HomePage_Banner
HomePage_Banner
HomePage_Banner
HomePage_Banner

ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಸದಸ್ಯರ ಶಕ್ತಿ ಒಕ್ಕೂಟ ಅಸ್ಥಿತ್ವಕ್ಕೆ – ಅಧ್ಯಕ್ಷರಾಗಿ ಜೆ.ಕೆ ವಸಂತ ರೈ ದುಗ್ಗಳ, ಪ್ರ.ಕಾ ಕಮಲೇಶ್ ಸರ್ವೆದೋಳ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು; ಕಾಂಗ್ರೆಸ್ ಪಕ್ಷ ಬೆಂಬಲಿತ ಚುನಾಯಿತ ಸದಸ್ಯರ ಶಕ್ತಿ ಒಕ್ಕೂಟವು ಅಸ್ಥಿತ್ವಕ್ಕೆ ಬಂದಿದ್ದು, ಅಧ್ಯಕ್ಷರಾಗಿ ಕೊಳ್ತಿಗೆ ಗ್ರಾ.ಪಂ ಸದಸ್ಯರ ಜೆ.ಕೆ ವಸಂತ ರೈ ದುಗ್ಗಳ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಸರ್ವೆದೋಳ ಆಯ್ಕೆಯಾಗಿದ್ದಾರೆ. ರಚನಾ ಸಭೆಯು ಎ.13ರಂದು ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆಯಿತು.

