ಕಡಬ ಜಾತ್ರೆ(ಕಡಬದ ಆಯಣ) ಕಂಟಕ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಕಡಬ ಜಾತ್ರೆ(ಕಡಬದ ಆಯಣ) ಗೆ  ಕಂಟಕ

ದೈವಗಳ ಆಡಳ್ತೆದಾರರೊಳಗಿನ ವಿವಾದ-ಫಲಿಸದ ಸಂಧಾನ
ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ ನಾಯಕ್ ರಾಜಿನಾಮೆ

ಕಡಬ: ಕಳೆದ 18 ವರ್ಷಗಳಿಂದ ನಡೆಯುತ್ತಿದ್ದ ಐತಿಹಾಸಿಕ ಕಡಬ ಶ್ರೀ ಕಡಂಬಳಿತ್ತಾಯ ಸಪರಿವಾರ ದೈವಗಳ ಜಾತ್ರೆ (ಕಡಬದ ಆಯನ)ಕ್ಕೆ ಕಂಟಕ ಬಂದಿದೆ, ಆದುದರಿಂದ ಏ.14ರಿಂದ ಕೊಡಿ ಏರಿ 9 ದಿನಗಳ ಕಾಲ ನಡೆಯಬೇಕಿದ್ದ ಜಾತ್ರೆ ಸ್ಥಗಿತವಾಗಿದೆ. ಇದರಿಂದ ಸಹಜವಾಗಿಯೇ ಕಡಬದ ಜನತೆಯಲ್ಲಿ ನಿರಾಸೆ ಮತ್ತು ಆತಂಕ ಮನೆ ಮಾಡಿದೆ.

ಕದಂಬ ಅರಸರು ಆಳಿದ ಕಡಬಕ್ಕೆ ಅದರದ್ದೆ ಆದ ಐತಿಹಾಸಿಕ ಹಿನ್ನಲೆಯಿದೆ, ಹಿಂದೆ ನಿಂತು ಹೋಗಿದ್ದ ಜಾತ್ರೆಗೆ 18 ವರ್ಷಗಳ ಹಿಂದೆ ಚಾಲನೆ ದೊರೆತು, ದೈವಗಳ ಮಾಡ ಜೀರ್ಣೋದ್ಧಾರ ಗೊಂಡು ಜಾತ್ರೆ ಪ್ರಾರಂಭವಾಗಿತ್ತು. ಕಡಂಬಳಿತ್ತಾಯ ಪುರುಷ ದೈವ ಸಪರಿವಾರ ದೈವಗಳ ಪ್ರಧಾನ ಆಡಳ್ತೆದಾರ ಕಡಬ ಗುತ್ತು ಮನೆತನದ ರಾಜೇಂದ್ರ ಹೆಗ್ಡೆ ಹಾಗೂ ಕಡಂಬಳಿತ್ತಾಯ ದೈವದ ಆಡಳ್ತೆದಾರ ಕುಕ್ಕೆರೆಬೆಟ್ಟು ಭಂಡಾರದ ಮನೆತನದವರ ನಡುವಿನ ಕೆಲವು ವಿಚಾರಗಳ ನಡುವೆ ಒಮ್ಮತ ಮೂಡದ ಹಿನ್ನಲೆಯಲ್ಲಿ ಜಾತ್ರೆಯನ್ನು ಕೈ ಬಿಡಲಾಗಿದೆ. ಜಾತ್ರೋತ್ಸವ ನಡೆಸುವ ಬಗ್ಗೆ ಜಾತ್ರೋತ್ಸವ ಸಮಿತಿ ಹಾಗೂ ಪ್ರಮುಖರು ಹಲವು ಸಂಧಾನಗಳ ಮೂಲಕ ಪ್ರಯತ್ನಪಟ್ಟಿದ್ದಾರೆ, ಆದರೆ ಇದಾವುದು ಕೈಗೂಡಲಿಲ್ಲ. ಈ ಹಿನ್ನಲೆಯಲ್ಲಿ ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ ನಾಯಕ್ ರಾಜಿನಾಮೆ ನೀಡಿದ್ದಾರೆ.

