HomePage_Banner
HomePage_Banner
HomePage_Banner
HomePage_Banner

ಪ್ರೇಮ ಬೇಕರಿ ಮಾಲಕ ಕೆ.ಎಂ ವಾಸು ಹೃದಯಾಘಾತದಿಂದ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಸುಮಾರು 50 ವರ್ಷಗಳಿಂದ ಬೇಕರಿ ಉದ್ಯಮದಲ್ಲಿ ಚಿರಪರಿಚಿತರಾಗಿರುವ ಪುತ್ತೂರು ಪ್ರೇಮಾ ಬೇಕರಿ ಮಾಲಕ ಕೆ.ಎಂ.ವಾಸು(78ವ) ಅವರು ಎ.13 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕೇರಳದ ತಳಚ್ಚೇರಿ ಮೂಲದವರಾದ ಕೆ.ಎಂ ವಾಸು ಅವರು ಅಲ್ಲಿ ತಮ್ಮ ನಿವಾಸದಲ್ಲಿ ನಿಧನರಾದರು. ಪುತ್ತೂರಿನ ಪರ್ಲಡ್ಕದಲ್ಲಿ ಆರಂಭದಲ್ಲಿ ವಿನೋದ್ ಬೇಕರಿಯಿಂದ ಉದ್ಯಮ ಆರಂಭಿಸಿದ ಅವರು ಬಳಿಕ ದರ್ಬೆಯಲ್ಲಿ ಪ್ರೇಮ ಬೇಕರಿ ಆರಂಭಿಸಿದರು. ನಂತರದ ದಿನಗಳಲ್ಲಿ ಕೋರ್ಟ್ ರಸ್ತೆಯಲ್ಲಿ ಪ್ರೇಮಾ ಸ್ವೀಟ್ಸ್, ಪುತ್ತೂರು ಸುಬ್ರಹ್ಮಣ್ಯ ರಸ್ತೆಯ ದರ್ಬೆಯಲ್ಲಿ ಪ್ರೇಮಾ ಬೇಕರಿ ಸೇರಿದಂತೆ ಮೂರು ಶಾಖಾ ಸಂಸ್ಥೆಗಳನ್ನು‌ ಆರಂಭಿಸಿದರು. ಇತ್ತೀಚಿಗಿನ ದಿನಗಳಲ್ಲಿ ಅವರು ಬೇಕರಿ ಉದ್ಯಮದ ಜವಬ್ದಾರಿಯನ್ನು ಮಗನಿಗೆ ವಹಿಸಿ ತಮ್ಮ ಮೂಲ ಮನೆ ಕೇರಳದ ತಳಚ್ಚೇರಿಯಲ್ಲಿ ವಾಸ್ತವ್ಯ ಹೊಂದಿದ್ದರು. ಪುತ್ತೂರಿಗೆ ತಿಂಗಳಿಗೊಮ್ಮೆ ಬಂದು ಹೋಗುತ್ತಿದ್ದರು. ಮೃತರು ಪತ್ನಿ ರಾಧಾ, ಪುತ್ರ ವಿನೋದ್, ಪುತ್ರಿಯರಾದ ಸುರೇಖಾ, ಬಿಂಧು ಅವರನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.