HomePage_Banner
HomePage_Banner
HomePage_Banner
HomePage_Banner

ಜಾತ್ರೆಯ ತೆರೆಮರೆಯಲ್ಲಿ ‘ಗರ್ನಲ್ ಬಾಬು’

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು ಜಾತ್ರೆಯಲ್ಲಿ ಶ್ರೀ ದೇವರು ೧೦ ದಿನವೂ ಬೆಳಗ್ಗಿನಿಂದ ರಾತ್ರಿ ಶ್ರೀ ದೇವರು ಒಳಪ್ರವೇಶದ ತನಕವೂ ತೆರೆಮರೆಯಲ್ಲಿ ನಿಂತು ಜಾತ್ರೆಯ ಮುನ್ಸೂಚನೆ, ದೇವರು ಹೊರಡುವ ಸಮಯ, ಪೇಟೆ ಸವಾರಿಯಲ್ಲಿ ಕಟ್ಟೆಯಿಂದ ಕಟ್ಟೆಗೆ ಹೋಗುವ ಸಮಯ ಹಾಗೂ ಕೊನೆಗೆ ದೇವರು ಒಳ ಪ್ರವೇಶವಾಗುವ ವಿಷಯವನ್ನೂ ಗರ್ನಲ್ ಸಿಡಿಸುವ ಮೂಲಕ ತಿಳಿಸಲಾಗುತ್ತದೆ.ಆದರೆ ಈ ಸೂಚನೆಯ ಹಿಂದಿರುವ ವ್ಯಕ್ತಿ ಯಾರಿಗೂ ಗೋಚರಿಸದೆ ಕೇವಲ ಗರ್ನಲ್(ಪಟಾಕಿ)ಶಬ್ದ ಮಾತ್ರ ಭಕ್ತರಿಗೆ ಕೇಳಿಸುತ್ತದೆ.ಇದು ಹಿಂದಿನಿಂದ ಬಂದ ಪರಂಪರೆಯಾದರೂ ಗರ್ನಲ್ ಸಿಡಿಸುವ ವ್ಯಕ್ತಿ ಯಾರೆಂದು ಯಾರಿಗೂ ಗೊತ್ತಿರದೇ ಇದ್ದರೂ ಅವರು ತೆರೆಮರೆಯಲ್ಲಿ ತನ್ನ ಸೇವೆಯನ್ನು ಮುಂದುವರಿಸುತ್ತಾ ಹೋಗುತ್ತಿರುತ್ತಾರೆ. ಅವರೇ ಗರ್ನಲ್ ಬಾಬು.

ವೀರಮಂಗಲ ನಿವಾಸಿಯಾಗಿದ್ದು ವೃತ್ತಿಯಲ್ಲಿ ಬಾವಿಗೆ ರಿಂಗ್ ಅಳವಡಿಸುವ ಮತ್ತು ತೋಟದ ಕೆಲಸ ನಿರ್ವಹಿಸುತ್ತಿರುವ ಬಾಬು ಅವರು ಕಳೆದ ೧೭ ವರ್ಷಗಳಿಂದ ಶ್ರೀ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೆಯಲ್ಲಿ ಗರ್ನಲ್ ಸಿಡಿಸುವ ಮೂಲಕ ತಮ್ಮ ಸೇವೆಯನ್ನು ಮಾಡುತ್ತಿದ್ದಾರೆ.ದೇವರು ಪೇಟೆ ಸವಾರಿಯಿಂದ ದೇವಳಕ್ಕೆ ಹಿಂದಿರುಗುವಾಗ ರಾತ್ರಿ ಗಂಟೆ ೧.೩೦ ಆಗುವುದು ಸಹಜ.ಅಷ್ಟರವರೆಗೂ ಗರ್ನಲ್ ಸೇವೆ ಮಾಡಿದ ಬಾಬು ಅವರು ಮಾರನೆ ದಿನ ಬೆಳಿಗ್ಗೆ ಗಂಟೆ ೮ಕ್ಕೆ ದೇವಳದಲ್ಲಿ ಹಾಜರಿರುತ್ತಾರೆ.

ಗರ್ನಲ್‌ಗೂ ಲೆಕ್ಕಾಚಾರ: ಯಾವ ಸಮಯಕ್ಕೆ ಎಷ್ಟೆಷ್ಟು ಗರ್ನಲ್ ಸಿಡಿಸಬೇಕೆಂಬ ಸೂಚನೆಯನ್ನು ದೇವಳದ ಕಚೇರಿ ವ್ಯವಸ್ಥಾಪಕರು ನೀಡುತ್ತಾರೆ.ಬೆಳಗ್ಗಿನ ಉತ್ಸವದಲ್ಲಿ ಮಾಮೂಲು ಗರ್ನಲ್ ಸಿಡಿಸಿದ ಬಳಿಕ ಸಂಜೆ ಶ್ರೀ ದೇವರು ಬಲಿ ಉತ್ಸವಕ್ಕೆ ಸಿದ್ಧತೆ ವೇಳೆ ೧೦ ಗರ್ನಲ್ ಸಿಡಿಸುತ್ತಾರೆ.ಅದಾದ ಬಳಿಕ ದೇವರು ಒಳಾಂಗಣ ಸುತ್ತಿನಿಂದ ಹೊರಾಂಗಣಕ್ಕೆ ಬರುವ ವೇಳೆ ೧೦ ಗರ್ನಲ್ ಸಿಡಿಸಲಾಗುತ್ತದೆ.ಬಳಿಕದ ಉತ್ಸವದಲ್ಲಿ ೨ ಗರ್ನಲ್ ಮಾತ್ರ ಸಿಡಿಸಲಾಗುತ್ತದೆ. ಚೆಂಡೆ, ವಾದ್ಯ, ಸರ್ವ ವಾದ್ಯ, ಕಟ್ಟೆ ಪೂಜೆಗೆ ಭಕ್ತರಿಗೆ ಗರ್ನಲ್ ಮೂಲಕವೇ ಸೂಚನೆ ನೀಡಲಾಗುತ್ತದೆ. ಪೇಟೆ ಸವಾರಿಯ ವೇಳೆ ಕಟ್ಟೆಯಿಂದ ಕಟ್ಟೆಗೆ ಹೋಗುವ ಸಮಯಕ್ಕೆ ಎರಡು ಗರ್ನಲ್ ಸಿಡಿಸಲಾಗುತ್ತದೆ.ಹೀಗೆ ಏ.೧೦ ರಿಂದ ೨೦ರ ತನಕ ಸುಮಾರು ೨ ಸಾವಿರ ಗರ್ನಲ್ ಬೇಕಾಗುತ್ತದೆ.ವೀರಮಂಗಲ ಅವಭೃತ ಸವಾರಿ ವೇಳೆ ಸುಮಾರು ೫೦೦ ಗರ್ನಲ್ ಬೇಕಾಗುತ್ತದೆ ಎಂದು ಬಾಬು ಅವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.