕ ಒಕ್ಕೂಟದ ಆಡಳಿತ ನಿರ್ದೇಶಕರಾಗಿ ಮುಂಭಡ್ತಿ ಹೊಂದುವಂತಾಗಲಿ ಎಂದು ಹಾರೈಸಿದರು.

ಉಪ ವ್ಯವಸ್ಥಾಪಕಾ ಡಾ.ಸತೀಶ ರಾವ್ ಸಂದರ್ಭೋಚಿತವಾಗಿ ಮಾತನಾಡಿದರು. ಅಭಿನಂದನೆ ಸ್ವೀಕರಿಸಿದ ಡಾ.ರಾಮಕೃಷ್ಣ ಭಟ್ ಅನಿಸಿಕೆ ವ್ಯಕ್ತಪಡಿಸಿದರು. ತಾಲೂಕು ಹಾಲು ಉತ್ಪಾದಕರ ಸಹಕಾರಿ ಸಂಘಗಳ ನೌಕರರ ಸಂಘದ ಮನೋಹರ್ ಡಿ.ವಿ ಅಧ್ಯಕ್ಷತೆ ವಹಿಸಿದ್ದರು.

ಕಲ್ಲಗುಡ್ಡೆ ಸಹಕಾರಿ ಸಂಘದ ಕಾರ್ಯದರ್ಶಿ ಅಮಿತ ಪ್ರಾರ್ಥಿಸಿದರು. ಹಿರೇಬಂಡಾಡಿ ಸಂಘದ ಕಾರ್ಯದರ್ಶಿ ವಿಶಾಲಾಕ್ಷಿ ಸ್ವಾಗತಿಸಿದರು. ಸಂಘದ ಕೋಶಾಧಿಕಾರಿ ಚಂದ್ರಹಾಸ ರೈ ಪ್ರಸ್ತಾವಣೆಗೈದರು. ಪಾಣಾಜೆ ಸಂಘದ ಕಾರ್ಯದರ್ಶಿ ಸತ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.