HomePage_Banner
HomePage_Banner
HomePage_Banner
HomePage_Banner

ಬೊಳುವಾರು ಪಡ್ಡಂಬೈಲು ಪ್ಲಾಝಾದಲ್ಲಿ‌ ರೆಡ್ ಫ್ಲೈವುಡ್ ನ ವಿಸ್ತೃತ ಶಾಖೆ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವ್ಯಾಪಾರ ಧರ್ಮವನ್ನು ಪಾಲನೆ: ಮಠಂದೂರು


ಪುತ್ತೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವ್ಯಾಪಾರ ಧರ್ಮವನ್ನು ಪಾಲನೆ ಮಾಡುತ್ತಾ ವ್ಯವಹಾರ ನಡೆಸುವುದು ಅತೀ ಮುಖ್ಯ. ಸಿಬಂದಿಗಳ ನಗುಮುಖದ ಸೇವೆ  ಸಂಸ್ಥೆಯ ಏಳಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಗುಣಮಟ್ಟದ ವಸ್ತುಗಳ ಸಂಗ್ರಹ ಹಾಗೂ ಮಾರಾಟ ಸಂಸ್ಥೆಯ ಯಶಸ್ಸಿನ ರಹದಾರಿಯಾಗಿದೆ. ವ್ಯಾಪಾರದ ಜೊತೆಗೆ ಸಮಾಜಕ್ಕೆ ಕೊಡುಗೆಯನ್ನು ನೀಡುವ ಕೆಲಸವೂ ನಮ್ಮಿಂದಾಗಬೇಕು ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರುರವರು ಹೇಳಿದರು.


ಉಪ್ಪಿನಂಗಡಿ – ಪುತ್ತೂರು ರಸ್ತೆಯ ಪಡೀಲಿನ ರಾಮಲೀಲ ಕಾಂಪ್ಲೆಕ್ಸ್ ನಲ್ಲಿ ಕಳೆದ ಹಲವಾರು ವರುಷಗಳಿಂದ ಕಾರ್ಯಾಚರಿಸುತ್ತಿದ್ದ ಪ್ಲೈವುಡ್, ಪೈಂಟ್, ಹಾರ್ಡ್ ವೇರ್ ಹಾಗೂ ಅಲ್ಯೂಮೀನಿಯಂ ವಸ್ತುಗಳ ಮಾರಾಟ ಮಳಿಗೆ ರೆಡ್ ಫ್ಲೈವುಡ್ ಸಂಸ್ಥೆಯು  ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಬೊಳುವಾರು ವಿಶ್ವಕರ್ಮ ಸಭಾ ಭವನದ ಬಳಿ ಇರುವ ಪಡ್ಡಂಬೈಲು ಪ್ಲಾಝಾಕ್ಕೆ ಸ್ಥಳಾಂತರಗೊಂಡಿದ್ದು, ಎ.೧೨ರಂದು ಸಂಸ್ಥೆಯ ವಿಸ್ತೃತ ಮಳಿಗೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಕಳೆದ ಕೆಲತಿಂಗಳುಗಳಿಂದ ಪುತ್ತೂರಿನಲ್ಲಿ ಹಲವಾರು ದೊಡ್ಡದೊಡ್ಡ ಕಂಪೆನಿಗಳ ಸಹಿತ ಶೋರೂಂಗಳು ಉದ್ಘಾಟನೆಗೊಳ್ಳುತ್ತಿದೆ. ಇದೀಗ ದೊಡ್ಡ ದೊಡ್ಡ ಪೇಟೆ ಪಟ್ಟಣಗಳ್ಳಲ್ಲು ದೊರೆಯುವ ವಸ್ತುಗಳು ನಮಗೆ ಪುತ್ತೂರಿನಲ್ಲಿ ದೊರೆಯುವಂತಾಗಿದೆ. ಇಂತಹ ಸಂಸ್ಥೆಗಳ ಹುಟ್ಟು ಊರು ಬೆಳೆಯಲು ಪೂರಕವಾಗಿದೆ. ಪುತ್ತೂರನ್ನು ದ.ಕ ಗ್ರಾಮಾಂತರ ಜಿಲ್ಲೆಯನ್ನಾಗಿಸಬೇಕು ಎನ್ನುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಪುತ್ತೂರನ್ನು ಕೈಗಾರಿಕಾ ಪ್ರದೇಶವನ್ನಾಗಿಸುವ ಕೆಲಸವು ನಡೆಯುತ್ತಿದೆ.  ಜಿಲ್ಲೆಯಾಗುವ ಎಲ್ಲಾ ಅರ್ಹತೆ ಪುತ್ತೂರಿಗಿದೆ. ಒಂದು ಪ್ರದೇಶದ ಬೆಳವಣಿಗೆಯಲ್ಲಿ ಇಂತಹ ಸಂಸ್ಥೆಗಳ ಪಾತ್ರ ಮಹತ್ತರದ್ದಾಗಿದೆ. ಒಂದು ಮನೆ ಕಟ್ಟಲು ಬೇಕಾದ ಎಲ್ಲಾ ವಸ್ತುಗಳು ಒಂದೇ ಸೂರಿನಡಿಯಲ್ಲಿ ಸಿಗುವಂತಾಗಿರುವುದು ಒಳ್ಳೆಯ ವಿಚಾರ. ಜನ ಇದನ್ನು ಪ್ರೋತ್ಸಾಹಿಸುತ್ತಾರೆ ಎಂದು ಹೇಳಿ ಶುಭಹಾರೈಸಿದರು. ಅಸಯ್ಯದ್ ಅನಸ್ ತಂಙಳ್ ದುವಾ ನೆರವೇರಿಸಿದರು.