ಏನಿದು ವಿವಾದ?

ಕಡಬದ ಮಾಡಕ್ಕೆ ಜಾತ್ರೆಯ ಸಮಯದಲ್ಲಿ ಕೋಡಿಂಬಾಳ ಕುಕ್ಕೆರೆಬೆಟ್ಟುನಿಂದ ಶ್ರೀ ಕಡಂಬಳಿತ್ತಾಯ ಸ್ವಾಮಿಯ ಭಂಡಾರ ಬಂದು ಬಳಿಕ ಮಾಡದಲ್ಲಿ ಭಂಡಾರ ಏರುವುದು ಮತ್ತು ಅದೇ ಸಮಯದಲ್ಲಿ ಕಡಬ ಗುತ್ತು ಮನೆಯಿಂದ ಪುರುಷ ದೈವದ ಭಂಡಾರ ಬಂದು ಭಂಢಾರ ಏರುವುದು ವಾಡಿಕೆ,  ಆದರೆ ಈ ಬಾರಿ ವಿವಾದವೊಂದು ಎದ್ದಿದೆ. ಅದೆನೆಂದರೆ ಕುಕ್ಕೆರೆಬೆಟ್ಟು ಮನೆತನದ ದೈವಕ್ಕೆ ಪ್ರಧಾನ ಆಡಳ್ತೆದಾರರಿಂದ ಸರಿಯಾದ ಗೌರವ ಸಿಗುತ್ತಿಲ್ಲ, ಅಲ್ಲದೆ ಕಡಬ ಮಾಡದಲ್ಲಿ ಶ್ರೀ ಕಡಂಬಳಿತ್ತಾಯ ಸ್ವಾಮಿಯ ಗುಡಿಯಲ್ಲಿ ಶುದ್ಧಿ ಕಲಶ ಆಗಬೇಕು, ಇದು ಕಡಬಂಬಳಿತ್ತಾಯ ಸ್ವಾಮಿಯ ಧಾರ್ಮಿಕ ವಿಧಿಗಳನ್ನು ಪೂರೈಸುತ್ತಿರುವ ದೈವಜ್ಞ ಕೆ. ಪ್ರಸಾದ್ ಕೆದಿಲಾಯ ಅವರಿಂದಲೇ ಆಗಬೇಕು, ಮಾಡದಲ್ಲಿಯೇ ಅಷ್ಟಮಂಗಲ ಪ್ರಶ್ನೆ ಇರಿಸಿ ಪ್ರಶ್ನೆಗಳು ಕಂಡು ಬಂದಂತೆ ಸರಿಯಾದ ವ್ಯವಸ್ಥೆಗಳು ಆಗಬೇಕು, ಬಳಿಕವೇ ನಾವು ಭಂಡಾರ ತರುವುದು ಎಂದು ಕುಕ್ಕೆರೆಬೆಟ್ಟು ಮನೆತನದವರು ಪಟ್ಟು ಹಿಡಿದರೆ, ಇದಾವೂದಕ್ಕೂ ಪ್ರಧಾನ ಆಡಳ್ತೆದಾರ ರಾಜೇಂದ್ರ ಹೆಗ್ಡೆಯವರು ಒಪ್ಪುತ್ತಿಲ್ಲ, ಜಾತ್ರೆ ಸ್ಥಗಿತಕ್ಕೆ ರಾಜೇಂದ್ರ ಹೆಗ್ಡೆಯವರೇ ಕಾರಣ ಎಂದು ಕುಕ್ಕೆರೆಬೆಟ್ಟು ತಮ್ಮಯ್ಯ ನಾಕ್ ಹೇಳಿದರೆ, ಇದಕ್ಕೆ ರಾಜೇಂದ್ರ ಹೆಗ್ಡೆಯವರು ತಮ್ಮದೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾಡದಲ್ಲಿ ಬ್ರಾಹ್ಮಣ ವರ್ಗದವರು ಯಾವುದೇ ಧಾರ್ಮಿಕ ವಿಧಿ ನಡೆಸುವುದು ನಮ್ಮ ಕಟ್ಟುಕಟ್ಟಲೆಯಲ್ಲಿ ಇಲ್ಲ, ಶುದ್ದಿ ಕಲಶ ಆಗಬೇಕಿದ್ದರೂ ಕಟ್ಟಿದ ದೈವದ ನೇಮದಲ್ಲಿ ದೈವದ ನುಡಿ ಬಂದರೆ ಮಾತ್ರ ಅದರಂತೆ ನಡೆಯುತ್ತೇವೆ, ಮಾಡದಲ್ಲಿ ಪ್ರಶ್ನೆ ಇಡಲು ಸಮಯಾವಕಾಶದ ತೊಂದರೆ ಇದ್ದ ಹಿನ್ನಲೆಯಲ್ಲಿ ಕಡಬ ಗುತ್ತು ಮನೆಯಲ್ಲಿ ಪ್ರಶ್ನೆ ಚಿಂತನೆ ನಡೆಸಿದ್ದೇವೆ, ಇದರಲ್ಲಿ ಕಂಡು ಬಂದಂತೆ ನಡೆಯುತ್ತಿದ್ದೆವೆ, ಕುಕ್ಕೆರೆಬೆಟ್ಟು ಕುಟುಂಬಕ್ಕೆ ಪ್ರತ್ಯೇಕ ಹೇಳಿಕೆಯ ಅಗತ್ಯವಿಲ್ಲ ಯಾಕೆಂದರೆ ಆ ಮನೆತನದವರು ಸೇರಿಕೊಂಡು ಜಾತ್ರೆ, ನೇಮೋತ್ಸವಗಳು ನಡೆಯುತ್ತದೆ, ಮತ್ತು ಕಡಂಬಳಿತ್ತಾಯ ಸ್ವಾಮಿ, ಪುರುಷ ದೈವ ಸಪರಿವಾರ ದೈವಗಳ ನೇಮ ಹಾಗೂ ಕಡಬದ ಆಯನದ ಬಗ್ಗೆ ಕಡಬ ಗುತ್ತು ಮನೆತನದಿಂದ ಲೇ ನಿರ್ಧಾರವಾಗುತ್ತದೆ, ಇದರ ಆಡಳ್ತೆದಾರರು ಕಡಬ ಗುತ್ತು ಮನೆತನದವರೇ, ಇಲ್ಲಿ ಯಾರು ಮೂರನೇ ವ್ಯಕ್ತಿ ಮಧ್ಯಪ್ರವೇಶಿಸಿ ಹೊಸ ಕಟ್ಟುಪಾಡುಗಳನ್ನು ಹೇಳಿದರೆ ನಾವು ಒಪ್ಪಲು ಸಾಧ್ಯವಿಲ್ಲ, ಇಷ್ಟೆಲ್ಲ ಹಿಂದಿನಿಂದಲೂ ನಡೆಯುತ್ತಿದ್ದರೂ ಇದೀಗ ಹೊಸ ವಿವಾದಗಳು ಎದ್ದಿರುವುದಕ್ಕೆ ನಾವು ಕಾರಣರಲ್ಲ, ಇಲ್ಲಿ ಮೂರನೇ ವ್ಯಕ್ತಿಯ ಪ್ರವೇಶ ಆಗಿರುವುದೇ ಈ ಗೊಂದಲಗಳಿಗೆ ಕಾರಣ ಎಂದು ರಾಜೇಂದ್ರ ಹೆಗ್ಡೆಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ರಾಜಿನಾಮೆ! 

