HomePage_Banner
HomePage_Banner
HomePage_Banner
HomePage_Banner

ಈಶ್ವರಮಂಗಲ ಮಖಾಂ ಉರೂಸ್ ಸಮಾರೋಪ-ಅನ್ನದಾನ | ಧರ್ಮದ ತತ್ವಾದರ್ಶಗಳೊಂದಿಗೆ ಜೀವಿಸಿದರೆ ಬದುಕು ಸಾರ್ಥಕ-ಖಲೀಲ್ ಹುದವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಈಶ್ವರಮಂಗಲ ಮಖಾಂ ಉರೂಸ್ ಎ.೫ರಿಂದ ಎ.೮ರ ವರೆಗೆ ನಡೆಯಿತು. ಉರೂಸ್ ಸಮಾರೋಪ ದಿನವಾದ ಎ.೮ರಂದು ರಾತ್ರಿ ನಡೆದ ಕಾರ್ಯಕ್ರಮವನ್ನು ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ಉದ್ಘಾಟಿಸಿದರು. ಸಯ್ಯದ್ ಮುಖ್ತಾರ್ ತಂಙಳ್ ಕುಂಬೋಳ್ ದುವಾಶೀರ್ವಚನ ನೀಡಿದರು. ಉರೂಸ್ ಸ್ವಾಗತ ಸಮಿತಿ ಅಧ್ಯಕ್ಷ ಮುಸ್ತಫಾ ಮಿನಿ ಅಧ್ಯಕ್ಷತೆ ವಹಿಸಿದ್ದರು.