ಪುತ್ತೂರು ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ರವರು ಪೈಂಟ್ ಸೆಕ್ಷನ್ ಅನ್ನು ಉದ್ಘಾಟಿಸಿ ಮಾತನಾಡಿ ಸಂಸ್ಥೆಗಳ ಹುಟ್ಟು ಪುತ್ತೂರಿನ ಅಭಿವೃದ್ಧಿಗೆ ಪೂರಕ. ಹಲವಾರು ವರುಷಗಳ ಹಿಂದೆ ಆರಂಭವಾಗಿರುವ ರೆಡ್ ಫ್ಲೈವುಡ್ ಸಂಸ್ಥೆ ಇದೀಗಾಗಲೇ ಜನರ ಮನೆಮಾತಾಗಿದೆ. ಜನರ ಅವಶ್ಯಕತೆಗಳ ಪೂರೈಕೆಗಾಗಿ ಮಾಲಕರು ಹಲವಾರು ಹೊಸತನಗಳಿಂದ ಕೂಡಿದ ಮಳಿಗೆಯನ್ನು ಇದೀಗ ಪುತ್ತೂರಿನ ಮುಖ್ಯ ರಸ್ತೆಯಲ್ಲಿ ಆರಂಬಿಸಿದ್ದಾರೆ. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.

ಮಾಜಿ ಶಾಸಕರಾದ ಶಕುಂತಳಾ ಟಿ.ಶೆಟ್ಟಿಯವರು ಮಾತನಾಡಿ ರೆಡ್ ಫ್ಲೈವುಡ್ ಸಂಸ್ಥೆ ಬೆಳೆಯುತ್ತಿರುವ ಪುತ್ತೂರಿನ ಮಕುಟಕ್ಕೆ ಇನ್ನೊಂದು ಗರಿಯಾಗಿದೆ. ಸಂಸ್ಥೆಗಳು ಪ್ರಾರಂಭವಾದಂತೆ ಪೇಟೆ ಬೆಳೆಯುತ್ತದೆ‌. ಪೇಟೆ ಬೆಳೆದಂತೆ ಜನರ ಓಡಾಟವೂ ಹೆಚ್ಚಾಗುತ್ತದೆ. ಇದರಿಂದ ಅಭಿವೃದ್ಧಿ ಸಾಧ್ಯವಾಗುತ್ತದೆ. ಹೊಸತನಗಳಿಂದ ಕೂಡಿದ ಇಂತಹ ಸಂಸ್ಥೆಗಳು ಪ್ರಾರಂಭವಾಗುವುದರಿಂದ ಕೂಡಲೇ ಜನರಿಗೆ ತಮ್ಮ ಅವಶ್ಯಕತೆಗಳನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತದೆ. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭಹಾರೈಸಿದರು.

ಸುಧಾನವಸತಿಯುತ ಶಾಲಾ ಸಂಚಾಲಕರಾದ ವಿಜಯ ಹಾರ್ವಿನ್ ರವರು ಮಾತನಾಡಿ ಸಮಾಜದ ಅಗತ್ಯತೆಯ ಪೂರೈಕೆ ಸಂಸ್ಥೆಯಿಂದ ಆಗಬೇಕು. ಜನಸ್ನೇಹಿ ಕೆಲಸ ಸಂಸ್ಥೆಯ ಸಿಬಂದಿಗಳಿಂದಾಗಬೇಕು. ವ್ಯಾಪಾರದಲ್ಲಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ವ್ಯಾಪಾರದಲ್ಲಿ ಕ್ಲ್ಯಾರಿಟಿ ಇರಬೇಕು. ಜನರಿಗೆ ಭರವಸೆಯನ್ನು ಮೂಡಿಸುವ ಕೆಲಸವಾಗಬೇಕು ಎಂದರು. ಪುತ್ತೂರು ರಾಮಕೃಷ್ಣ ಪ್ರೌಡಶಾಲಾ ಸಂಚಾಲಕರಾದ  ಹೇಮನಾಥ ಶೆಟ್ಟಿ ಕಾವುರವರು ಮಾತನಾಡಿ ರೆಡ್ ಫ್ಲೈವುಡ್ ಈ ಹಿಂದಿನಿಂದಲೂ ಉತ್ತಮ ವ್ಯವಹಾರವನ್ನು ನೀಡುವ ಮೂಲಕ ಜನರ ಮನಸ್ಸನ್ನು ಗೆದ್ದಿರುವ ಸಂಸ್ಥೆಯಾಗಿದೆ. ಇದೀಗ  ಸಂಸ್ಥೆಯ ವಿಸ್ತೃತ ಮಳಿಗೆ ಹಲವಾರು ಹೊಸತನಗಳೊಂದಿಗೆ ಆರಂಭವಾಗಿದೆ. ಜನರ ಅವಶ್ಯಕತೆಗಳ ತಿಳುವಳಿಕೆ ಇರುವ ಹಾಗೂ ವ್ಯಾಪಾರದಲ್ಲಿ ಪರಿಪೂರ್ಣ ಜ್ಞಾನ ಹೊಂದಿರುವ ಯುವಕರು ಈ ಸಂಸ್ಥೆಯ ಹಿಂದೆ ಇರುವುದು ಸಂಸ್ಥೆಯ ಏಳಿಗೆಗೆ ಪೂರಕವಾಗಿದೆ. ಅನುಭವದ ಆಧಾರದಲ್ಲಿ ಆರಂಭಿಸಿದ ಸಂಸ್ಥೆ ಗೆ ಯಶಸ್ಸು ಖಂಡಿತಾ ಎಂದರು. ಪಡ್ಡಂಬೈಲು ಪ್ಲಾಜಾದ ಮಾಲಕರಾದ ಅಡ್ವಕೇಟ್ ಸುರೇಶ್ ರೈ ಪಡ್ಡಂಬೈಲು, ಪುತ್ತೂರು ನಗರಸಭಾ ಸದಸ್ಯ ಸಂತೋಷ್ ಕುಮಾರ್ ಬೊಳುವಾರು, ಪುತ್ತೂರು ಸಿಟಿಗೋಲ್ಡ್ ನ ಮಾಲಕರಾದ ಆದಂ ಹಾಜಿ, ಏಷಿಯನ್ ವುಡ್ ನ ಮಾಲಕರಾದ ಇಸ್ಮಾಯಿಲ್ ಹಾಜಿ, ಪುತ್ತೂರು ತಾಲೂಕು ಅಡಿಕೆ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್, ಬನ್ನೂರು ರೈತರ ಸೇವಾಸಹಕಾರಿ ಸಂಘದ ಅಧ್ಯಕ್ಷರಾದ ಈಶ್ವರ ಭಟ್ ಪಂಜಿಗುಡ್ಡೆ, ಎಂ.ಫ್ರೆಂಡ್ಸ್ ನ ಕಾರ್ಯದರ್ಶಿ ರಶೀದ್ ವಿಟ್ಲ, ಅಬ್ದುಲ್ ಅಝೀಜ್ ಬುಶ್ರಾ ಕಾವು, ಪ್ರಸನ್ನ ಕುಮಾರ್ ಶೆಟ್ಟಿ ಸಿಝ್ಲರ್, ಇಝಾ ಕನ್ಸ್ ಸ್ಟ್ರೆಕ್ಷನ್ ನ ಗಫೂರ್, ದ.ಕ ಮುಸ್ಲೀಂ ಪರಿಷತ್ ನ ಅಧ್ಯಕ್ಷರಾದ ಅಶ್ರಫ್ ಕಲ್ಲೆಗ, ಕೇಶವ ಪೈ, ಹಸೈನಾರ್ ಹಾಜಿ, ಯೂಸುಫ್ ಹಾಜಿ ಫೈವ್ ಸ್ಟಾರ್, ಅಬ್ದುಲ್ ಮಜೀದ್ ಸಖಾಫಿ ಮಲಿ ಬನ್ನೂರು, ಅಬೂಬಕ್ಕರ್ ಸಿದ್ದಿಕ್ ಜಲಾಲಿ ಕಲ್ಲೆಗ ಮೊದಲಾದವರು ಆಗಮಿಸಿ ಶುಭಹಾರೈಸಿದರು. ಕೇಶವ ಪೈ ಹಾಗೂ ಪುತ್ತೂರು ನಗರ ಸಭಾ ಸದಸ್ಯ ಸಂತೋಷ್ ಕುಮಾರ್ ಬೊಳುವಾರುರವರು ಹಾರ್ಡ್ ವೇರ್ ವಿಭಾಗದಿಂದ  ಸಾಮಾಗ್ರಿ ಕೊಳ್ಳುವ ಮೂಲಕ  ಪ್ರಥಮ ಗ್ರಾಹಕರಾದರು.