ಎಪಿಎಂಸಿ ರಸ್ತೆಯ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಎ.೧೩ರಂದು ಜಿ.ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಕೋಶಾಧಿಕಾರಿಯಾಗಿ ನರಿಮೊಗರು ಗ್ರಾ.ಪಂನ ಸುಧೀರ್, ಗೌರವಾಧ್ಯಕ್ಷರಾಗಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಗೌರವ ಸಲಹೆಗಾರರಾಗಿ ಜಿ.ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಕಾವು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಎನ್., ಫಝಲ್ ರಹೀಂ, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ್ ರೈ, ಕಾಂಗ್ರೆಸ್ ಜಿಲ್ಲಾ ಕಿಸಾನ್ ಘಟಕದ ಉಪಾಧ್ಯಕ್ಷ ಎ. ಕೆ. ಜಯರಾಮ ರೈ, ಸೇವಾದಳದ ಜೋಕಿಂ ಡಿ’ಸೋಜ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ಯುವ ಕಾಂಗ್ರೆಸ್ ಅಧ್ಯಕ್ಷ, ಶ್ರೀಪ್ರಸಾದ್ ಎನ್, ತಾ.ಪಂ ಸದಸ್ಯರಾದ ಪರಮೇಶ್ವರ ಭಂಡಾರಿ, ರಾಮ ಪಾಂಬಾರು, ಫೌಝಿಯ ಇಬ್ರಾಹಿಂ, ನೆಟ್ಟನಿಗೆ ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಕೊಳ್ತಿಗೆ ಗ್ರಾ.ಪಂ ಅಧ್ಯಕ್ಷ ಶ್ಯಾಮ್ ಸುಂದರ, ನಗರ ಸಭಾ ಮಾಜಿ ಅಧ್ಯಕಷೆ ವಾಣಿ ಶ್ರೀಧರ್, ಉಪಾಧ್ಯಕ್ಷರಾಗಿ ಗ್ರಾ.ಪಂ ಸದಸ್ಯರಾದ ಕೆಯ್ಯೂರಿನ ಅಬ್ದುಲ್ ಖಾದರ್ ಮೇರ್ಲ, ಆರ್ಯಾಪುನ ಪುರುಷೋತ್ತಮ ರೈ ಬೂಡಿಯಾರ್, ನರಿಮೊಗರುನಿನ ಹೊನ್ನಪ್ಪ ಪೂಜಾರಿ ಕೈಂದಾಡಿ, ಕಬಕದ ಸಾಬಾ ಕಬಕ, ಹಿರೇಬಂಡಾಡಿಯ ಗೀತಾ ದಾಸರಮೂಲೆ, ಅರಿಯಡ್ಕದ ಮೋನಪ್ಪ ಪೂಜಾರಿ, ಕೋಡಿಂಬಾಡಿಯ ಜಯಪ್ರಕಾಶ್ ಬದಿನಾರ್, ಉಪ್ಪಿನಂಗಡಿಯ ಅಬ್ದುಲ್ ರಹಿಮಾನ್ ಉಪ್ಪಿನಂಗಡಿ, ಮುಂಡೂರುನ ಬಾಬು ಕೆಮ್ಮಿಂಜೆ, ಕೊಳ್ತಿಗೆಯ ಪ್ರಮೋದ್ ಕೊಳ್ತಿಗೆ, ನೆಟ್ಟಣಿಗೆ ಮುಡ್ನೂರುನ ಶ್ರೀರಾಮ್ ಪಕಳ, ಪಾಣಾಜೆಯ ಮೈಮನುತುಲ್ ಮೆಹ್ರಾ, ಬಡಗನ್ನೂರಿನ ರವಿರಾಜ್ ಸಜಂಕಾಡಿ, ಅರಿಯಡ್ಕದ ದಿವ್ಯನಾಥ್ ಶೆಟ್ಟಿ, ನೆಟ್ಟಣಿಗೆ ಮುಡ್ನೂರಿನ ಇಬ್ರಾಹಿಂ ಪಳ್ಳತ್ತೂರು, ಕಾರ್ಯದರ್ಶಿಗಳಾಗಿ ಬೆಟ್ಟಂಪಾಡಿಯ ಮೊದು ಕುಂಞಿ, ಕೊಳ್ತಿಗೆಯ ಪವನ್ ದೊಡ್ಡಮನೆ, ಪಾಣಾಜೆಯ ನಾರಾಯಣ ನಾಯಕ್, ನೆಟ್ಟಣಿಗೆ ಮುಡ್ನೂರಿನ ರಾಮ ಮೇನಾಲ, ಕೆಯ್ಯೂರಿನ ಜಯಂತ ಕೆಂಗುಡೆಲು, ಬಲ್ನಾಡಿನ ಅಂಬ್ರೋಸ್ ಡಿ ಸೋಜ, ಮಹಾಲಿಂಗ ನಾಯ್ಕ, ಚಿತ್ರಾ ಕೆ.ಸಿ., ಅಸ್ಮಾ, ವಿಮಲ ಮಹಾಲಿಂಗ ನಾಯ್ಕ, ಜಯಂತಿ, ನಾಗಮ್ಮ ಬಾಲಕೃಷ್ಣ, ಸುಜಾತ, ಸುಂದರಿ ಒಳಮೊಗ್ರು, ಪ್ರತಿಭಾ ರೈ ನರಿಮೊಗರು, ಶಾರದಾ ಸದಸ್ಯರಾಗಿ ಲಲಿತ ಶೆಟ್ಟಿ, ಇಂದಿರಾ, ಸತೀಶ ಟಿ ಶೆಟ್ಟಿ, ಅಶ್ರಪ್ ಯು., ಶೀನಪ್ಪ ಒಳಮೊಗ್ರು, ಶೇಸಪ್ಪ, ಕಮಲ, ಕೃಷ್ಣಪ್ಪ ಬೊಳ್ಳಿಂಬಳ, ಬಟ್ಯಪ್ಪ ರೈ, ವಿನಿತಾ ಕೆ ವಿ., ಸಲ್ಮಾ, ಶಂಕರ ಮಾಡಂದೂರು, ನವೀನ್ ರೈ ಚೆಲ್ಯಡ್ಕ, ಸುಮಲತಾ, ರಾಮ ಮೇನಾಲರವರನ್ನು ಆಯ್ಕೆ ಮಾಡಲಾಯಿತು.

 

 

