HomePage_Banner
HomePage_Banner
HomePage_Banner
HomePage_Banner

ಮೂತ್ರರೋಗ ತಜ್ಞ ಡಾ.ಸನ್ಮಾನ ಗೌಡ ಪುತ್ತೂರಿನ ಉಷಾ ಪಾಲಿ ಕ್ಲಿನಿಕ್‌ನಲ್ಲಿ ಸೇವೆಗೆ ಲಭ್ಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಂಗಳೂರಿನ ಪ್ರತಿಷ್ಠಿತ ಕೆ.ಎಂ.ಸಿ ಆಸ್ಪತ್ರೆಯ ಹಿರಿಯ ಯೂರೋಲಜಿ ಸಲಹಾ ತಜ್ಞ ಹಾಗೂ ಅಸೋಸಿಯೇಟ್ ಪ್ರೊಫೆಸರ್ ಡಾ.ಸನ್ಮಾನ್ ಗೌಡ MBBS, MS,(ಜನರಲ್ ಸರ್ಜರಿ) ಆಓಃ(ಯುರಿನೆರಿ ಸರ್ಜರಿ) ರವರು ಪ್ರತೀ ತಿಂಗಳ ಎರಡನೇ ಹಾಗೂ ನಾಲ್ಕನೇ ಬುಧವಾರ ಸಂಜೆ ೪ ರಿಂದ ೫ ತನಕ ದರ್ಬೆಯ ಉಷಾ ಪಾಲಿಕ್ಲಿನಿಕ್‌ನಲ್ಲಿ ಸೇವೆಗೆ ಲಭ್ಯರಿದ್ದಾರೆ.

ಎಂ.ಬಿ.ಬಿ.ಎಸ್ ಪದವಿಯನ್ನು ಬಳ್ಳಾರಿಯ ವಿಮ್ಸ್ ಕಾಲೇಜಿನಲ್ಲಿ ಹಾಗೂ ಜನರಲ್ ಸರ್ಜರಿಯಲ್ಲಿ MS ಪದವಿಯನ್ನು ಗೋವಾ ಮೆಡಿಕಲ್ ಕಾಲೇಜಲ್ಲಿ ಹಾಗೂ ಯುರಿನೆರಿ ಸರ್ಜಿರಿಯಲ್ಲಿ DNB ಪದವಿಯನ್ನು ದೆಹಲಿಯ NBE ಅಡಿಯಲ್ಲಿ ಕಸ್ತೂರ್ಬಾ ಮೆಡಿಕಲ್ ಕಾಲೇಜು ಆಸ್ಪತ್ರೆ ಯಲ್ಲಿ ಪೂರೈಸಿದ್ದಾರೆ. ಶಸ್ತ್ರಚಿಕಿತ್ಸೆ ಹಾಗೂ ಸಲಹಾ ತಜ್ಞರಾಗಿ ಸುಮಾರು ಹತ್ತು ವರ್ಷಗಳ ಅನುಭವ ಹೊಂದಿರುವ ಇವರು ಸುಮಾರು ಸಾವಿರಕ್ಕೂ ಅಧಿಕ ಶಸ್ತ್ರಚಿಕಿತ್ಸೆಯನ್ನು ಮಾಡಿರುತ್ತಾರೆ. ಕಿಡ್ನಿಯಲ್ಲಿ ಕಲ್ಲು, ಉರಿಮೂತ್ರ, ಮೂತ್ರದಲ್ಲಿ ರಕ್ತ, ಮೂತ್ರ ವಿಸರ್ಜಿಸಲು ತೊಂದರೆ, ಕಿಡ್ನಿ ಕಸಿ, ಕ್ಯಾನ್ಸರ್ ಸರ್ಜರಿಯಲ್ಲಿ ಹಾಗೂ ಸಾಮಾನ್ಯವಾಗಿ ಗಂಡಸರಲ್ಲಿ ಕಾಣಿಸಿಕೊಳ್ಳುವ ಪ್ರಾಸ್ಟೇಟ್ ಸಮಸ್ಯೆಗಳನ್ನು ಗುಣ ಪಡಿಸುವುದರಲ್ಲಿ ವಿಶೇಷ ತಜ್ಞರಾಗಿದ್ದಾರೆ.

ವೈದ್ಯಕೀಯ ಕ್ಷೇತ್ರಕ್ಕೆ ಸಂಬಂದಿಸಿದ ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಲೇಖನಗಳನ್ನು ಬರೆದಿರುತ್ತಾರೆ. ಮೂತ್ರ ರೋಗ ಕ್ಷೇತ್ರದಲ್ಲಿ ಇವರು ಸಲ್ಲಿಸಿದ ಸೇವೆಗಾಗಿ ೨೦೧೪ರಲ್ಲಿ ಡಾ ರವಿಶಂಕರ್ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಮಂಗಳೂರು ಯೂರೊಲೊಜಿ ಫೋರಮ್‌ನ ಉಪಾಧ್ಯಕ್ಷರಾಗಿಯೂ ಕರ್ನಾಟಕ ಯೂರೋಲಾಜಿ ಕೌನ್ಸಿಲ್‌ನ ಸದಸ್ಯರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಅಪಾಯಿಂಟ್‌ಮೆಂಟ್‌ಗಾಗಿ 9008256005 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.