ಮುಖ್ಯ ಪ್ರಭಾಷಣ ನಡೆಸಿದ ಖಲೀಲ್ ಹುದವಿ ಕಾಸರಗೋಡುರವರು ಜಗತ್ತು ಮುಂದುವರಿದಂತೆ ನಾವೂ ಅದರ ಜೊತೆ ಹೆಜ್ಜೆ ಇಡಬೇಕು, ಆದರೆ ನಮ್ಮ ಧಾರ್ಮಿಕ ಸಂಪ್ರದಾಯಗಳನ್ನು ನಿರ್ಲಕ್ಷಿಸದೆ ಅದನ್ನು ಅನುಸರಿಸಿಕೊಂಡು ಮುನ್ನಡೆದರೆ ಮಾತ್ರ ನಮ್ಮ ಜೀವನ ಸಾರ್ಥಕವಾಗಬಹುದು ಎಂದು ಹೇಳಿದರು. ಭೂಮಿಯ ಮೇಲಿನ ವ್ಯಾಮೋಹಕ್ಕೆ ಒಳಗಾಗಿ ನಾಳಿನ ಪಾರತ್ರಿಕ ಜೀವನದ ಬಗ್ಗೆ ಮರೆಯಬಾರದು, ಯಾರಿಗೂ ನೋವುಂಟು ಮಾಡದ ಉದಾತ್ತ ಮತ್ತು ಸ್ವಚ್ಛ ಬದುಕು ನಮ್ಮದಾಗಬೇಕು, ಮಸೀದಿ ಜೊತೆ ಸಂಪರ್ಕವಿಟ್ಟುಕೊಳ್ಳುವ ಮೂಲಕ ಸತ್ಕರ್ಮಗಳನ್ನು ಅಧಿಕಗೊಳಿಸಬೇಕು ಎಂದು ಅವರು ಹೇಳಿದರು. ಯುವ ಸಮೂಹ ತಮ್ಮ ಜೀವನವನ್ನು ಮೋಜಿನ ವಲಯಗಳಲ್ಲಿ ಕಳೆಯದೆ ಪರಿಶುದ್ದ ಇಸ್ಲಾಮಿನ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಜೀವನ ನಡೆಸಬೇಕು ಎಂದ ಅವರು ಜನನ, ಮರಣಗಳ ನಡುವಿನ ಮೂರು ದಿನಗಳ ಜೀವನವನ್ನು ಆದರ್ಶಯುತವಾಗಿ ಮತ್ತು ಮಾದರಿಯಾಗಿ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಮಹಮೂದ್ ಕೋಯ ತಂಙಳ್ ಕೋಯ ರಾಮಂದಳಿ, ಪುತ್ತುಚ್ಚ ಸಂಕೇಶ್, ಉದ್ಯಮಿಗಳಾದ ಹಾಜಿ ಕೆ ಮಮ್ಮಾಲಿ ಬೆಳ್ಳಾರೆ, ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಅಬ್ದುಲ್ ಖಾದರ್ ಹಾಜಿ ಬೆಳ್ಳಾರೆ, ಎನ್.ಎಸ್ ಅಬ್ದುಲ್ಲ ಹಾಜಿ ಈಶ್ವರಮಂಗಲ, ಹಿರಾ ಅಬ್ದುಲ್ ಖಾದರ್ ಹಾಜಿ, ಅಬೂಬಕ್ಕರ್ ಹಾಜಿ ಮಂಗಳ, ಆದಂ ಹಾಜಿ ಗೋಲ್ಡ್ ಬಝಾರ್, ಬುಶ್ರಾ ಅಬ್ದುಲ್ ಅಝೀಝ್ ಕಾವು, ಹನೀಫ್ ಹಾಜಿ ಜನತಾ, ಅಬ್ದುಲ್ ರಝಾಕ್ ಬಂಡಿಚಾಲ್, ನೆ.ಮುಡ್ನೂರು ಗ್ರಾ.ಪಂ ಸದಸ್ಯ ಇಬ್ರಾಹಿಂ, ಈಶ್ವರಮಂಗಲ ಜಮಾಅತ್ ಕಮಿಟಿ ಅಧ್ಯಕ್ಷ ಖಾಲಿದ್ ಎಂ.ಎ, ಪ್ರ.ಕಾರ್ಯದರ್ಶಿ ಝಕರಿಯಾ ಸಖಾಫಿ ಮೇನಾಲ, ಹಂಝ ಮುಸ್ಲಿಯಾರ್ ಈಶ್ವರಮಂಗಲ, ಪಾಳ್ಯತ್ತಡ್ಕ ಖತೀಬ್ ಇಸಾಕ್ ದಾರಿಮಿ, ಉರೂಸ್ ಕಮಿಟಿ ಗೌರವಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಉಪಾಧ್ಯಕ್ಷ ಅಬ್ಬು, ಕಾರ್ಯದರ್ಶಿ ರಹೀಂ, ಜೊತೆ ಕಾರ್ಯದರ್ಶಿ ಇಸ್ಮಾಯಿಲ್ ಎಂ.ಎ, ಉರೂಸ್ ಕಮಿಟಿ ಮೀಡಿಯಾ ಸೆಕ್ರೆಟರಿ ನೌಶಾದ್ ರೋಯಲ್, ಅಕ್ಕು, ಬಶೀರ್ ಕುದ್ರೋಲಿ, ಜುನೈದ್ ಬಿ.ಸಿ ಉಪಸ್ಥಿತರಿದ್ದರು. ಬಶೀರ್ ವಹಬಿ ಈಶ್ವರಮಂಗಲ ಸ್ವಾಗತಿಸಿದರು. ಈಶ್ವರಮಂಗಲ ಜಮಾಅತ್ ಕಮಿಟಿಯವರು, ಉರೂಸ್ ಕಮಿಟಿಯವರು ಹಾಗೂ ಹಳೆ ವಿದ್ಯಾರ್ಥಿ ಸಂಘದವರು ಸಹಕರಿಸಿದರು.

ಅನ್ನದಾನ:
ಉರೂಸ್ ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಿತು. ನೂರಾರು ಮಂದಿ ಅನ್ನದಾನ ಸ್ವೀಕರಿಸಿದರು. ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಕಾರ್ಯಕ್ರಮ ನಡೆಯಿತು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.