HomePage_Banner
HomePage_Banner
HomePage_Banner
HomePage_Banner

ಪಡುಮಲೆ: ಚಪ್ಪರ ಮುಹೂರ್ತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬಡಗನ್ನೂರು: ಪಡುಮಲೆ ಅವಳಿ ವೀರ ಪುರುಷರ ಹಾಗೂ ಮಾತೆ ದೇಯಿಬೈದೇತಿ ಜನ್ಮಸ್ಥಳ ಪಡುಮಲೆ ಅಭಿವೃದ್ಧಿ ದೃಷ್ಟಿಯಿಂದ  ಪ್ರಥಮ ಹಂತದಲ್ಲಿ ಸುಮಾರು 500 ವರ್ಷಗಳ ಹಿಂದೆ ಶ್ರೀ ಕೋಟಿ ಚೆನ್ನಯರು ಅರಾಧಿಸುತ್ತಾ ಬಂದಿರುವ ನಾಗ ಬಿರ್ಮೆರ್ , ನಾಗ, ದೇವರು, ರಕ್ತೇಶ್ವರಿ ಸಾನಿಧ್ಯ ಹಾಗೂ ಮಾತೆ ದೇಯಿಬೈದೇತಿ ಸಮಾಧಿ  ಜೀರ್ಣೋದ್ಧಾರ ಪ್ರತಿಷ್ಠಾ ಬ್ರಹ್ಮ ಕಲಶ ಕಾರ್ಯಕ್ರಮವು ಶ್ರೀ ಕೋಟಿ ಚೆನ್ನಯ ಜನ್ಮಸ್ಥಳ ಸಂಚಲನ ಸಮಿತಿ ಪಡುಮಲೆ ಇದರ ವತಿಯಿಂದ ಏಪ್ರಿಲ್ 22 , 23ಮತ್ತು 24 ರಂದು ನಡೆಯಲಿದ್ದು  ಇದರ ಚಪ್ಪರ ಮುಹೂರ್ತ ಕಾರ್ಯಕ್ರಮವು ಏ 11 ರಂದು ಎರುಕೊಟ್ಯ ನಾಗ ಬಿರ್ಮೆರ್ ಸಾನಿಧ್ಯ ಆವರಣದಲ್ಲಿ ನೆಡೆಯಿತು.

ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಪಡುಮಲೆ ಶ್ರೀ ಕೋಟಿ ಚೆನ್ನಯ ಜನ್ಮಸ್ಥಳ ಸಂಚಲನ ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ತೆಂಗಿನಕಾಯಿ ಹೊಡೆಯುವ ಮೂಲಕ ಚಾಲನೆ ನೀಡಿ ಮಾತನಾಡಿ ಕೋಟಿ ಚೆನ್ನಯರು ಸತ್ಯ, ಧರ್ಮ ಮತ್ತು ನ್ಯಾಯಕ್ಕೆ ಹೋರಾಡಿ ವೀರರು ಅವರ  ಜನ್ಮಸ್ಥಳ ಹಾಗೂ ಅವರು ಆರಾಧಿಸುತ್ತಾ ಬಂದಿರುವ ನಾಗ ಬಿರ್ಮೆರ್, ನಾಗ, ದೇವರು, ರಕ್ತೇಶ್ವರಿ ಸಾನಿಧ್ಯ ಹಾಗೂ ಮಾತೆ ದೇಯಿಬೈದೇತಿ ಸಮಾಧಿ  ಜೀರ್ಣೋದ್ಧಾರ ಪ್ರತಿಷ್ಠಾ ಬ್ರಹ್ಮ ಕಲಶ ಮಾಡಿ ಲೋಕಕ್ಕೆ ಸಮರ್ಪಣೆ ಮಾಡುಲಾಗುವುದು. ಇಲ್ಲಿ ಯಾವುದೇ ಜಾತಿ, ಮತ,ಭೇದ ಇಲ್ಲದೆ ಎಲ್ಲರಿಗೂ ಭಾಗವಹಿಸಲು ಅವಕಾಶ ಇದೆ.ಎಂದರು. ಬಳಿಕ  ಕಾರ್ಯಕ್ರಮದ ವ್ಯವಸ್ಥೆ ಬಗ್ಗೆ ಸಮಿತಿ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಹಿಂದೂ ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ, ಶ್ರೀಧರ ಪಟ್ಲ ಪುತ್ತೂರು, ಭಗೀರಥ ಜಿ ಬೆಳ್ತಂಗಡಿ,  ಶೈಲೇಶ್ ಕುಮಾರ್ ಕುರ್ತೋಡಿ ಬೆಳ್ತಂಗಡಿ, ರತನ್ ಕುಮಾರ್ ಕರ್ನೂರು ಗುತ್ತು,  ಚರಣ್ ಬೆಳ್ತಂಗಡಿ ಬ್ರಹ್ಮಕಲಶೋತ್ವವ ಸಮಿತಿ ಪ್ರಧಾನ ಕಾರ್ಯದರ್ಶಿ ಸೀತಾರಾಮ ರೈ ಕೆದಂಬಾಡಿ ಗುತ್ತು , ಕಾರ್ಯದರ್ಶಿ ಚಿನ್ಮಯಿ  ಈಶ್ವರಮಂಗಲ,  ನಾರಾಯಣ ಪೂಜಾರಿ,  ವೇದಿಕೆ  ಮತ್ತು ಸಾಂಸ್ಕೃತಿಕ  ಸಮಿತಿ  ಸಂಚಾಲಕ ಸುರೇಶ್ ಆಳ್ವ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ,  ಪುತ್ತೂರು ಯುವ ಉದ್ಯಮಿ ನವೀನ ಶೆಟ್ಟಿ,  ವಿಶ್ವ ಹಿಂದೂ ಪರಿಷತ್  ಭಜರಂಗದಳ ಸಂಯೋಕ ದೀಕ್ಷಿತ್ ರೈ ಕುತ್ಯಾಳ,  ಬಡಗನ್ನೂರು ಗ್ರಾ..ಪಂ ಉಪಾಧ್ಯಕ್ಷ ಸಂತೋಷ್ ಆಳ್ವ, ಅರಿಯಡ್ಕ ಗ್ರಾ.ಪಂ ಉಪಾಧ್ಯಕ್ಷ ಸಂತೋಷ್ ಕುಮಾರ್ ಕುತ್ಯಾಡಿ, ಸದಸ್ಯ ನಾರಾಯಣ ನಾಯ್ಕ ಚಾಕೋಟೆ,  ಜಿಕೆ ಸುವರ್ಣ ಗಣಸಿನಕುಮೆರು,  ಗುರುಪ್ರಸಾದ್ ರೈ ಕುದ್ಕಾಡಿ ಜಯರಾಜ ಶೆಟ್ಟಿ ಅಣಿಲೆ ಹಾಗೂ ಊರ ಪರವೂರ ಗಣ್ಯರು ಮತ್ತು ಗ್ರಾಮಸ್ಥರು  ಉಪಸ್ಥಿತರಿದ್ದರು.
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.