HomePage_Banner
HomePage_Banner
HomePage_Banner
HomePage_Banner

ಧಾರ್ಮಿಕ ಅನುಷ್ಠಾನಗಳಿಂದ ಸುಭಗ ಬದುಕಿನ ಹಾದಿ ಗೋಚರ- ಬ್ರಹ್ಮಶ್ರೀ ಶ್ರೀಧರ ತಂತ್ರಿ ಕುಂಟಾರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸಾಧಕರನ್ನು ಗೌರವಿಸುವುದು ಅಂದರೆ ಅದು ಸಂಸ್ಕೃತಿಯನ್ನು ಗೌರವಿಸಿದಂತೆ. ಎಲ್ಲಿ ಸಂಸ್ಕೃತಿ ಜೀವಂತವಾಗಿದೆಯೋ ಅಲ್ಲಿ ಸುಸಂಸ್ಕೃತ ಸಮಾಜ ಸೃಷ್ಟಿಯಾಗಿದೆ ಎಂದರ್ಥ. ಹಿರಿಯರನ್ನು ನೆನಪಿಸುವುದು, ಅವರ ಹೆಸರಿನಲ್ಲಿ ಸಾಧಕರನ್ನು ಗೌರವಿಸುವುದು ಕೂಡಾ ಪೂಜೆಗೆ ಸಮಾನ ಎಂದು ಬ್ರಹ್ಮಶ್ರೀ ಕುಂಟಾರು ಶ್ರೀಧರ ತಂತ್ರಿಗಳವರು ಹೇಳಿದರು.

ಅವರು ಪುತ್ತೂರು ಪರ್ಲಡ್ಕದ ‘ಅಗಸ್ತ್ಯ’ ನಿವಾಸದಲ್ಲಿ ಜರುಗಿದ ದಿ.ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯ ಪ್ರತಿಷ್ಠಾನದ ವಾರ್ಷಿಕ ಗೌರವ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ನಿತ್ಯದ ಬದುಕಿನಲ್ಲಿ ಧಾರ್ಮಿಕ ಅನುಷ್ಠಾನಗಳು ಬದುಕಿನ ಸುಭಗತನದ ಹಾದಿಯನ್ನು ತೋರಿಸುತ್ತವೆ ಎಂದು ಅವರು ಹೇಳಿದರು. ಪೌರೋಹಿತ್ಯ ಕ್ಷೇತ್ರಕ್ಕೆ ತನ್ನ ಅನುಷ್ಠಾನಗಳಿಂದ ಗೌರವ ತಂದ ವೇ.ಮೂ.ರಾಮಕೃಷ್ಣ ಮಿತ್ಯಾಂತರಿಗೆ ವಿಷ್ಣುಮೂರ್ತಿ ನೂರಿತ್ತಾಯ ನೆನಪಿನ ಗೌರವವನ್ನು ಶ್ರೀಧರ ತಂತ್ರಿಗಳು ಪ್ರದಾನ ಮಾಡಿದರು. ಅಭ್ಯಾಗತರಾಗಿ ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಪ್ರೊ.ವೇದವ್ಯಾಸರು ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಸಮಾಜಿಕ ಕಾರ್ಯಕರ್ತ ಕೆಯ್ಯೂರು ನಾರಾಯಣ ಭಟ್ ವಹಿಸಿದ್ದರು. ಪ್ರತಿಷ್ಠಾನದ ಸಂಚಾಲಕ ದಿವಾಕರ ಗೇರುಕಟ್ಟೆಯವರು ಕೀರ್ತಿಶೇಷ ವಿಷ್ಣುಮೂರ್ತಿ ಬಾರ್ಯರ ಸ್ಮೃತಿಗೈದರು. ವೇ.ಮೂ.ಕೊಳಕ್ಕೆ ಸುದರ್ಶನ ಮಯ್ಯರು ಮಾತನಾಡಿದರು. ರಂಗನಾಥ ರಾವ್ ಬೊಳ್ವಾರು ಸಂಮಾನಿತರ ಗುಣಕಥನ ಫಲಕವನ್ನು ವಾಚಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿ, ಶ್ರೀಮತಿ ಕೃಷ್ಣವೇಣಿ ಪ್ರತ್ಯೂಷ್ ಬಾರ್ಯ ಪ್ರಾರ್ಥಿಸಿದರು. ಶ್ರೀಮತಿ ಸ್ವರ್ಣಲತಾ ಬಾರ್ಯ ವಂದಿಸಿದರು. ಪ್ರಜ್ಞಾ ಬಾರ್ಯ, ಪ್ರತ್ಯೂಷ ಬಾರ್ಯ ಅತಿಥಿಗಳನ್ನು ಗೌರವಿಸಿದರು. ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.