HomePage_Banner
HomePage_Banner
HomePage_Banner
HomePage_Banner

ಡೊನ್ ಬೊಸ್ಕೊ ಕ್ಲಬ್ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷ:ಫೆಬಿಯನ್ ಗೋವಿಯಸ್,ಕಾರ್ಯದರ್ಶಿ:ಜೋನ್ ಕುಟಿನ್ಹಾ,ಕೋಶಾಧಿಕಾರಿ:ರೊನಾಲ್ಡ್ ಮೊಂತೇರೋ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯ ಡೊನ್ ಬೊಸ್ಕೊ ಕ್ಲಬ್‌ನ ೨೦೨೧-೨೨ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ಕ್ಲಬ್‌ನ ಸಭಾಂಗಣದಲ್ಲಿ ನೆರವೇರಿತು.

ನೂತನ ಅಧ್ಯಕ್ಷರಾಗಿ ಫೆಬಿಯನ್ ಗೋವಿಯಸ್ ದರ್ಬೆ, ಕಾರ್ಯದರ್ಶಿಯಾಗಿ ಜೋನ್ ಕುಟಿನ್ಹಾ ಹಾರಾಡಿ, ಕೋಶಾಧಿಕಾರಿಯಾಗಿ ಗಿಲ್ಬರ್ಟ್ ರೊನಾಲ್ಡ್ ಮೊಂತೇರೊ ಮೊಟ್ಟೆತ್ತಡ್ಕ, ಉಪಾಧ್ಯಕ್ಷರಾಗಿ ಸಿಲ್ವೆಸ್ತರ್ ಡಿ’ಸೋಜ ಕೂರ್ನಡ್ಕ, ಜೊತೆ ಕಾರ್ಯದರ್ಶಿಯಾಗಿ ರೋಯ್ಸ್ ಪಿಂಟೋ ದರ್ಬೆ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರೋಹನ್ ಡಾಯಸ್ ಕಲ್ಲಿಮಾರುರವರು ಆಯ್ಕೆಯಾಗಿದ್ದಾರೆ. ಉಳಿದಂತೆ ಸಮಿತಿಯ ಸದಸ್ಯರುಗಳಾಗಿ ನಿಕಟಪೂರ್ವ ಅಧ್ಯಕ್ಷ ಅರುಣ್ ರೆಬೆಲ್ಲೋ ದರ್ಬೆ, ಜೋನ್ ಪೀಟರ್(ವಲ್ಲು) ಡಿ’ಸಿಲ್ವ ಕಲ್ಲಾರೆ, ಅರುಣ್ ಪಿಂಟೋ ಸಾಮೆತ್ತಡ್ಕ, ಕ್ಲೆಮೆಂಟ್ ಪಿಂಟೋ ಮುಕ್ರಂಪಾಡಿ, ವಿಶಾಲ್ ಮೊಂತೇರೋ ಮೊಟ್ಟೆತ್ತಡ್ಕ, ಸುನಿಲ್ ಮಸ್ಕರೇನ್ಹಸ್ ಪರ್ಲಡ್ಕ, ರಿಚರ್ಡ್ ಪಿಂಟೋ ಸಾಮೆತ್ತಡ್ಕ, ರೋಶನ್ ಡಾಯಸ್ ಬಪ್ಪಳಿಗೆ, ಬೊನಿಫಾಸ್ ಡಿ’ಸೋಜ ಪದವು, ಬ್ಯಾಪ್ಟಿಸ್ಟ್ ರೊಡ್ರಿಗಸ್ ಮುರ, ಪ್ರಕಾಶ್ ಸಿಕ್ವೇರಾ ಚಿಕ್ಕಪುತ್ತೂರು, ಆಲ್ಫೋನ್ಸ್ ಡಿ’ಸೋಜ ರೋಟರಿಪುರ, ವರ್ಗೀಸ್ ಡಾಯಸ್ ರೋಟರಿಪುರ, ಪುತ್ತೂರ್‍ಚೆ ನೆಕೆತ್ರ್ ಪತ್ರಿಕೆಯ ಸಂಪಾದಕ ಪ್ರೊ|ಜೋನ್ ಬಿ.ಸಿಕ್ವೇರಾ, ಕ್ಲಬ್ ಹೌಸಿಂಗ್ ಪ್ರಾಜೆಕ್ಟ್ ಕಾರ್ಯದರ್ಶಿ ಜ್ಯೋ ಡಿ’ಸೋಜ ಚಿಕ್ಕಪುತ್ತೂರುರವರು ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾದ ಉದ್ಯಮಿ ಫೆಬಿಯನ್ ಗೋವಿಯಸ್‌ರವರು ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಪ್ರಸ್ತುತ ಕಾರ್ಯದರ್ಶಿಯಾಗಿ, ಸಂತ ವಿನ್ಸೆಂಟ್ ದೇ ಪಾವ್ಲ್ ಸಭಾದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾರ್ಯದರ್ಶಿಯಾಗಿ ಆಯ್ಕೆಯಾದ ಜೋನ್ ಕುಟಿನ್ಹಾರವರು ಜಿ.ಎಲ್ ಆಚಾರ್ಯ ಎದುರಿನ ಸೋಜಾ ಮೆಟಲ್ಸ್ ಇದರ ಮಾಲಕರಾಗಿ, ಡೊನ್ ಬೊಸ್ಕೊ ಕ್ಲಬ್‌ನ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೋಶಾಧಿಕಾರಿಯಾಗಿ ಆಯ್ಕೆಯಾದ ಗಿಲ್ಬರ್ಟ್ ರೊನಾಲ್ಡ್ ಮೊಂತೇರೋರವರು ಮಾಯಿದೆ ದೇವುಸ್ ಚರ್ಚ್‌ನ ಮೊಟ್ಟೆತ್ತಡ್ಕ ವಾಳೆಯ ಪ್ರತಿನಿಧಿಯಾಗಿ, ಪ್ರಸ್ತುತ ಎಪಿಎಂಸಿ ರಸ್ತೆಯ ಡಾಯಸ್ ಕಾಂಪ್ಲೆಕ್ಸ್‌ನಲ್ಲಿ ಜಿ.ಆರ್ ಪ್ಲಾಸ್ಟಿಕ್ಸ್ ಸಂಸ್ಥೆಯನ್ನು ಮುನ್ನೆಡೆಸುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.