ಒಕ್ಕೂಟ ರಚನೆ ಹಾಗೂ ಅದರ ಉದ್ದೇಶಗಳನ್ನು ಮಾಹಿತಿ ನೀಡಿದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಕೇವಲ ಚುನಾವಣೆಗಾಗಿ ಸದಸ್ಯರ ಒಕ್ಕೂಟ ಮಾಡಲಾಗುವುದಿಲ್ಲ. ಪಕ್ಷದ ಸಂಘಟನೆ ನಿರಂತರವಾಗಿಡುವ ನಿಟ್ಟಿನಲ್ಲಿ ಒಕ್ಕೂಟ ರಚನೆ ಮಾಡಲಾಗುತ್ತಿದೆ. ಇದು ಜಿಲ್ಲೆಯಲ್ಲಿಯೇ ಪ್ರಥಮ ಸಂಘಟನೆಯಾಗಿದೆ. ಕಾರ್ಯಕರ್ತರೇ ಪಕ್ಷದ ಶಕ್ತಿ. ಸಂಘಟನೆಯ ಮೂಲಕ ಕಾರ್ಯಕರ್ತರಿಗೆ ಶಕ್ತಿ ತುಂಬುವುದು, ಒಗ್ಗಟ್ಟು ಪ್ರದರ್ಶನ ಮಾಡುವುದು, ಗ್ರಾಮೀಣ ಭಾಗದ ಜನರ ಸಮಸ್ಯಗಳಿಗೆ ಒಕ್ಕೂಟದ ಮೂಲಕ ಪರಿಹಾರ ಕಂಡುಕೊಳ್ಳುವ ಮೂಲಕ ಜನರ ಪ್ರೀತಿ ವಿಶ್ವಾಸಗಳಿಸಿವ ಮೂಲಕ ಪಕ್ಷಕ್ಕೆ ಒಕ್ಕೂಟದ ಮೂಲಕ ಶಕ್ತಿ ತುಂಬಲಾಗುವುದು. ತಾಲೂಕಿನ ಯಾವುದೇ ಪ್ರದೇಶದಲ್ಲಿಯೂ ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯದೇ ಇದ್ದ ಸಂದರ್ಭದಲ್ಲಿ ಒಕ್ಕೂಟದ ಮೂಲಕ ಹೋರಾಟ ನಡೆಸುವುದು, ಸರ್ವಾಧಿಕಾರ ನಡೆಸುವ ಆಡಳಿತ ಪಕ್ಷ ಹಾಗೂ ಅಧಿಕಾರಿಗಳಿಗೆ ಭಯ ಹುಟ್ಟಿಸುವುದು, ಅವರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯ ಒಕ್ಕೂಟದಿಂದ ನಡೆಯಲಿದೆ. ಇದಕ್ಕಾಗಿ ಒಕ್ಕೂಟದ ವಾಟ್ಸಪ್ ಗ್ರೂಪ್ ರಚಿಸಿಕೊಂಡು ವಿಚಾರ ವಿನಿಮಯ ಮಾಡಿಕೊಳ್ಳಲು ಸಹಕಾರ ನೀಡಲಾಗುವುದು ಎಂದು ಅವರು ತಿಳಿಸಿದರು.