ಇಝಾ ಕನ್ಸ್ ಸ್ಟ್ರೆಕ್ಷನ್ ನ ಗಫೂರ್ ರವರು  ಪೈಂಟ್ ಸೆಕ್ಷನ್ ನಿಂದ ಸಾಮಾಗ್ರಿ ಖರೀದಿಸುವ ಮೂಲಕ ಪ್ರಥಮ ಗ್ರಾಹಕಾರದರು. ಕಳೆದ ಹಲವಾರು ವರುಷಗಳಿಂದ ಯಾವುದೇ ಪ್ರಚಾರವನ್ನು ಬಯಸದೆ ಸಮಾಜದಲ್ಲಿರುವ ಅಶಕ್ತರ ಕಣ್ಣೀರೊರೆಸುವ ಕಾಯಕದಲ್ಲಿ ನಿರತವಾಗಿರುವ ರೆಡ್ ಗೈಸ್  ಸಂಘಟನೆಯ ಅಧ್ಯಕ್ಷರಾದ  ಮನ್ಸೂರ್  ಹಾಗೂ ನೂತನ‌ ಶಾಖೆಯ ಕೆಲಸ ಕಾರ್ಯಗಳನ್ನು ಮಾಡಿದ  ನವಾಝ್, ರಶೀದ್, ನಿಖಿಲ್, ನಝೀಂ, ವೇಕನಾಥ ರೈ ಮೊದಲಾದವರನ್ನು  ಶಾಸಕರು ಶಾಲು ಹೊದಿಸಿ ಗೌರವಿಸಿದರು‌.

ಜುನೈದ್, ಜಬ್ಬರ್ ಏಷ್ಯನ್ ವುಡ್, ನಝೀರ್, ಖಲಂದರ್, ರವುಫ್, ಪ್ರವೀಣ್, ಆಶಿಕ್, ಸಂಶುದ್ದೀನ್ ಹೋಂ ಟಚ್ ಮೊದಲಾದವರು ಅತಿಥಿಗಳಿಗೆ ಶಾಲು ಹೊದಿಸಿ ಹೂಗುಚ್ಚ ನೀಡಿ ಸ್ವಾಗತಿಸಿದರು. ವಕೀಲರಾದ ಶಾಕೀರ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಶುಭಾರಂಭದ ಪ್ರಯುಕ್ತ ವಿಶೇಷ ರಿಯಾಯಿತಿ
ಕಳೆದ ಕೆಲವರುಷಗಳಿಂದ ಪಡೀಲಿನಲ್ಲಿ ಕಾರ್ಯಚರಿಸುತ್ತಿದ್ದ ನಮಗೆ ಗ್ರಾಹಕರು ಉತ್ತಮ ರೀತಿಯ ಸ್ಪಂದನೆಯನ್ನು ನೀಡಿದ್ದಾರೆ.  ಗ್ರಾಹಕರಿಗೆ ಮನೆ ನಿರ್ಮಾಣದ ಸಂದರ್ಭದಲ್ಲಿ ಬೇಕಾದ ಫ್ಲೈವುಡ್, ಹಾರ್ಡ್ ವೇರ್ ಐಟಂ, ನ್ಯೂರೋಲ್ಯಾಕ್  ಪೈಂಟ್ ಸಹಿತ ಅಲ್ಯೂಮೀನಿಂ ಐಟಂಗಳು ಒಂದೇ ಸೂರಿನಡಿಯಲ್ಲಿ ಸಿಗಬೇಕೆನ್ನುವ ನಿಟ್ಟಿನಲ್ಲಿ ಇದೀಗ ಮುಖ್ಯರಸ್ತೆಯ ಬೊಳುವಾರಿನಲ್ಲಿರುವ ಪಡ್ಡಂಬೈಲು ಫ್ಲಾಝಾಕ್ಕೆ ನಾವು ಸ್ಥಳಾಂತರಗೊಂಡು ಇಲ್ಲಿ ವಿಸ್ತೃತ ಶಾಖೆಯನ್ನು ಆರಂಭಿಸಿದ್ದೇವೆ. ಈ ವರೆಗೆ ನಮಗೆ ಸಹಕಾರವನ್ನು ನೀಡಿದ ಗ್ರಾಹಕರಿಗೆ ನಾವು ಅಭಾರಿಯಾಗಿದ್ದೇವೆ. ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಭಯಸುತ್ತೇವೆ.  ಸಂಸ್ಥೆಯ ಉದ್ಘಾಟನೆಯ ಪ್ರಯುಕ್ತ ಗ್ರಾಹಕರಿಗೆ ವಿಶೇಷ ರೀಯಾಯಿತಿಯನ್ನು ಸಂಸ್ಥೆ ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.