ಈ ಮಧ್ಯೆ ಜಾತ್ರೋತ್ಸವ ನಡೆಯುವುದಿಲ್ಲ ಎಂದು ತಿಳಿದ ಕೂಡಲೇ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಸಭೆ ಸೇರಿ ಜಾತ್ರೋತ್ಸವ ಸಮಿತಿಗೆ ರಾಜಿನಾಮೆ ನೀಡಿದ್ದಾರೆ. ಜಾತ್ರೆ ನಡೆಯಬೇಕೆನ್ನುವ ಬಗ್ಗೆ ನಾವು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇವೆ, ಆದರೆ ಇದು ಕೈಗೂಡಲಿಲ್ಲ, ಇನ್ನು ನಾನು ಈ ಸ್ಥಾನದಲ್ಲಿರುವುದು ಸರಿಯಲ್ಲ ಎಂದು ರಾಜಿನಾಮೆ ನೀಡುತ್ತಿದ್ದೆನೆ ಎಂದು ಅವರು ಹೇಳಿ ರಾಜಿನಾಮೆ ನೀಡಿದ್ದಾರೆ.

ಕಡಬ ಜಾತ್ರೆ ಆಗಬೇಕು, ಸ್ಥಗಿತ ನೋವಿನ ಸಂಗತಿ-ಸೀತಾರಾಮ ಗೌಡ

ಈ ಬಗ್ಗೆ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸೀತಾರಾಮ ಗೌಡ ಅವರು ಹೇಳಿಕೆ ನೀಡಿ, ಕಳೆದ 18 ವರ್ಷಗಳಿಂದ ನಡೆಯುತ್ತಿದ್ದ ಜಾತ್ರೆ ಕೆಲವು ಗೊಂದಲಗಳಿಂದ ಸ್ಥಗಿತವಾಗಿರುವುದು ನೋವಿನ ಸಂಗತಿ, ಇದರಿಂದ ಕಡಬ ಜನತೆಗೆ ನೋವು ಮತ್ತು ಆತಂಕ ಉಂಟಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆಗಳು ಪರಿಹಾರವಾಗುವಲ್ಲಿ ನಮ್ಮ ಪ್ರಯತ್ನ ಇದ್ದೆ ಇದೆ, ಮುಂದಿನ ಬಾರಿಯಾದರೂ ಸಮಸ್ಯೆ ಇತ್ಯರ್ಥ ಆಗಿ ಜಾತ್ರೆ ನಡೆಯಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಐತಿಹಾಸಿಕ ಕಡಬದ ಜಾತ್ರೆ ದೈವಗಳ ನೇಮೋತ್ಸವದ ವಿಚಾರದಲ್ಲಿ ಆಡಳ್ತೆದಾರರೊಳಗೆ ಗೊಂದಲಗಳಿಂದ ಸ್ಥಗಿತಗೊಂಡಿರುವುದು ಸತ್ಯ, ಈ ಜಾತ್ರೆ ಸ್ಥಗಿತವಾಗಿರುವುದು ಕಡಬದ ಜನತೆಗೆ ನೋವಿನ ಸಂಗತಿಯಾಗಿದೆ, ಇಲ್ಲಿ ಯಾರದ್ದು ಸರಿ ಅಥಾವ ತಪ್ಪು ಎನ್ನುವುದಕ್ಕಿಂತ ಸಮಸ್ಯೆಯನ್ನು ಸೌಹಾರ್ಧಯುತವಾಗಿ ಇತ್ಯರ್ಥಗೊಳಿಸಿ ಮುಂದಿನ ಬಾರಿಯಾದರೂ ಜಾತ್ರೆ ನಡೆಯಲಿ, ಇದರಿಂದ ಊರಿಗೆ ಸುಭೀಕ್ಷೆ ಉಂಟಾಗಲಿ ಎಂಬುದು ಭಕ್ತರ ಆಶಯ

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.