HomePage_Banner
HomePage_Banner
HomePage_Banner
HomePage_Banner

ಬಡಗನ್ನೂರು: ಕೋವಿಡ್ ಲಸಿಕಾ ಶಿಬಿರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬಡಗನ್ನೂರುಃ ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬಡಗನ್ನೂರು ಗ್ರಾ.ಪಂ ಸಂಯೋಗದಲ್ಲಿ ಕೋವಿಡ್ ಲಸಿಕಾ ಹಾಕುವ ಕಾರ್ಯಕ್ರಮ ಏ.೧೨ ರಂದು ಬಡಗನ್ನೂರು ಗ್ರಾ.ಪಂ ಸಮುದಾಯ ಭವನದಲ್ಲಿ ನಡೆಯಿತು. ಲಸಿಕಾ ಕಾರ್ಯಕ್ರಮದ ಮೊದಲು ಲಸಿಕೆ ಹಾಕಿಸಿಕೊಳ್ಳುವುದರ ಪ್ರಯೋಜನದ ಬಗ್ಗೆ ಡಾ ನಿಕಿಲ್ ಮಾಹಿತಿ ನೀಡಿದರು.

ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ., ಉಪಾಧ್ಯಕ್ಷ ಸಂತೋಷ್ ಆಳ್ವ, ಸದಸ್ಯರಾದ ಕುಮಾರ ಅಂಬಟೆಮೂಲೆ ವಸಂತ ಗೌಡ ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರಿಯ ಆರೋಗ್ಯ ಸಹಾಯಕಿ ಲಕ್ಷ್ಮೀ, , ಬಡಗನ್ನೂರು ಕಿರಿಯ ಆರೋಗ್ಯ ಸಹಾಯಕಿ ನಂದಿನಿ, ಪಡುವನ್ನೂರು ಆರೋಗ್ಯ ಸಹಾಯಕಿ ವನಿತಾ, ಹಾಗೂ ಸಿಬ್ಬಂದಿಳಾದ ವಾಣಿಶ್ರೀ, ದಿವ್ಯ, ಬಡಗನ್ನೂರು ಆಶಾ ಕಾರ್ಯಕರ್ತೆಯರಾದ ಪುಷ್ಪವತಿ, ಸುಶೀಲಾ, ಸಗಂದಿ, ಪಡುವನ್ನೂರು ಸುಜಾತ, ವಿಜಯಲಕ್ಷ್ಮಿ ಹಾಗೂ ಗ್ರಾಮಾಸ್ತರು ಭಾಗವಹಿಸಿದರು.

ಬೆಳಗ್ಗೆ ೧೦ ರಿಂದ ಸಂಜೆ ೪ ರ ತನಕ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಿತು. ಪ್ರಥಮ ಹಂತದಲ್ಲಿ ೪೫ ರಿಂದ ೬೦ ವರ್ಷದೊಳಗಿನ ಸುಮಾರು ೨೦೦ ಮಂದಿ ಲಸಿಕೆ ಸೌಲಭ್ಯ ಪಡೆದುಕೊಂಡರು. ಎರಡನೇ ಹಂತದ ಲಸಿಕೆ ಮೇ.೨೫ ರಂದು ಗ್ರಾ.ಪಂ ಸಮುದಾಯದ ಭವನದಲ್ಲಿ ನಡೆಯಲಿದೆ. ಎ.೨೫ರಂದು ಸುಳ್ಯಪದವು ಗ್ರಾ.ಪಂ. ಸಮುದಾಯ ಭವನದಲ್ಲಿ ಪ್ರಥಮ ಹಮತದ ಲಸಿಕಾ ಕರ್ಯಕ್ರಮ ನಡೆಯಲಿದೆ ಎಂದು ಬಡಗನ್ನೂರು ಗ್ರಾ.ಪಂ. ವಸೀಮಾ ಗಂಧದ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.