HomePage_Banner
HomePage_Banner
HomePage_Banner
HomePage_Banner

ಪರ್ಪುಂಜ: ತರ್ಬೀಯತುಲ್ ಹುದಾ ಅಸೋಸಿಯೇಷನ್‌ನಿಂದ ವಾರ್ಷಿಕ ಮಹ್ಳರತುಲ್ ಬದ್ರಿಯ್ಯಾ ಮಜ್ಲಿಸ್, ಸನ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಒಳಮೊಗ್ರು ಗ್ರಾಮದ ಮೈದಾನಿಮೂಲೆ ತರ್ಬೀಯತುಲ್ ಹುದಾ ಅಸೋಸಿಯೇಷನ್ ಇದರ ಮೂರನೇ ವಾರ್ಷಿಕ ಮಹ್ಳರತುಲ್ ಬದ್ರಿಯ್ಯಾ ಮಜ್ಲಿಸ್, ರಂಝಾನ್ ಕಿಟ್ ವಿತರಣೆ ಮತ್ತು ರಂಝಾನ್ ಪ್ರಭಾಷಣ ಕಾರ್ಯಕ್ರಮವು ಎ.೦೯ ರಂದು ನಡೆಯಿತು. ಸಂಜೆ ತರ್ಬೀಯತುಲ್ ಹುದಾ ಅಸೋಸಿಯೇಷನ್ ಇದರ ಗೌರವಾಧ್ಯಕ್ಷ ಅಲ್‌ಹಾಜ್ ಅಬೂನಜಾ ಪರ್ಪುಂಜ ಉಸ್ತಾದರ ನೇತೃತ್ವದಲ್ಲಿ ಮಹ್ಳರತುಲ್ ಬದ್ರಿಯ್ಯಾ ಮಜ್ಲಿಸ್ ನೊಂದಿಗೆ ಕಾರ್ಯಕ್ರಮವು ಆರಂಭವಾಯಿತು.

ಮೈದಾನಿಮೂಲೆ ಜುಮಾ ಮಸೀದಿಯ ಗೌರವಾಧ್ಯಕ್ಷ ಸಯ್ಯದ್ ಮುಝಮ್ಮಿಲ್ ತಂಙಳ್ ಕಾಸರಗೋಡು ಕಾರ್ಯಕ್ರಮಕ್ಕೆ ದುಃಆ ಆಶಿರ್ವಚನ ಮಾಡುವ ಮೂಲಕ ಇದೊಂದು ಬಡ ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ ಸಂಘವಾಗಿದ್ದು, ಎಲ್ಲರ ಸಹಕಾರಗಳು ಸದಾ ಇರಬೇಕೆಂದು ಹೇಳಿದರು. ಸ್ಥಳೀಯ ಖತೀಬರಾದ ಅಬ್ದುಲ್ ರಝ್ಝಾಕ್ ಅಲ್ ಖಾಸಿಮಿ ಉಸ್ತಾದರು ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ಯೂಸುಫ್ ಹಾಜಿ ಕೈಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಕಾರ್ಯಕ್ರಮಕ್ಕೆ ಶುಭಹಾರೈಸುವುದರ ಮೂಲಕ ರಂಝಾನ್ ಕಿಟ್ ಅನ್ನು ವಿತರಿಸಿದರು. ಅನೀಸ್ ಸಖಾಫಿ ಮುನ್ನಿಪ್ಪಾಡಿ ಮಂಜೇಶ್ವರ ಇವರು ರಂಝಾನ್ ಪ್ರಭಾಷಣ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನೂತನ ಸದಸ್ಯರಾಗಿ ಆಯ್ಕೆಯಾದ ಅಶ್ರಫ್ ಉಜಿರೋಡಿ ಮತ್ತು ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ‘ಅಲ್ ಮಾಹಿರ’ ಎಂಬ ಬಿರುದಿಗೆ ಆಯ್ಕೆಯಾದ ಆಯಿಶಾ ಅಲ್ ಮಾಹಿರಾ ರವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಅಬ್ದುಲ್ ರಹಿಮಾನ್ ಶಾಂತಿಗೋಡು, ಯೂಸುಫ್ ಮೈದಾನಿಮೂಲೆ, ಹಾರಿಸ್ ಉಜಿರೋಡಿ, ಹಾರಿಸ್ ಮುಳಿಯಡ್ಕ, ಅಶ್ರಫ್ ಸಖಾಫಿ ಪರ್ಪುಂಜ, ಹಾರಿಸ್ ನೀರ್ಪಾಡಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಿತು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.