HomePage_Banner
HomePage_Banner
HomePage_Banner
HomePage_Banner

ಇಂದಿನಿಂದ ಬಾಕಿಲ ಗುತ್ತುವಿನಲ್ಲಿ ಕೊರಗಜ್ಜನಿಗೆ ಹರಕೆಯ ಗಗ್ಗರ ಸೇವೆ, ಸತ್ಯನಾರಾಯಣ ಪೂಜೆ,  ಗರಡಿಯಲ್ಲಿ ತುಡರಬಲಿ ಸೇವೆ, ಬೆಮ್ಮೆರೆ ಬಲಿ , ಬೈದರ್ಕಳ ದರ್ಶನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ:  ಶ್ರೀ ಉಳ್ಳಾಲ್ತಿ ವೈದ್ಯನಾಥೇಶ್ವರ, ಹೊಸಮ್ಮ,ಅಣ್ಣಪ್ಪ ಪಂಜುರ್ಲಿ,ಬ್ರಹ್ಮ ಬೈದರ್ಕಳ ಗರಡಿ ಮತ್ತು ಪರಿವಾರ ದೈವಗಳ ಕ್ಷೇತ್ರ ಬಾಕಿಲಗುತ್ತುವಿನಲ್ಲಿ ಎ.೧೨ರಂದು ಕೊರಗಜ್ಜನಿಗೆ ಹರಕೆಯ ಗಗ್ಗರ ಸೇವೆ ಹಾಗೂ ಎ.೧೩ರಂದು ಗರಡಿಯಲ್ಲಿ ತುಡರಬಲಿ ಸೇವೆ , ಬೆಮ್ಮೆರೆ ಬಲಿ , ಬೈದರ್ಕಳ ದರ್ಶನ ನಡೆಯಲಿದೆ.

ಎ.೧೨ರಂದು  ಬೆಳಿಗ್ಗೆ ಗಣಹೋಮ,  ಬಳಿಕ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಲಿದೆ. ಬಳಿಕ ಕುಟು೦ಬ ಸದಸ್ಯರ ಮಹಾಸಭೆ, 2020-21 ನೇ ಸಾಲಿನ ಲೆಕ್ಕಪತ್ರ ಮಂಡನೆ, ಸಾಯಂಕಾಲ ಕೊರಗಜ್ಜನಿಗೆ ಹರಕೆಯ ಗಗ್ಗರ ಸೇವೆ ನಡೆದು  ಪ್ರಸಾದ ವಿತರಣೆಯ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಎ.೧೩ರಂದು ಚ೦ದ್ರಮಾನ ಯುಗಾದಿಯಂದು ಶ್ರೀ ವೈದ್ಯನಾಥೇಶ್ವರ  ಸನ್ನಿಧಿಯಲ್ಲಿ ವೈದ್ಯನಾಥನಿಗೆ ಹೋಮ, ಪ೦ಚಕಜ್ಜಾಯ ನಡೆದು ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ಕುಟು೦ಬಸ್ಥರ ಹಾಗೂ ಗ್ರಾಮಸ್ಥರ ಪರವಾಗಿ ಗರಡಿಯಲ್ಲಿ ತುಡರಬಲಿ ಸೇವೆ , ಬೆಮ್ಮೆರೆ ಬಲಿ , ಬೈದರ್ಕಳ ದರ್ಶನ ನಡೆದ ಬಳಿಕ  ಅನ್ನಸಂತರ್ಪಣೆ ನಡೆಯಲಿದೆ.

ಎ.೧೪ರಂದು ಸಾಯಂಕಾಲ  ಜಗದೀಶ್  ಪೂ೦ಜ  ಹರೇಕಳರವರಿ೦ದ ಗರಡಿಯಲ್ಲಿ ಹರಕೆಯ  ತುಡರಬಲಿ ಸೇವೆ, ಬೆಮ್ಮೆರೆ ಬಲಿ, ಬೈದರ್ಕಳ  ದರ್ಶನದ  ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾಧಿಗಳು ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಮಾಸ್ಕ್ ಧರಿಸಿ ಅಂತರ ಕಾಯ್ದುಕೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ‌.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.