HomePage_Banner
HomePage_Banner
HomePage_Banner
HomePage_Banner

ಶ್ರೀ ಮಹಾಲಿಂಗೇಶ್ವರ ದೇವರ ಅವಭೃತಕ್ಕೆ – ವೀರಮಂಗಲ ಹೊಳೆಯಲ್ಲಿನ ಮರಳಿನ ದಿಬ್ಬ ಸರಿಸುವ ಕಾಮಗಾರಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಿ ಬ್ರಹ್ಮರಥೋತ್ಸವದ ಮಾರನೆ ದಿನ ಎ.18ರಂದು ಸಂಜೆ ಅವಭೃತ ಸವಾರಿಯಲ್ಲಿ ಶ್ರೀ ದೇವರು ವೀರಮಂಗಲ ಹೊಳೆಗೆ ಇಳಿಯಲು ಮರಳಿನ ದಿಬ್ಬವನ್ನು ಬದಿಗೆ ಸರಿಸುವ ಕಾಮಗಾರಿ ಆರಂಭಗೊಂಡಿದೆ.

ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಅರ್ಚಕ ಕೆ.ಪ್ರೀತಂ ಪುತ್ತೂರಾಯ, ಸಿಬ್ಬಂದಿ ಪದ್ಮನಾಭ ಅವರು ಎ.13ರಂದು ವೀರಮಂಗಲ ಶ್ರೀ ದೇವರ ಅವಭೃತ ಹೊಳೆಗೆ ತೆರಳಿ ಅಲ್ಲಿ ದೇವರ ಅವಭೃತದ ಸ್ಥಳದಲ್ಲಿನ ಆಳದ ಕುರಿತು ಹೊಳೆಗೆ ಇಳಿದು ನೋಡಿ ಪರಿಶೀಲಿಸಿದ್ದಾರೆ. ಹೊಳೆಯಲ್ಲಿ ನೀರಿನ ಹರಿವು ಹೆಚ್ಚು ಮಾಡಲು ಮರಳಿನ ದಿಬ್ಬಗಳ್ನು ಬದಿಗೆ ಸರಿಸಲು ಜೆಸಿಬಿ ಆಪರೇಟರ್‌ಗೆ ಮಾರ್ಗಸೂಚಿಯನ್ನು ನೀಡಿದರು. ದೇವರು ಅವಭೃತಕ್ಕೆ ಇಳಿಯುವ ಸ್ಥಳದಿಂದ ಸ್ವಲ್ಪ ಮುಂದೆ ಮರಳಿನ ದಿಬ್ಬ ಇರುವುದರಿಂದ ಜೆಸಿಬಿ ಅಲ್ಲಿಗೆ ಹೋಗಿ ಕೆಲಸ ನಿರ್ವಹಿಸಲು ತಾತ್ಕಾಲಿಕ ರಾಮ ಸೇತು ಮಾಡಿ, ಮರಳನ್ನು ಬದಿಗೆ ಸರಿಸುವ ಕೆಲಸ ಮಾಡಲಾಗುತ್ತಿದೆ. ವೀರಮಂಗಲದ ಸ್ಥಳೀಯ ಭಕ್ತರು ಸೇವಾ ಸಮಿತಿಯವರು ಸಹಕಾರದಿಂದ ಕಾಮಗಾರಿ ನಡೆಯುತ್ತಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.