ನಾಯಕರಿಂದಾಗಿ ಯಾರು ಗೆದ್ದ ಬಂದಿಲ್ಲ:
ಗ್ರಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಯಾರೂ ಕೂಡ ಪಕ್ಷದ ನಾಯಕರ ಶ್ರಮ, ಪ್ರೋತ್ಸಾಹದಿಂದ ಗೆಲುವು ಪಡೆದಿಲ್ಲ. ಪಕ್ಷದಿಂದ ಅಭ್ಯರ್ಥಿಗಳಿಗೆ ಆರ್ಥಿಕ ಸಹಕಾರವೂ, ಸಹಕಾರಗಳೂ ಅಭ್ಯಥಿಗಳಿಗೆ ದೊರೆತಿಲ್ಲ. ಸ್ಥಳೀಯ ನಾಯಕರ ಶ್ರಮದಲ್ಲಿ ಬೆಂಬಲದಿಂದಾಗಿ ಎಲ್ಲಾ ಗ್ರಾ.ಪಂಗಳಲ್ಲಿಯೂ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದಾಗಿ ಕಾವು ಹೇಮನಾಥ ಶೆಟ್ಟಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿ.ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ, ಗ್ರಾ.ಪಂ ಚುನಾವಣೆಯಲ್ಲಿ ತಾಲೂಕಿನ ೨೨ ಗ್ರಾ.ಪಂಗಳ ಪೈಕಿ ಕೊಳ್ತಿಗೆ ಹಾಗೂ ನೆಟ್ಟಣಿಗೆ ಮುಡ್ನೂರುಗಳಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆದುಕೊಂಡಿದೆ. ಅಧಿಕಾರ ಇಲ್ಲದಿದ್ದರೆ ನಮ್ಮ ವಾರ್ಡ್‌ನ ಜನರ ಬೇಡಿಕೆಗಳಿಗೆ ಸ್ಪಂಧನೆ ನೀಡುವುದು ಅಸಾಧ್ಯ. ಹೀಗಾಗಿ ಪಕ್ಷ ಸಂಘಟನೆ ಆಗಬೇಕು. ಗ್ರಾ.ಪಂ, ತಾ.ಪಂ ಗಳಿಗೆ ಬರುವ ಅನುದಾನ ಸಮಾನವಾಗಿ ಹಂಚಿಕೆಯಾಗಬೇಕು. ಪಕ್ಷಕ್ಕೆ ಬಹಳಷ್ಟು ಮಂದಿ ಸದಸ್ಯರನ್ನು ಸೇರ್ಪಡೆಗೊಳಿಸುವ ಮೂಲಕ ಮುಂಬರುವ ತಾ.ಪಂ, ಜಿ.ಪಂ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗಳಿಸುವಲ್ಲಿ ಸಂಘಟಿತರಾಗಬೇಕು ಎಂದು ಹೇಳಿದ ಅವರು, ಜಲ ಜೀವನ್ ಮಿಷನ್ ಯೋಜನೆಯು ಜಿ.ಪಂಗೆ ಸಂಬಂಧಿಸಿದ್ದು. ಇದರ ಅನುಷ್ಠಾನವು ಜಿ.ಪಂ ಸದಸ್ಯರ ಮುಖಾಂತರ ನಡೆಯಬೇಕಿದೆ. ಆದರೂ ಶಾಸಕರು ಎಲ್ಲಾ ವಿಷಯಗಳಲ್ಲಿಯೂ ಕೈ ಹಾಕುತ್ತಿದ್ದು ಅರಿಯಡ್ಕದಲ್ಲಿ ನಡೆದ ಬಿಜೆಪಿ ಪಕ್ಷದ ಮುಖಂಡರನ್ನು ಸೇರಿಸಿಕೊಂಡು ಶಿಲಾನ್ಯಾಸ ನೆರೆವೇರಿಸಿದರುವುದಾಗಿ ಅನಿತಾ ಹೇಮನಾಥ ಶೆಟ್ಟಿ ಆರೋಪಿಸಿದರು.

ತಾ.ಪಂ ಸದಸ್ಯ ರಾಮ ಪಾಂಬಾರು ಮಾತನಾಡಿ, ಕಳೆದ ಅವಧಿಯ ಗ್ರಾ.ಪಂ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯವರು ಕೊಳ್ತಿಗೆಯನ್ನು ರಾಮರಾಮ್ಯ ಮಾಡುವ ಆಶ್ವಾಸನೆ ನೀಡಿ ಅಧಿಕಾರ ಪಡೆದಿದ್ದರು. ಆದರೆ ಗೆದ್ದ ಬಳಿಕ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಜನರ ಟೀಕೆಗೆ ಗುರಿಯಾಗಿದ್ದರು. ಜನ ಕಾಂಗ್ರೆಸ್‌ನ ಆಡಳಿತವನ್ನು ಮೆಚ್ಚಿಕೊಂಡಿದ್ದು ಅಲ್ಲಿ ಮತ್ತೆ ಕಾಂಗ್ರೆಸ್ ಆಡಳಿತಕ್ಕೆ ಬಂದಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಫಝಲ್ ರಹೀಮ್ ಮಾತನಾಡಿ, ಗ್ರಾ.ಪಂ ಸದಸ್ಯರು ಜನರ ನಿಕಟವರ್ತಿಗಳು. ಅವರಿಗೆ ಗ್ರಾಮ ಎಲ್ಲಾ ಆಗು ಹೋಗುಗಳ ಅರಿವಿರುತ್ತದೆ. ಒಕ್ಕೂಟದಲ್ಲಿ ಗೆದ್ದವರು ಹಾಗೂ ಸೋತವರನ್ನು ಸೇರಿಕೊಂಡಾಗ ಹೆಚ್ಚು ವಿಶ್ವಾಸ ಪಡೆದುಕೊಂಡು ಒಕ್ಕೂಟವು ಸದೃಡವಾಗಿ ಬೆಳೆಯಲು ಸಾಧ್ಯ ಎಂದು ಸಲಹೆ ನೀಡಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಮಾತನಾಡಿ, ವಾರ್ಡ್‌ಗಳಲ್ಲಿ ಉತ್ತಮ ಕೆಲಸ ಕಾರ್ಯಗಳಿಂದ ಮತ ಪಡೆಯಲು ಸಾಧ್ಯವಿಲ್ಲ. ಎಲ್ಲರನ್ನು ಪ್ರೀತಿ, ವಿಶ್ವಾಸ ಗಳಿಸುವ ಮೂಲಕ ಸಂಘಟಿತರಾಗಬೇಕು. ಕಾರ್ಯಕರ್ತರಲ್ಲಿ ಛಲ, ತಾಳ್ಮೆ ಪ್ರಮುಖವಾಗಿರಬೇಕು. ಗ್ರಾಮೀಣ ಜನರ ಸಮಸ್ಯೆಗಳಿಗೆ ಧ್ವನಿಯಾದಾಗ ಪಕ್ಷಕ್ಕೆ ಹೆಚ್ಚು ಶಕ್ತಿ ಬರಲು ಸಾಧ್ಯ ಎಂದರು.

