HomePage_Banner
HomePage_Banner
HomePage_Banner
HomePage_Banner

ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ-ಪಂಗಡದ ಪುರುಷರ/ಮಹಿಳೆಯರ ಕ್ರೀಡಾಕೂಟ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸಂವಿಧಾನವನ್ನು ರಚಿಸಿ ಮೇಲ್ಪಂಕ್ತಿ ಹಾಕಿಕೊಟ್ಟವರು ಅಂಬೇಡ್ಕರ್‌ರವರು-ಎನ್.ರವೀಂದ್ರ ಶೆಟ್ಟಿ

ಪುತ್ತೂರು: ಸಂವಿಧಾನ ಶಿಲ್ಪಿ ಅಂಬೇಡ್ಕರ್‌ರವರು ಪರಿಶಿಷ್ಟ ಜಾತಿ ಪಂಗಡದ ಉನ್ನತಿಗೆ ಶ್ರಮಿಸಿದವರು. ಸಂವಿಧಾನವನ್ನು ರಚಿಸಿ ಭಾರತ ದೇಶಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟವರು ಡಾ.ಅಂಬೇಡ್ಕರ್‌ರವರಾಗಿದ್ದಾರೆ ಎಂದು ಸಂಪ್ಯ ಶ್ರಿ ವಿಷ್ಣುಮೂರ್ತಿ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು ಹೇಳಿದರು.

ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್‌ನ ಸ್ಥಾಪಕ ಜಿಲ್ಲಾಧ್ಯಕ್ಷರಾದ ರಾಜು ಹೊಸ್ಮಠರವರ ಸಾರಥ್ಯದಲ್ಲಿ ದ.ಕ ಜಿಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್, ಪುತ್ತೂರು, ಆಶ್ರಯದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|ಬಿ.ಆರ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನಾಚರಣೆಯ ಪ್ರಯುಕ್ತ ಏ.೧೧ ರಂದು ಪುತ್ತೂರು(ನೆಲ್ಲಿಕಟ್ಟೆ) ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜರಗಿದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಪುರುಷರಿಗೆ ಹಾಗೂ ಮಹಿಳೆಯರಿಗೆ ಕ್ರೀಡಾಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಪ್ರತಿಯೊಬ್ಬ ಪ್ರಜೆಯು ಸಮನಾಗಿ ಬದುಕಬೇಕು ಎನ್ನುವ ನಿಟ್ಟಿನಲ್ಲಿ ಭಾರತದಲ್ಲಿ ಅಂಬೇಡ್ಕರ್‌ರವರು ಸಂವಿಧಾನವನ್ನು ರಚಿಸುದುದಾಗಿದೆ. ಕನ್ನಡ ಟಿ.ವಿ ಚಾನೆಲ್‌ಗಳಲ್ಲಿ ಡಾ.ಅಂಬೇಡ್ಕರ್‌ರವರ ಜೀವನಾಧಾರಿತ ಕಥೆಯು ಪ್ರಸಾರಗೊಳ್ಳುತ್ತಿರುವುದು ವಿಶೇಷವಾಗಿದೆ ಎಂದರು.

