HomePage_Banner
HomePage_Banner
HomePage_Banner
HomePage_Banner

ನಗರಸಭೆ ಸಾಮಾನ್ಯ ಸಭೆ: ನಗರಸಭೆ ಆಸ್ತಿ ತೆರಿಗೆ ರೂ. 2 ಕೋಟಿಯಷ್ಟು ಬಾಕಿ – ತೆರಿಗೆ ವಸೂಲಿ ಅಭಿಯಾನ ಮೂಲಕ ವಸೂಲಿ – ಜೀವಂಧರ್ ಜೈನ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ರೂ. 2ಕೋಟಿಯಷ್ಟು ಆಸ್ತಿ ತೆರಿಗೆ ಬಾಕಿ ಇದೆ. ಅದಕ್ಕಾಗಿ ಪ್ರತಿ ವಾರ್ಡ್‌ನಲ್ಲಿ ಪಟ್ಟಿ ಮಾಡಿ ಅಭಿಯಾನ ಮೂಲಕ ತೆರಿಗೆ ವಸೂಲಿ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ತಿಳಿಸಿದ್ದಾರೆ.


ಎ.11ರಂದು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಗರಸಭೆ ಸಾಮಾನ್ಯ ಸಭೆ ನಡೆಯಿತು. ೨೦೨೧ರ ಜನವರಿ, ಫೆಬ್ರವರಿ ತಿಂಗಳಲ್ಲಿ ಅಸ್ತಿ ತೆರಿಗೆ, ನಳ್ಳಿ ನೀರು ಕರ ವಸೂಲಿ ಮತ್ತು ಉದ್ಯಮ ಪರವಾನಿಗೆ, ಕಟ್ಟಡ ಪರವಾನಿಗೆ, ಜನನ ಮರಣ ಅರ್ಜಿಗಳ ಪರಿಶೀಲನೆ ಸಂದರ್ಭದಲ್ಲಿ ಆಸ್ತಿ ತೆರಿಗೆಯು ಜನವರಿ ತಿಂಗಳಲ್ಲಿ ಶೇ.೭೫ ಮತ್ತು ಫೆಬ್ರವರಿ ತಿಂಗಳಲ್ಲಿ ಶೇ.೭೮ ಬಾಕಿ ಇರುವುದನ್ನು ವಿಷಯ ಪತ್ರವನ್ನು ಗಮನಿಸಿದ ಅಧ್ಯಕ್ಷರು ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ರೂ. ೨ ಕೋಟಿಯಷ್ಟು ಆಸ್ತಿ ತೆರಿಗೆ ಬಾಕಿ ಇದೆ. ಇದನ್ನು ಸಂಗ್ರಹ ಮಾಡುವ ದೃಷ್ಟಿಯಿಂದ ವಾರ್ಡ್‌ಗಳ ಪಟ್ಟಿ ಮಾಡಿ. ನೀರು ಬಿಡುವವರು ಮತ್ತು ಕಂದಾಯ ಶಾಖೆಗಳಿಂದ ಮನೆ ಮನೆ ಭೇಟಿ ಮಾಡುವ ಅಭಿಯಾನ ಮಾಡಿ ತೆರಿಗೆ ಬಾಕಿಯನ್ನು ವಸೂಲಿ ಮಾಡಲಿದ್ದೇವೆ. ಈ ನಡುವೆ ಬಹುತೇಕ ಜನರಿಗೆ ತೆರಿಗೆ ಪಾವತಿ ಬಾಕಿ ಆದರೆ ಬಹಳಷ್ಟು ಬಡ್ಡಿ ಬೀಳುತ್ತದೆ ಎಂಬ ಮಾಹಿತಿ ಇಲ್ಲ. ತೆರಿಗೆ ಪಾವತಿ ಮಾಡದಿದ್ದರೆ ಶೇ.೨೪ ಬಡ್ಡಿ ಹೆಚ್ಚುವರಿಯಾಗಿ ತೆರಬೇಕಾಗುತ್ತದೆ. ಈ ಕುರಿತು ಜನರಿಗೆ ಅರಿವು ಮೂಡಿಸಬೇಕಾಗಿದೆ. ಅದೇ ರೀತಿ ಉದ್ಯಮ ಪರವಾನಿಗೆಯಲ್ಲಿ ಹಳೆ ಉದ್ಯಮ ಪರವಾನಿಗೆ ೨೫೦೦ ನವೀಕರಣಕ್ಕೆ ಬಂದಿದ್ದು, ಇದರಲ್ಲಿ ೫೨೭ ಉದ್ಯಮ ಪರವಾನಿಗೆ ನವೀಕರಣಕ್ಕೆ ಬಾಕಿ ಇದೆ. ಅದನ್ನು ಮುಂದಿನ ಸಭೆಯಲ್ಲಿ ನವೀಕರಣ ವ್ಯವಸ್ಥೆ ಮಾಡಲಾಗುವುದು ಎಂದರು. ಭಾಮಿ ಅಶೋಕ್ ಶೆಣೈ ಅವರು ಮಾತನಾಡಿ ತೆರಿಗೆ ಕುರಿತು ಹೊಸ ಕಟ್ಟಡಕ್ಕೆ ಜಾಸ್ತಿ ತೆರಿಗೆ ಬರುತ್ತದೆ ಎಂಬ ಮಾಹಿತಿ ಇದೆ ಎಂದರು. ಉತ್ತರಿಸಿದ ನಗರಸಭೆ ತೆರಿಗೆ ವಿಭಾಗದ ಭಾಗೀರಥಿಯವರು ಮಾಹಿತಿ ನೀಡಿ ೨೦೧೦ರ ನಂತರದ ಕಟ್ಟಡಕ್ಕೆ ಸವಕಲಿಗೆ ಅವಕಾಶ ಕೊಟ್ಟ ಕಾರಣ. ಹೊಸ ಕಟ್ಟಡಕ್ಕೆ ರೂ. ೧೦೦ ರಷ್ಟು ಹೆಚ್ಚು ತೆರಿಗೆ ಇದೆ ಎಂದರು. ನಗರಸಭೆ ಉಪಾಧ್ಯಕ್ಷ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ಪ್ರಭಾರ ಪೌರಾಯುಕ್ತರಾದ ಸಹಾಯಕ ಕಾರ್ಯಾಪಾಲಕ ಅಭಿಯಂತರ ಅರುಣ್ ವೇದಿಕೆಯಲ್ಲಿ ಉಪಸ್ಥಿತಿರಿದ್ದರು, ನಗರಸಭೆ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.