ಒಕ್ಕೂಟದ ಅಧ್ಯಕ್ಷ ಜೆ.ಕೆ ವಸಂತ ರೈ ಹಾಗೂ ಕಾರ್ಯದರ್ಶಿ ಕಮಲೇಶ್ ಮಾತನಾಡಿ, ಒಕ್ಕೂಟದಿಂದ ಮುಂದಿನ ದಿನಗಳಲ್ಲಿ ಕೈಗೊಳ್ಳುವ ಕಾರ್ಯಕ್ರಮಗಳಿಗೆ ಪಕ್ಷದ ಪ್ರತಿಯೊಬ್ಬರು ಸಹಕರಿಸುವಂತೆ ಮನವಿ ಮಾಡಿದರು.

ತಾ.ಪಂ ಸದಸ್ಯ ಪರಮೇಶ್ವರ ಭಂಡಾರಿ, ಫೌಝಿಯಾ ಇಬ್ರಾಹಿಂ, ಕಾಂಗ್ರೆಸ್ ಜಿಲ್ಲಾ ಕಿಸಾನ್ ಘಟಕದ ಉಪಾಧ್ಯಕ್ಷ ಎ.ಕೆ ಜಯರಾಮ ರೈ, ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿ ಸೋಜ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ , ಎನ್.ಎಸ್.ಯು.ಐ ತಾಲೂಕು ಅಧ್ಯಕ್ಷ ಕೌಶಿಕ್ ಗೌಡ, ತಾಲೂಕು ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಉಪ್ಪಿನಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿ.ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಸ್ವಾಗತಿಸಿದರು. ಕಾಂಗ್ರೆಸ್ ಮುಖಂಡ ಇಸಾಖ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಘೋಷಣೆ ಮಾಡಿದರು. ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳನ್ನು ಶಾಲು ಹಾಕಿ ಗೌರವಿಸಲಾಯಿತು.

ನಗರ ಸಭಾ ಮಾಜಿ ಅಧ್ಯಕ್ಷ ವಾಣಿ ಶ್ರೀಧರ್, ನಗರ ಸಭಾ ಮಾಜಿ ಸದಸ್ಯ ಅನ್ವರ್ ಖಾಸಿಂ, ಲ್ಯಾನ್ಸಿ ಮಸ್ಕರೇನಸ್, ಹಿಂದುಳಿದ ವರ್ಗ ಘಟಕದ ರೋಷಣ್, ನಗರ ಸಭಾ ಸದಸ್ಯ ರಾಬಿನ್ ತಾವ್ರೋ, ಎನ್.ಎಸ್.ಯು.ಐ ರಾಜ್ಯ ಕಾರ್ಯದರ್ಶಿ ಫಾರೂಕ್ ಬಯಬೆ, ಮಹಮ್ಮದ್ ಕಂಚಿಲ್‌ಕುಂಜ, ೩೪ ನೆಕಿಲಾಡಿ ಗ್ರಾ.ಪಂ ಮಾಜಿ ಅಸ್ಕರ್ ಅಲಿ ಸೇರಿದಂತೆ ಹಲವು ಮಂದಿ ಗ್ರಾ.ಪಂ ಸದಸ್ಯರು ಹಾಗೂ ಪಕ್ಷದ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.