ಕ್ರೀಡಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಭ್ರಷ್ಟಾಚಾರ ನಿಗ್ರಹ ಅಪರಾಧ ತಡೆ ವಿಭಾಗದ ಜಿಲ್ಲಾಧ್ಯಕ್ಷ ಪ್ರಶಾಂತ್ ರೈ ಮರುವಂಜರವರು, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್‌ರವರ ಮಾರ್ಗದರ್ಶನದಲ್ಲಿ ನಾವೆಲ್ಲಾ ನಡೆಯಬೇಕು ಎಂದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷರಾದ ಹೇಮಂತ್ ಆರ್ಲಪದವುರವರು ವಹಿಸಿದ್ದರು. ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್‌ನ ಸ್ಥಾಪಕ ಜಿಲ್ಲಾಧ್ಯಕ್ಷರಾದ ರಾಜು ಹೊಸ್ಮಠರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ದಲಿತ ಮುಖಂಡರಾದ ಕೆ.ಪಿ ಆನಂದ ಪಡುಬೆಟ್ಟು(ನೆಲ್ಯಾಡಿ)ರವರು ಬಾಬಾ ಸಾಹೇಬ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ದರು. ವೇದಿಕೆಯಲ್ಲಿ ಅಬೂಬಕ್ಕರ್ ಮಲಾರ್, ಕೇಶವ ಪಡೀಲ್, ಪ್ರವೀಣ ರೈ ಮರುವಂಜ, ಜಗದೀಶ ಕಜೆ, ಶಾಂತಪ್ಪ ನರಿಮೊಗರು, ಸುರೇಶ್ ನಿಡ್ಪಳ್ಳಿ, ರವಿ ಕಾರೆಕ್ಕಾಡ್, ವಸಂತ ಪಟ್ಟೆರವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಪುರುಷರಿಗೆ ಮತ್ತು ಮಹಿಳೆಯರಿಗೆ ಕ್ರೀಡಾಕೂಟ ನಡೆಯಿತು. ಕಬಡ್ಡಿ ಪಂದ್ಯಾಟದ ಅಂಪೈರುಗಳಾಗಿ ತಾಲೂಕು ಅಮೆಚೂರು ಅಸೋಸಿಯೇಶನ್‌ನ ಸದಸ್ಯರು ನಡೆಸಿಕೊಟ್ಟರು. ಸಾಗರ್ ಬೆಳ್ಳಾರೆ ಹಾಗೂ ಧನುಷ್ ಸೆರ್ಕಳ ನಿರೂಪಣೆ ಮಾಡಿದರು. ಚಂದ್ರ ನೆಹರುನಗರ, ರಮೇಶ್ ಸಾಲೆತ್ತೂರು, ಉಮೇಶ್ ನಿಡ್ಪಳ್ಳಿ, ಸಂಕಪ್ಪ ನಿಡ್ಪಳ್ಳಿ, ಹರೀಶ್ ಬೆಳ್ಳಾರೆ, ಸುರೇಶ್ ಕೋಡಿಯಾಡಿ, ಭಾರ್ಗವಿ ಕಾಣಿಯೂರುರವರು ಸಹಕರಿಸಿದರು. ಸುಂದರ್ ಕೇಪುಳು, ರವಿಚಂದ್ರ ಪಡುಬೆಟ್ಟು, ಗೋಪಾಲಕೃಷ್ಣ ಮಂಗಳೂರು, ಹರೀಶ್ ಕೊಕ್ಕಡ, ಕೊರಗಪ್ಪ ಈಶ್ವರಮಂಗಲರವರು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹರೀಶ್ ಬೆಳ್ಳಾರೆ ವಂದಿಸಿದರು.

ಬಹುಮಾನಗಳು…
ಪುರುಷರ ಕಬಡ್ಡಿ ಕ್ರೀಡಾಕೂಟಕ್ಕೆ ಪ್ರಥಮ ರೂ.೭೭೭೭, ದ್ವಿತೀಯ ರೂ.೫೫೫೫ ಬಹುಮಾನ ನೀಡಲಾಗುತ್ತಿದ್ದು, ಪ್ರಥಮ, ದ್ವಿತೀಯ ವಿಜೇತರು ಸೇರಿದಂತೆ ತೃತೀಯ, ಚತುರ್ಥ ಸ್ಥಾನಿಗಳಿಗೂ ವಿಶ್ವ ಮಾನವ ಡಾ|ಬಿ.ಆರ್ ಅಂಬೇಡ್ಕರ್ ಜೈ ಭೀಮ್ ಟ್ರೋಫಿಯನ್ನು, ಪುರುಷರ ಲೆವೆಲ್ ಮಾದರಿ(೧೦ ಜನ) ಹಗ್ಗ ಜಗ್ಗಾಟದಲ್ಲಿ ಪ್ರಥಮ ರೂ.೫೦೦೧, ದ್ವಿತೀಯ ರೂ.೩೦೦೧ ಹಾಗೂ ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ಪ್ರಥಮ ರೂ.೩೦೦೧, ದ್ವಿತೀಯ ರೂ.೧೫೦೦ ಬಹುಮಾನದೊಂದಿಗೆ ವಿಶ್ವ ಮಾನವ ಡಾ|ಬಿ.ಆರ್ ಅಂಬೇಡ್ಕರ್ ಜೈ ಭೀಮ್ ಟ್ರೋಫಿಯನ್ನು ನೀಡಲಾಯಿತು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.